ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕ ಎಂ.ಆರ್‌. ಮಂಜುನಾಥ್‌ ಮಾಡಿದ್ದಾರೆ ಎಂಬ ಆರೋಪಕ್ಕೆ ಖುದ್ದು ಶಾಸಕರೇ ಪ್ರತಿಕ್ರಿಯಿಸಿದ್ದು, ‘ಅಡ್ಡ ಮತದಾನ ಸಾಬೀತಾದರೆ ಹೈಕಮಾಂಡ್‌ ಯಾವ ತೀರ್ಮಾನ ತೆಗೆದುಕೊಳ್ಳುವುದೋ, ಅದಕ್ಕೆ ಬದ್ಧ’ ಎಂದು ಸ್ಪಷ್ಟಪಡಿಸಿದ್ದಾರೆ.

 ಹನೂರು : ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕ ಎಂ.ಆರ್‌. ಮಂಜುನಾಥ್‌ ಮಾಡಿದ್ದಾರೆ ಎಂಬ ಆರೋಪಕ್ಕೆ ಖುದ್ದು ಶಾಸಕರೇ ಪ್ರತಿಕ್ರಿಯಿಸಿದ್ದು, ‘ಅಡ್ಡ ಮತದಾನ ಸಾಬೀತಾದರೆ ಹೈಕಮಾಂಡ್‌ ಯಾವ ತೀರ್ಮಾನ ತೆಗೆದುಕೊಳ್ಳುವುದೋ, ಅದಕ್ಕೆ ಬದ್ಧ’ ಎಂದು ಸ್ಪಷ್ಟಪಡಿಸಿದ್ದಾರೆ.

ಹನೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು

ಹನೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ಪಕ್ಷದ ನಿರ್ದೇಶನದಂತೆ ತಾವು ಕಾರ್ಯನಿರ್ವಹಿಸುತ್ತಿದ್ದು, ಹೈಕಮಾಂಡ್ ನೀಡುವ ಸೂಚನೆಗಳನ್ನು ಪಾಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಇದು ಕುಮಾರಣ್ಣನವರಿಗೂ ತಿಳಿದಿದೆ. ಅಡ್ಡಮತದಾನ ಮಾಡಿದ್ದಾರೆ ಎಂಬುದನ್ನು ಯಾರಾದರೂ ಸಾಬೀತುಪಡಿಸಿದರೆ, ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದನ್ನು ಸ್ವೀಕರಿಸುತ್ತೇನೆ.

ಕೇವಲ ನನಗೆ ಮಾತ್ರವಲ್ಲ, ಪಕ್ಷದ ಎಲ್ಲಾ 18 ಸದಸ್ಯರಿಗೂ ಅನ್ವಯ

ಈ ವಿಚಾರ ಕೇವಲ ನನಗೆ ಮಾತ್ರವಲ್ಲ, ಪಕ್ಷದ ಎಲ್ಲಾ 18 ಸದಸ್ಯರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು. ತಪ್ಪಿತಸ್ಥರ ವಿರುದ್ಧ ಪಕ್ಷ ಕ್ರಮ ಕೈಗೊಂಡರೆ ನಮಗೂ ಸಂತೋಷ ಎಂದು ಅವರು ಹೇಳಿದರು.