2 ತಾಸು ಕೈಕೊಟ್ಟ ಏರ್‌ಟೆಲ್‌ ನೆಟ್‌ವರ್ಕ್‌ - ಇಂಟರ್‌ನೆಟ್‌ ವ್ಯತ್ಯಯ ; ಬಳಕೆದಾರರ ತೀವ್ರ ಆಕ್ರೋಶ

| N/A | Published : Mar 06 2025, 01:31 AM IST / Updated: Mar 06 2025, 05:25 AM IST

ಸಾರಾಂಶ

ಏರ್‌ಟೆಲ್‌ ನೆಟ್‌ವರ್ಕ್‌ ಕೈಕೊಟ್ಟು ಕರೆ, ಸಂದೇಶ ಹಾಗೂ ಇಂಟರ್‌ನೆಟ್‌ ವ್ಯತ್ಯಯವಾಗಿ ಎರಡೂ ಗಂಟೆಗಳಿಗೂ ಹೆಚ್ಚಿನ ಕಾಲ ಬಳಕೆದಾರರು ಪರದಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

 ಬೆಂಗಳೂರು :  ಏರ್‌ಟೆಲ್‌ ನೆಟ್‌ವರ್ಕ್‌ ಕೈಕೊಟ್ಟು ಕರೆ, ಸಂದೇಶ ಹಾಗೂ ಇಂಟರ್‌ನೆಟ್‌ ವ್ಯತ್ಯಯವಾಗಿ ಎರಡೂ ಗಂಟೆಗಳಿಗೂ ಹೆಚ್ಚಿನ ಕಾಲ ಬಳಕೆದಾರರು ಪರದಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲೆಡೆ ಈ ಸಮಸ್ಯೆ ಕಂಡುಬಂದಿದ್ದು, ಏರ್‌ಟೆಲ್‌ ಗ್ರಾಹಕರು ‘ಎಕ್ಸ್‌’ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು.

ರಾತ್ರಿ 8.45ರ ಬಳಿಕ ಏರ್‌ಟೆಲ್‌ ನೆಟ್‌ವರ್ಕ್‌ ಕೆಲಸ ಮಾಡಲಿಲ್ಲ. 9.45ವರೆಗೂ ಈ ಸಮಸ್ಯೆ ಮುಂದುವರಿದಿತ್ತು. ಕಾಲ್‌ ಡ್ರಾಪ್‌, ಕಾಲ್‌ ಫೇಲ್ಯೂರ್ ಜೊತೆಗೆ ಡೆಟಾ ಬಳಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕಚೇರಿ, ಮನೆಗಳಲ್ಲಿ ನೆಟ್‌ವರ್ಕ್‌ ಇಲ್ಲದೆ ಕೆಲಸ ಕಾರ್ಯಗಳಿಗೆ ತೊಂದರೆಯಾಯಿತು. ಏರ್‌ಟೆಲ್‌ ಕೇರ್‌ ‘ಎಕ್ಸ್‌’ ಮೂಲಕ ಗ್ರಾಹಕರಲ್ಲಿ ವಿಷಾದ ವ್ಯಕ್ತಪಡಿಸಿ ಮೊಬೈಲ್‌ ಸಂಖ್ಯೆ ನೀಡಿದಲ್ಲಿ ನೆರವು ನೀಡುವುದಾಗಿ ಹೇಳಿತು. ಆದರೂ ಜನರು ಅಸಮಾಧಾನ ತೋಡಿಕೊಂಡರು.