ಸಾರಾಂಶ
ಬಿ.ಕೆ.ಮೀನಾಕ್ಷಿ ಅವರ ‘ಸದಾ ನಿಮ್ಮೊಂದಿಗೆ’ ಕೃತಿಯು ವ್ಯಕ್ತಿ ಚಿತ್ರಣ, ಪುಸ್ತಕ ಪರಿಚಯ ಹಾಗೂ ಲೇಖನಗಳ ಸಮ್ಮಿಶ್ರಣವಾಗಿದೆ.
ಮೈಸೂರು : ಬಿ.ಕೆ.ಮೀನಾಕ್ಷಿ ಅವರ ‘ಸದಾ ನಿಮ್ಮೊಂದಿಗೆ’ ಕೃತಿಯು ವ್ಯಕ್ತಿ ಚಿತ್ರಣ, ಪುಸ್ತಕ ಪರಿಚಯ ಹಾಗೂ ಲೇಖನಗಳ ಸಮ್ಮಿಶ್ರಣವಾಗಿದೆ.
ವ್ಯಕ್ತಿ ಚಿತ್ರಣ ವಿಭಾಗದಲ್ಲಿ ಮೀನಾಕ್ಷಿ ಅವರು ಆರಂಭದಲ್ಲಿ ತಮಗೆ ಪ್ರೌಢಶಾಲೆಯಲ್ಲಿ ಶಿಕ್ಷಕಿಯರಾಗಿದ್ದ ಕಮಲಮ್ಮ, ಪದ್ಮಾ ಪದಕಿ, ಸೀತಮ್ಮ, ಅರುಂಧತಿ ಅವರ ಬಗ್ಗೆ ಅತ್ಯಂತ ಪ್ರೀತಿ, ಗೌರವದ ಜೊತೆಗೆ ಆಪ್ತವಾಗಿ ಬರೆದಿದ್ದಾರೆ. ನಂತರ ಡಾ.ವೈ.ಡಿ. ರಾಜಣ್ಣ, ಹಿರೇಮಗಳೂರು ಕಣ್ಣನ್, ರಂಗನಾಥ್ ಮೈಸೂರು, ಎಂ.ನೀಲಾಂಬಿಕೆ, ಅಂಬಾಮಣಿ, ಕೆ.ಎಸ್. ನಿಸಾರ್ ಅಹಮದ್, ಸಿಪಿಕೆ, ದಾಳೇಗೌಡ, ಕೆ. ಸೇತುರಾಂ, ಪ್ರೊ.ಕೆ. ಭೈರವಮೂರ್ತಿ, ಎಸ್. ರಾಮಪ್ರಸಾದ್, ಎಚ್.ವಿ. ಸಾವಿತ್ರಮ್ಮ, ಲೋಕೇಶ್ ಆರಾಧ್ಯ ಎಚ್.ಎಸ್. ಪಾರ್ವತಿ ಕುರಿತು ಬರೆದಿದ್ದಾರೆ.
ಪುಸ್ತಕ ಪರಿಚಯ ವಿಭಾಗ ಸುದೀರ್ಘವಾದುದು. ಇಲ್ಲಿ ಹತ್ತಾರು ಕೃತಿಗಳ ವಿಮರ್ಶೆ ಇದೆ.
ತ.ಸು. ಶಾಮರಾಯರ ಮೂರು ತಲೆಮಾರು, ಸಿಪಿಕೆ ಅವರ ಪರಿಗ್ರಹಣ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಅನಾತ್ಮಕಥನ, ಉಷಾ ನರಸಿಂಹನ್ ಅವರ ಕಂಚುಗನ್ನಡಿ, ಕೆಂಡದ ರೊಟ್ಟಿ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಎಂ.ಆರ್. ಕಮಲಾ ಅವರ ಗದ್ಯಗಂಧಿ, ನೆಲದಾಸೆಯ ನಕ್ಷತ್ರಗಳು, ನಾಗಲಕ್ಷ್ಮಿ, ಹರಿಹರೇಶ್ವರ ಅವರ ಯಾತ್ರಿ, ಶಶಿಧರ ಹಾಲಾಡಿ ಅವರ ಅಬ್ಬೆ, ಕಾಲಕೋಶ, ಕೆ. ಲೀಲಾ ಪ್ರಕಾಶ್ ಅವರ ಲೇಖನೋಲ್ಲಾಸ, ಬೇದ್ರೆ ಮಂಜುನಾಥ್ ಅವರ ಜಮ್ಲೋ ಹೆಜ್ಜೆ ಹಾಕುತ್ತಾಳೆ, ಸಿ.ಎನ್. ಮುಕ್ತಾ ಅವರ ಪರಿಭ್ರಮಣ, ಅಡ್ಡಂಡ ಕಾರ್ಯಪ್ಪ ಅವರ ಟಿಪ್ಪುವಿನ ನಿಜ ಕನಸುಗಳು, ಶ್ರೀಕಂಠಶಾಸ್ತ್ರಿ ಅವರ ಶ್ರೀಮನ್ಮಹಾರಾಜರ ಕೈಲಾಸ ಮಾನಸ ಯಾತ್ರೆ, ಎನ್ನೇಬಿ ಮೊಗ್ರಾಲ್ ಪುತ್ತೂರರ ಬಂಜೆತನ ಬಯಸಿದಳು, ನಾಗರತ್ನ ಅವರ ನೆಮ್ಮದಿಯ ನೆಲೆ, ಎನ್.ವಿ. ರಮೇಶ್ ಅವರ ನಾಟಕದ ಹಿಂದಿನ ನಾಟಕ, ಸವಿತಾ ಪ್ರಭಾಕರ್ ಅವರ ಹಾಸ್ಯದೊಳಗೆ ಹೊಸರುಚಿ, ಪದ್ಮಾ ಆನಂದ್ ಅವರ ನೆನಪಿನಂಗಳ.
ಪ್ರಭಾ ಶಾಸ್ತ್ರಿ ಅವರ ಕಮಲ ಅರಳಿತು,ಶೆಲ್ಲಿ ಕೂಡ್ಲಿಗಿ ಅವರ ಎರಡು ಲೋಟದ ಹುಡುಗಿ, ಗಿರಿಜಾ ಮಾಲಿ ಪಾಟೀಲ ಅವರ ಸಾಹಿತ್ಯದಲ್ಲಿ ವೈವಿಧ್ಯಮಯ ಸೂತ್ರಗಳು, ಎಚ್.ಆರ್ .ಲೀಲಾವತಿ ಅವರ ಹಾಡಾಗಿ ಹರಿದಾಳೆ, ಸದಾಶಿವ- ಮಲ್ಲಿಕಾರ್ಜುನ ಮರಡಿ ಸಹೋದರರ ಸಮ ಹಿಮ ಚಂದ್ರಮ, ಪ್ರಭಾಕರ ಬಿಳ್ಳೂರರ ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು, ಬಿ.ಆರ್. ನಾಗರತ್ನರ ಮೆಲುನಗೆ ಲಾಸ್ಯ, ರಾಮಾಯಣದ ರಮ್ಯ ಕತೆಗಳು, ನೆರಳು, ರಂಗನಾಥ್ ಮೈಸೂರು ಅವರ ಮನದಾಳದಿಂದುರಿದ ಮಳೆ ಹನಿಗಳು, ವಾಣಿ ಸುಬ್ಬಯ್ಯ ಅವರ ಹೂಬನ, ತುಳಸೀತನಯರ ಬೆಳ್ಳಕ್ಕಿ ಪಯಣ, ರಮ್ಯಾಭೂಮಿ ಅವರ ಗರತಿಪುರ, ರಮೇಶ್ ಅವರ ಗ್ರಾಮನಿಧಿ, ತ.ರಾ. ಸುಮಾ ಅವರ ಅಂಬೇಗಾಲು ಕುರಿತು ಮೀನಾಕ್ಷಿ ಅವರು ಇಲ್ಲಿ ವಿಮರ್ಶಿಸಿದ್ದಾರೆ.
ಇಲ್ಲಿ ಕಥೆಗಳು, ಕವನಗಳಿವೆ, ಕಾದಂಬರಿಗಳಿವೆ. ನಾಟಕಗಳಿವೆ, ಆತ್ಮಚರಿತ್ರೆಯೂ ಇದೆ. ಮೀನಾಕ್ಷಿ ಅವರು ಎಲ್ಲವನ್ನು ತಾಳ್ಮೆಯಿಂದ ಓದಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಅದರಲ್ಲ ಕೊರೋನಾ ಲಾಕ್ ಡೌನ್ ಸಮಯವನ್ನು ಪುಸ್ತಕ ಓದಿ, ವಿಮರ್ಶೆ ಮಾಡುವುದಕ್ಕೆ ಸದುಪಯೋಗ ಮಾಡಿಕೊಂಡಿದ್ದಾರೆ.
ಕೊನೆಯಲ್ಲಿ ಪುಸ್ತಕಗಳು, ಯುಗಾದಿ, ಗೌರಿಗಣೇಶ ಹಬ್ಬದ ಬಗ್ಗೆ ಲೇಖನ ಬರೆದಿದ್ದಾರೆ. ಪದ್ಮಾ ಆನಂದ್ ದಂಪತಿಯ ಸಾರಥ್ಯದಲ್ಲಿ ಮೈಸೂರಿನಲ್ಲಿ ನಿರಂತರವಾಗಿ ಸಾಹಿರುವ ಸಾಹಿತ್ಯ ದಾಸೋಪ ಕುರಿತ ಲೇಖನವೂ ಇದೆ. ಹೀಗಾಗಿ ಇದೊಂದು ಸಮ್ಮಿಶ್ರಣ ಸಂಕಲನವಾಗಿದೆ.
ಮಹಿಮಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಹಿರಿಯ ಸಾಹಿತಿ ಪ್ರೊ.ಸಿಪಿಕೆ ಪ್ರಸ್ತಾವನೆ, ರಂಗನಾಥ್ ಮೈಸೂರು ಮುನ್ನುಡಿ ಬರೆದಿದ್ದಾರೆ.
ಆಸಕ್ತರು ಬಿ.ಕೆ. ಮೀನಾಕ್ಷಿ, ಮೊ. 98442, ಮಹಿಮಾ ಪ್ರಕಾಶನದ ಶ್ರೀನಿವಾಸ್, ಮೊ. 27225 94487 59815 ಸಂಪರ್ಕಿಸಬಹುದು.