ಯುವಕರ ಗುಂಪೊಂದು ಅಶೋಕ್ ಜೀ ಬಳಿ ‘ನಮಗೆ ಧರ್ಮದ್ರೋಹಿಗಳ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಬೇಕು’ ಎಂದು ಕೇಳಿದ ನೆನಪು. ತಕ್ಷಣ ಆ ಗುಂಪಿಗೆ ತಿಳಿ ಹೇಳಿದ ಅಶೋಕ್ ಜೀ ‘ಯಾರೇ ಸಾಧಕರು ತಮ್ಮ ಎದೆಗಾರಿಕೆಯೊಂದಿಗೆ ಪರಿಸ್ಥಿತಿ ಎದುರಿಸುವರೇ ಹೊರತು ಬೇರೆಯವರ ಬಳಿ ಅಪೇಕ್ಷೆಯಂತೆ ಹೋರಾಡಲಾರ’ ಎಂದು ಮಾರ್ಮಿಕವಾಗಿ ಉತ್ತರ ನೀಡಿದರು.
ಸಂತರ ಒಕ್ಕೊರಲಿನ ಆಶಯದಂತೆ ಧರ್ಮ ಸಂಸತ್ತಿನ ನಿರ್ಣಯ ಅನುಷ್ಠಾನಕ್ಕೆ ತರಲು ಸಿಂಘಾಲ್ ಕರ್ತವ್ಯಶಕ್ತಿ ಮರೆಯಲಸಾಧ್ಯ
ಯುವಕರ ಗುಂಪೊಂದು ಅಶೋಕ್ ಜೀ ಬಳಿ ‘ನಮಗೆ ಧರ್ಮದ್ರೋಹಿಗಳ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಬೇಕು’ ಎಂದು ಕೇಳಿದ ನೆನಪು. ತಕ್ಷಣ ಆ ಗುಂಪಿಗೆ ತಿಳಿ ಹೇಳಿದ ಅಶೋಕ್ ಜೀ ‘ಯಾರೇ ಸಾಧಕರು ತಮ್ಮ ಎದೆಗಾರಿಕೆಯೊಂದಿಗೆ ಪರಿಸ್ಥಿತಿ ಎದುರಿಸುವರೇ ಹೊರತು ಬೇರೆಯವರ ಬಳಿ ಅಪೇಕ್ಷೆಯಂತೆ ಹೋರಾಡಲಾರ’ ಎಂದು ಮಾರ್ಮಿಕವಾಗಿ ಉತ್ತರ ನೀಡಿದರು.
-ಸ್ವಾಮಿ ಸೋಮನಾಥಾನಂದಪುರಿ, ಕೊಡಗು
ಹಿಂದೂ ಹೃದಯಸಾಮ್ರಾಟ ಸ್ವರ್ಗೀಯ ಅಶೋಕ್ ಸಿಂಘಾಲ್ ನಮ್ಮ ಸನಾತನ ಹಿಂದೂ ಧರ್ಮದ ಸಂತ ಶ್ರೇಷ್ಠರೊಳು ಓರ್ವರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ದೇಶಸೇವೆಗಾಗಿ ಸಮರ್ಪಿತ ಬದುಕು ಆರಂಭಿಸಿದ ಅವರು, ನಮ್ಮ ಹೆಮ್ಮೆಯ ಸಂತರು ಮತ್ತು ಸರ್ವ ಸಮಾಜಗಳ ನಾಯಕರ ಒಡನಾಟ ಹೊಂದಿದ್ದ ಶ್ರೇಷ್ಠ ಸಾಧಕರಾಗಿದ್ದರು ಎನ್ನುವುದು ಅವಿಸ್ಮರಣೀಯ ಅನುಭವ ನೀಡುತ್ತದೆ.
ಗುರೂಜಿ ಗೋಳ್ವಲಕರ್, ಸ್ವಾಮಿ ಚಿನ್ಮಯಾನಂದರಾದಿಯಾಗಿ ಪತ್ರಕರ್ತ ಶಿವಶಂಕರ ಆಪ್ಟೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್, ಮೇವಾಡದ ರಾಜ ಮಹಾರಾಣಾ ಭಾಗವತ್ ಸಿಂಗ್ ಸೇರಿದಂತೆ ಗಣ್ಯಮಾನ್ಯರ ಆಶಯದಂತೆ ವಿಶ್ವ ಹಿಂದೂ ಪರಿಷದ್ ಸಂಘಟನೆಯನ್ನು ಅವಿಚ್ಛಿನ್ನ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಳಿಸಿದವರು ಅಶೋಕ್ ಸಿಂಘಾಲ್ ಎಂದರೆ ಅತಿಶಯೋಕ್ತಿಯಲ್ಲ.
ರಾಷ್ಟ್ರೀಯ ಅಸ್ಮಿತೆಯ ಆಂದೋಲನ:
ಕಠಿಣ ಪರಿಸ್ಥಿತಿಯ ನಡುವೆಯೂ ಶ್ರೀರಾಮ ಜನ್ಮಭೂಮಿ ಆಂದೋಲನ ಸೇರಿದಂತೆ ರಾಷ್ಟ್ರೀಯ ಅಸ್ಮಿತೆಯ ಆಂದೋಲನಗಳಲ್ಲಿ ದಿಟ್ಟತನ ತೋರಿಸಿ, ಹಿಂದೂ ವಿರೋಧಿಗಳ ಎದೆನಡುಗಿಸುವ ಚಮತ್ಕಾರ ಗುಣ ಅವರದ್ದಾಗಿತ್ತು. ಭಾರತದ ಪರಮೋಚ್ಚ ಧರ್ಮಸಂಸತ್ತಿನ ಎಲ್ಲಾ ನಿರ್ಣಯಗಳನ್ನು ಸಂತರ ಒಕ್ಕೊರಲಿನ ಆಶಯದಂತೆ ಕಾರ್ಯಕರ್ತರ ಪಡೆಯೊಂದಿಗೆ ಅನುಷ್ಠಾನಕ್ಕೆ ತರಲು ಸಿಂಘಾಲ್ ಅವರು ತೋರಿದ ಕರ್ತವ್ಯಶಕ್ತಿ ಮರೆಯಲಸಾಧ್ಯ. ಪರಿಣಾಮವಾಗಿ ಭಾರತೀಯ ರಾಜನೀತಿಯ ರಾಷ್ಟ್ರೀಯ ಹಾದಿ ಧೀರೋದಾತ್ತವಾಯಿತು ಎಂದು ನೆನಪಿಡಬೇಕು. ನಾನು ತಿಳಿದಂತೆ ಅಶೋಕ್ ಸಿಂಘಾಲ್ ಅವರು ಹಿಡಿದ ಕೆಲಸ ಮತ್ತು ಇಟ್ಟ ಹೆಜ್ಜೆಯಿಂದ ಎಂದಿಗೂ ಅಧೀರರಾಗದೆ ಸಿಂಹಸದೃಶ ನಿಲುವು ತಳೆಯುತ್ತಿದ್ದರು. 1990ರ ಐತಿಹಾಸಿಕ ಕಾರಸೇವೆಯಲ್ಲಿ, ಅಯೋಧ್ಯೆಯ ಆಂದೋಲನದಲ್ಲಿ ಪ್ರತ್ಯಕ್ಷ ಹೆಜ್ಜೆಯೊಂದಿಗೆ ಘಾಸಿಗೊಂಡರೂ ಎಲ್ಲ ಅಡೆತಡೆಗಳನ್ನು ಭೇದಿಸಿ ಮುನ್ನುಗ್ಗಿದ ದೃಶ್ಯ ಇಂದಿಗೂ ನನ್ನ ಕಣ್ಣು ಕಟ್ಟುವಂತಿದೆ. ಅಂತೆಯೇ ದೆಹಲಿಯ ಬೊಟ್ ಕ್ಲಬ್ ಮೈದಾನದಲ್ಲಿ ನಡೆದ ಅಪ್ರತಿಮ ಜನಶಕ್ತಿ ಪ್ರದರ್ಶನವು ಅಶೋಕ್ ಸಿಂಘಾಲ್ ಅವರ ನೇತೃತ್ವದ ಮೇಲೆ ಕಾರ್ಯಕರ್ತರು ಹಾಗೂ ಜನಮಾನಸ ಹೊಂದಿರುವ ವಿಶ್ವಾಸದ ಪ್ರತಿರೂಪವೇ ಆಗಿತ್ತು.
ಇನ್ನು ಶ್ರೀರಾಮ ಭಕ್ತರ ಹೋರಾಟದ ವಾರಸಿಕತೆಯನ್ನು ತಡೆಯಲು ರಾಮವಿರೋಧಿಗಳು ಗೋಧ್ರಾ ಹತ್ಯಾಕಾಂಡ ಮತ್ತು ನಮ್ಮ ಹುಬ್ಬಳ್ಳಿಯಲ್ಲಿ ಅಶೋಕ್ ಸಿಂಘಲ್ ಅವರ ಅಮೃತ ಮಹೋತ್ಸವ ತಡೆಯಲು ವಿದ್ರೋಹಿಗಳು ಹಿಂಸೆಯ ನಡುವೆಯೂ ಮುನ್ನಲೆ ಸಾಧಿಸಿದ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇಂದು ಐತಿಹಾಸಿಕ ಮೈಲಿಗಲ್ಲು ಆಗಿರುತ್ತದೆ ಎಂಬ ಸತ್ಯವನ್ನು ನಮ್ಮ ಹಿಂದೂ ಹೃದಯ ಸಾಮ್ರಾಟನಿಂದ ಮಾತ್ರ ಸಾಧ್ಯ ಆಗಿದೆ ಎನ್ನಬಹುದು.
ಬೆಂಗಳೂರು ಮಟ್ಟದ ಒಂದು ಸಭೆಯಲ್ಲಿ ಯುವಕರ ಗುಂಪೊಂದು ಅಶೋಕ್ ಜೀ ಬಳಿ ‘ನಮಗೆ ಧರ್ಮದ್ರೋಹಿಗಳ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಬೇಕು’ ಎಂದು ಕೇಳಿದ ನೆನಪು. ತಕ್ಷಣ ಆ ಗುಂಪಿಗೆ ತಿಳಿ ಹೇಳಿದ ಅಶೋಕ್ ಜೀ ‘ಯಾರೇ ಸಾಧಕರು ತಮ್ಮ ಎದೆಗಾರಿಕೆಯೊಂದಿಗೆ ಪರಿಸ್ಥಿತಿ ಎದುರಿಸುವರೇ ಹೊರತು ಬೇರೆಯವರ ಬಳಿ ಅಪೇಕ್ಷೆಯಂತೆ ಹೋರಾಡಲಾರ’ ಎಂದು ಮಾರ್ಮಿಕವಾಗಿ ಉತ್ತರ ನೀಡಿದರು. ಆ ಗುಂಪು ತಣ್ಣಗಾಯಿತು. ಹೀಗೆ ಯಾವುದೇ ಹೋರಾಟ ಅಥವಾ ಕಾರ್ಯಕ್ರಮ ಯೋಜನೆಯಲ್ಲಿ ಅಶೋಕ್ ಸಿಂಘಾಲ್ ಜೀ ಅವರು ಮುಂಚೂಣಿ ನೇತೃತ್ವದೊಂದಿಗೆ ನೇರ ಪಾತ್ರಧಾರಿ ಆಗಿರುತ್ತಿದ್ದರು. ಬಹುಶಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಪರ್ವದಲ್ಲಿಯೇ ಈ ಮಹಾನ್ ಚೇತನರ ನೂರು ವಸಂತಗಳ ಜನ್ಮೋತ್ಸವ ಸೊಡರು ಹಿಂದೂ ಅಸ್ಮಿತೆಯ ನವ ಮನ್ವಂತರಕ್ಕೆ ಮುನ್ನುಡಿ ಎಂದು ಆಶಿಸೋಣ.
ಇಲ್ಲಿ ಸ್ವಯಂ ಮೇವಾಮೃಗೇಂದ್ರತಾ ರೀತಿ ಅಶೋಕ್ ಸಿಂಘಾಲ್ ಅವರಿಗೆ ಅವರ ಮೇರು ವ್ಯಕ್ತಿತ್ವವೇ ಸಾಟಿ ಅಥವಾ ಸಾಕ್ಷಿ. ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ ಆಗಿದೆ ಎಂಬ ಹೆಮ್ಮೆ ಒಂದೆಡೆ ಆದರೆ, ಈ ರಾಷ್ಟ್ರಪುರುಷನ ಶತಮಾನೋತ್ಸವ ಪರ್ವದಲ್ಲಿ ಭಾರತದ ಯುವ ಶಕ್ತಿ ರಾಮ ರಾಜ್ಯದಿಂದ ಧರ್ಮ ಪಥದತ್ತ ವಿಮುಖರಾಗದೆ ಸ್ವಾಮಿ ವಿವೇಕಾನಂದರಂತೆ ಸರ್ವತ್ರ ಸಿಂಹ ಘರ್ಜನೆ ಮೊಳಗಿಸಲಿ. ಮಾನಸಿಕ ದೌರ್ಬಲ್ಯಗಳನ್ನು ಬದಿಗೊತ್ತಿ ರಾಷ್ಟ್ರ ಶಕ್ತಿಯಾಗಿ ಜಗವ ಗೆಲುವು ಪಡೆಯುವಂತೆ ಬಾಳಲೆಂದು ಆಶಿಸೋಣ. ಅದುವೇ ಅಶೋಕ್ ಜೀ ಅವರಂತಹ ಮಹಾನ್ ನಾಯಕರ ನೂರು ವಸಂತಗಳ ಜನ್ಮೋತ್ಸವ ಸೊಡರಿಗೆ ನೈಜವಾಗಿ ತೈಲಧಾರೆ ಆದೀತು.
ಮಹಾನ್ ಸಂಘಟಕ ಸಿಂಘಾಲ್ ಜೀ:
ಅಶೋಕ್ ಸಿಂಘಾಲ್ ಜೀ ಎಂದರೆ ಅವರು ಓರ್ವ ವ್ಯಕ್ತಿ ಆಗಿರದೆ ಮಹಾನ್ ಸಂಘಟಕರಾಗಿದ್ದರು. ಭರತ ಭೂಮಿಯ ಉದ್ದಗಲಕ್ಕೂ ನಿರಂತರವಾಗಿ ಪ್ರವಾಸ ಮಾಡಿ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರಿಗೆ ಸದಾ ಸ್ಪೂರ್ತಿ ತುಂಬುತ್ತಿದ್ದರು. ಒಮ್ಮೆ ಕೊಡಗು ಭೇಟಿ ಸಂದರ್ಭದಲ್ಲಿ ವಿಹಿಂಪ ಹಿತೈಷಿಗಳ ಸಭೆ ಏರ್ಪಡಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ‘ಅಯೋಧ್ಯೆ ಆಂದೋಲನದಲ್ಲಿ ಕೊಡಗಿನ ಜನರು ಭಾಗವಹಿಸಿದ್ದರೇ?’ ಎಂದು ರಾಜ್ಯ ಮಟ್ಟದ ಪತ್ರಕರ್ತ ಕೇಳಿದ... ತಟ್ಟನೆ ಅಶೋಕ್ ಜೀ ಉತ್ತರಿಸಿದರು.. ‘ಕ್ಯೋ ನಹೀ.. ಮೇರ ಮಿತ್ರ್ ಸೋಮೇಶ್ ಜೀ ಇದರೀ ಹೈನಾ..’ ಅಶೋಕ್ ಜೀ ಅವರ ನೆನಪಿನ ಶಕ್ತಿಗೆ ಇಡೀ ಸಭೆಯಲ್ಲಿ ಕರತಾಡನ ವ್ಯಕ್ತಗೊಂಡಿತು. ಹೀಗೆ ಅವರು ಇಡೀ ದೇಶದ ಬೇರೆ ಬೇರೆ ರಾಜ್ಯಗಳ ಹಾಗೂ ಜಿಲ್ಲಾ ಮಟ್ಟದ ಸಾಮಾನ್ಯ ಕಾರ್ಯಕರ್ತರ ನಡುವೆ ಅವಿನಾಭಾವ ಸಂಬಂಧ ಹೊಂದಿದ್ದ ಸಂಘಟನೆ ಚತುರರಾಗಿದ್ದರು ಎಂಬುದು ಅಶೋಕ್ ಸಿಂಘಾಲ್ ಅವರ ನಾಯಕತ್ವಕ್ಕೆ ಸಾಕ್ಷಿ.
ಬಹುಶಃ ಗುರೂಜಿ ಹಾಗೂ ಬಾಳಾ ಸಾಹೇಬ್ ದೇವರಸ್ ಜೀ ಸೇರಿದಂತೆ ಅಶೋಕ್ ಸಿಂಘಾಲ್ ಜೀ ವಿರಾಟ ಪಥದಲ್ಲಿ ಅನೇಕ ಗಣ್ಯಮಾನ್ಯರು ಇವರಿಗೆ ಪ್ರಭಾವಳೀ ಆಗಿದ್ದರು ಎನ್ನುವ ಸತ್ಯವನ್ನು ನಾವು ಕಾಣಬಹುದು. ಆ ಪೈಕಿ ಪುಟ್ಟಪರ್ತಿಯ ಸತ್ಯ ಸಾಯಿ ಬಾಬಾ ಮೊದಲ್ಗೊಂಡು ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ರಜ್ಜುಭಯ್ಯಾಜೀ, ಮೋರೋಪಂತ್ ಪಿಂಗಳೆ, ಆಚಾರ್ಯ ಗಿರಿರಾಜ್ ಕಿಶೋರ್, ಓಂಕಾರ ಭಾವೆ, ಹೊ.ವೆ.ಶೇಷಾದ್ರಿ ಜೀ, ಯಾಧವ ರಾವ್, ಜೋಶಿ ಆದಿಯಾಗಿ ಸದಾನಂದ ಕಾಕಡೇಜೀ ಮೊದಲ್ಗೊಂಡು ಎಣಿಸಲಸದಳ ಸಂಘ ಪರಿವಾರದ ಜ್ಯೇಷ್ಠ ಪ್ರಚಾರಕ್ ಟೋಳಿ ಕೊಂಡಿರುವೆ. ಆಯೋಧ್ಯೆಯ ರಾಮಚಂದ್ರ ಪರಮಹಂಸ ಮಹಾರಾಜ್, ಆಚಾರ್ಯ ಧರ್ಮೇಂದ್ರ, ರಾಜಮಾತೆ ವಿಜಯ ರಾಜೆ ಸಿಂದಿಯಾ... ಹೀಗೆ ಹೆಸರಿಸಲು ನಿಲುಕದಷ್ಟು ಕಾರ್ಯಪಡೆಯೇ ಅಶೋಕ್ ಸಿಂಘಾಲ್ ಜೀ ಬೆನ್ನಿಗೆ ಇದ್ದರೆಂಬುದು ಇಂದು ಅವಿಸ್ಮರಣೀಯ ಅನುಭವ ನೀಡುತ್ತದೆ. ಹಾಗಾಗಿ ಇಲ್ಲಿ ಸಮುದ್ರದ ನೀರನ್ನು ಬೊಗಸೆಯಲ್ಲಿ ಇಟ್ಟುಕೊಂಡು ಆ ಚೇತನಾ ಶಕ್ತಿಯನ್ನು ಬಣ್ಣಿಸಲು ಕಠಿಣವಾಗಲಿದೆ. ಬಹುಶಃ ವಿಶ್ವ ಹಿಂದೂ ಪರಿಷದ್ ಅಥವಾ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಅಶೋಕ್ ಸಿಂಘಾಲ್ ಕಾಲಘಟ್ಟ ಒಂದು ಕ್ಷಾತ್ರತೇಜಸ್ವೀ ಪರಂಪರೆಯ ವೀರಾಟ ಪಥವೇ ಆಗಿತ್ತು. ಅದುವೇ ಆ ಧೀಮಂತ ವ್ಯಕ್ತಿತ್ವ ಸಾಕಾರ ಸಂಕಲ್ಪದ ಹೆಜ್ಜೆ ಗುರುತು. ವರ್ಣನೆಗೆ ನಿಲುಕದ ಸೂರ್ಯ ರಶ್ಮಿಯ ತೇಜಸ್ವೀಭಾವ.
ಭಂಜೆಯಲ್ಲ ಭಾರತ.. ಶಕ್ತಿವಂತ ಈ ಧರೆ ಎಂಬ ಅಮರ ಘರ್ಜನೆಯ ಧ್ಯೇಯಕ್ಕೆ ನಿತ್ಯ ಸತ್ಯ.
