ಹೆಣ್ಣಿನ ಸಮರ್ಪಣೆ ಮೊಟ್ಟ ಮೊದಲು ಗುರುತಿಸಿದ ಬಸವಣ್ಣ : ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ

| N/A | Published : Mar 17 2025, 12:36 AM IST / Updated: Mar 17 2025, 06:42 AM IST

ಹೆಣ್ಣಿನ ಸಮರ್ಪಣೆ ಮೊಟ್ಟ ಮೊದಲು ಗುರುತಿಸಿದ ಬಸವಣ್ಣ : ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣಿನ ಅಗತ್ಯತೆ ಮತ್ತು ಸಮರ್ಪಣೆಯನ್ನು ಗುರುತಿಸಿದ ಮೊಟ್ಟ ಮೊದಲ ಗುರು ಬಸವಣ್ಣ ಎಂದು ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ ಬಸವರಾಜು ಹೇಳಿದ್ದಾರೆ.

 ಬೆಂಗಳೂರು : ಹೆಣ್ಣಿನ ಅಗತ್ಯತೆ ಮತ್ತು ಸಮರ್ಪಣೆಯನ್ನು ಗುರುತಿಸಿದ ಮೊಟ್ಟ ಮೊದಲ ಗುರು ಬಸವಣ್ಣ ಎಂದು ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ ಬಸವರಾಜು ಹೇಳಿದ್ದಾರೆ.

ವಿಜಯನಗರದ ಬೈರವ ರಾಗ ಅಂಗಳದಲ್ಲಿ ಆಯೋಜಿಸಿದ್ದ ‘ವಚನಕಾರ್ತಿಯರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಹೆಣ್ಣಿಗೆ ಸಮಾನತೆಯನ್ನು ಆದ್ಯತೆ ನೀಡಿದರು. ವಚನಕಾರ್ತಿಯರ ದಿನಾಚರಣೆ ನಮಗೆ ಮತ್ತೊಮ್ಮೆ ಹನ್ನೆರಡನೇ ಶತಮಾನವನ್ನು ನೆನಪಿಸಿತು ಎಂದು ಅಭಿಪ್ರಾಯಪಟ್ಟರು.

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ವಚನಗಳು ಕನ್ನಡದ ಸ್ವಾಯಾರ್ಜಿತ ಸಂಪತ್ತಾಗಿದ್ದು, ಈ ಅಪೂರ್ವ ಸಾಂಸ್ಕ್ರತಿಕ ಸಿರಿಯನ್ನು ಮಕ್ಕಳಿಗೆ ಪರಿಚಯಿಸಬೇಕಾದ ಅಗತ್ಯವಿದೆ. ವಚನಕಾರರು ವಚನಗಳ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ. ಮಹಿಳಾ ವಚನಕಾರ್ತಿಯರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಚನಗಳು ಕನ್ನಡದ ಸ್ವಾಯಾರ್ಜಿತ ಸಂಪತ್ತಾಗಿದೆ. ಈ ಅಪೂರ್ವ ಸಾಂಸ್ಕ್ರತಿಕ ಸಿರಿ ಉಉಳಿಸಿಕೊಂಡ ಬೆಳೆಸಿಕೊಂಡು ಹೋಗಬೇಕಿದೆ ಎಂದರು.