ಕಳೆದ ದಶಕದಲ್ಲಿ ಭಾರತದ ಮೀನುಗಾರಿಕೆ ಮತ್ತು ಜಲಕೃಷಿ ವಲಯವು ನಮ್ಮ ಆರ್ಥಿಕತೆಯ ಒಂದು ಪ್ರಮುಖ ಉದಯೋನ್ಮುಖ ವಲಯವಾಗಿ ಹೊರಹೊಮ್ಮಿದೆ. ಜಾಗತಿಕ ಮೀನು ಉತ್ಪಾದನೆಯಲ್ಲಿ ಸುಮಾರು ಶೇ.8ರಷ್ಟು ಕೊಡುಗೆಯನ್ನು ನೀಡುವ ಮೂಲಕ, ಭಾರತವು ಇಂದು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ.

-ಸಿ.ಪಿ. ರಾಧಾಕೃಷ್ಣನ್‌, ಉಪರಾಷ್ಟ್ರಪತಿ

₹73,000 ಕೋಟಿ ದಾಟಿದ ಸಮುದ್ರಾಹಾರ ರಫ್ತು । ಜಾಗತಿಕ ಮಟ್ಟದಲ್ಲಿ ಭಾರತದ ಮೀನುಗಾರಿಕಾ ವಲಯ ಛಾಪು

ಕಳೆದ ದಶಕದಲ್ಲಿ ಭಾರತದ ಮೀನುಗಾರಿಕೆ ಮತ್ತು ಜಲಕೃಷಿ ವಲಯವು ನಮ್ಮ ಆರ್ಥಿಕತೆಯ ಒಂದು ಪ್ರಮುಖ ಉದಯೋನ್ಮುಖ ವಲಯವಾಗಿ ಹೊರಹೊಮ್ಮಿದೆ. ಜಾಗತಿಕ ಮೀನು ಉತ್ಪಾದನೆಯಲ್ಲಿ ಸುಮಾರು ಶೇ.8ರಷ್ಟು ಕೊಡುಗೆಯನ್ನು ನೀಡುವ ಮೂಲಕ, ಭಾರತವು ಇಂದು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ 25 ವರ್ಷಗಳಲ್ಲಿ ಕೋಟ್ಯಂತರ ಜನರ, ವಿಶೇಷವಾಗಿ ದುರ್ಬಲ ಮತ್ತು ವಂಚಿತ ವರ್ಗಗಳ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದಾರೆ. ಹಿಂದುಳಿದ ಜಿಲ್ಲೆಗಳನ್ನು ‘ಆಕಾಂಕ್ಷಾ ಜಿಲ್ಲೆಗಳು’ ಎಂದು, ಗಡಿ ಗ್ರಾಮಗಳನ್ನು ‘ರೋಮಾಂಚಕ ಮತ್ತು ಮೊದಲ ಗ್ರಾಮಗಳು’ ಎಂದು ಹಾಗೂ ಈಶಾನ್ಯ ಪ್ರದೇಶವನ್ನು ‘ಅಷ್ಟಲಕ್ಷ್ಮಿ’ ಎಂದು ಕರೆದಿರುವುದು ಅವರ ಪರಿವರ್ತನಾಶೀಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಪಿಎಂ-ಜನಮನ್, ಪಿಎಂ-ಜನ್-ಧನ್, ಪಿಎಂ-ಗರೀಬ್ ಕಲ್ಯಾಣ ಮತ್ತು ಇತರ ಯೋಜನೆಗಳು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಹಾಗೂ ಸಾಮಾಜಿಕ ಸಬಲೀಕರಣದ ಬಗೆಗಿನ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತವೆ. 25 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿರುವುದು ಇಡೀ ಮಾನವಕುಲದ ಇತಿಹಾಸದಲ್ಲೇ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ.

ನೀಲಿ ಆರ್ಥಿಕತೆಗೆ ಒತ್ತು:

ಸರ್ವವ್ಯಾಪಿ ಬೆಳವಣಿಗೆಯನ್ನು ಖಾತ್ರಿಪಡಿಸುವ ಮತ್ತೊಂದು ಪ್ರಮುಖ ಹೆಜ್ಜೆಯೆಂದರೆ, ನೀಲಿ ಆರ್ಥಿಕತೆಗೆ ನೀಡಿರುವ ಒತ್ತು. ಪ್ರಕೃತಿಯು ನಮ್ಮ ದೇಶಕ್ಕೆ 11,000 ಕಿ.ಮೀ.ಗಿಂತಲೂ ಹೆಚ್ಚು ಉದ್ದದ ಕರಾವಳಿಯನ್ನು ನೀಡಿದೆ. ಆದಾಗ್ಯೂ, ದಶಕಗಳ ಕಾಲ ಈ ಶಕ್ತಿಯ ಬಹುಭಾಗವು ಬಳಕೆಯಾಗದೆ ಉಳಿದಿತ್ತು. ಆದರೆ 2019ರಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಚನೆಯೊಂದಿಗೆ, ಮೋದಿಯವರ ನೇತೃತ್ವದಲ್ಲಿ ಮೀನುಗಾರಿಕೆ ವಲಯವು ಮೊದಲ ಬಾರಿಗೆ ತನ್ನದೇ ಆದ ಪ್ರತ್ಯೇಕ ಸಚಿವಾಲಯವನ್ನು ಪಡೆಯಿತು. ನಮ್ಮ ರಾಷ್ಟ್ರಧ್ವಜದಲ್ಲಿರುವ ನೀಲಿ ಚಕ್ರವು ನೀಲಿ ಕ್ರಾಂತಿಯ ಸಾಮರ್ಥ್ಯವನ್ನು, ಅಂದರೆ ಸಾಗರ ಆರ್ಥಿಕತೆಯನ್ನು ಪ್ರತಿನಿಧಿಸುತ್ತದೆ ಎಂದು ಮೋದಿಯವರು ಹೇಳಿದ್ದರು.

ಕಳೆದ ದಶಕದಲ್ಲಿ ಭಾರತದ ಮೀನುಗಾರಿಕೆ ಮತ್ತು ಜಲಕೃಷಿ ವಲಯವು ನಮ್ಮ ಆರ್ಥಿಕತೆಯ ಒಂದು ಪ್ರಮುಖ ಉದಯೋನ್ಮುಖ ವಲಯವಾಗಿ ಹೊರಹೊಮ್ಮಿದೆ. ಜಾಗತಿಕ ಮೀನು ಉತ್ಪಾದನೆಯಲ್ಲಿ ಸುಮಾರು ಶೇ.8ರಷ್ಟು ಕೊಡುಗೆಯನ್ನು ನೀಡುವ ಮೂಲಕ, ಭಾರತವು ಇಂದು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. ಈ ವಲಯವು ಸುಮಾರು 3 ಕೋಟಿ ಮೀನುಗಾರರು ಮತ್ತು ಮೀನು ಸಾಕಣೆದಾರರ ಜೀವನೋಪಾಯಕ್ಕೆ ಆಧಾರವಾಗಿದೆ. 2024-25ರಲ್ಲಿ ಭಾರತದ ಮೀನು ಉತ್ಪಾದನೆಯು 195 ಲಕ್ಷ ಟನ್‌ಗಳಿಗೂ ಅಧಿಕ ಮಟ್ಟವನ್ನು ತಲುಪಿದ್ದು, ಇದು ಈ ವಲಯದ ಗಮನಾರ್ಹ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಸುಸ್ಥಿರ ಮೀನುಗಾರಿಕೆ:

ಇತ್ತೀಚೆಗೆ ನಾನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಆಯೋಜಿಸಿದ್ದ 2 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಅವುಗಳಲ್ಲಿ ಒಂದು, ಒಡಿಶಾದಲ್ಲಿ ನಡೆದ ಆಳ ಸಮುದ್ರ ಪ್ರದೇಶದಲ್ಲಿ ಮೀನು ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಉತ್ತೇಜಿಸುವ ಹಾಗೂ ಭಾರತೀಯ ಧ್ವಜವನ್ನು ಹೊಂದಿರುವ ನೌಕೆಗಳಿಗೆ ಅಧಿಕೃತ ಅನುಮತಿ ಪತ್ರಗಳನ್ನು ನೀಡುವ ರಾಷ್ಟ್ರೀಯ ಮಟ್ಟದ ಉದ್ಘಾಟನಾ ಕಾರ್ಯಕ್ರಮ. ಇನ್ನೊಂದು ಲಕ್ಷದ್ವೀಪದಲ್ಲಿ ನಡೆದ ಮೀನುಗಾರಿಕೆ ಕುರಿತಾದ ಜಾಗೃತಿ ಮತ್ತು ಸಂಪರ್ಕ ಕಾರ್ಯಕ್ರಮವಾಗಿತ್ತು. ಆಳ ಸಮುದ್ರದಲ್ಲಿ ಮೀನು ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ನಮ್ಮ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಕೈಗೊಂಡಿರುವ ಈ ಉಪಕ್ರಮವನ್ನು ಒಡಿಶಾದಲ್ಲಿ ಉದ್ಘಾಟಿಸಲು ನನಗೆ ಸಂತೋಷವಾಯಿತು.

ಸಮುದ್ರ ಮೀನುಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ, ಸುಸ್ಥಿರತೆ ಮತ್ತು ಸಮೃದ್ಧಿಯ ಹೊಸ ಯುಗದತ್ತ ಸಾಗಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ನಮ್ಮ ಸಂಸ್ಥೆಗಳು ಮತ್ತು ಮೀನುಗಾರ ಸಮುದಾಯಗಳು ಹೊಂದಿರುವ ಸಾಮೂಹಿಕ ಸಂಕಲ್ಪವನ್ನು ಇದು ಪ್ರತಿಬಿಂಬಿಸಿತು. ಉಪರಾಷ್ಟ್ರಪತಿಯಾಗಿ ನನ್ನ ಮೊದಲ ಅಧಿಕೃತ ಭೇಟಿಯ ಅಂಗವಾಗಿ ಕಳೆದ ತಿಂಗಳು ಲಕ್ಷದ್ವೀಪ ದ್ವೀಪಸಮೂಹಕ್ಕೆ ಭೇಟಿ ನೀಡಿದ್ದೆ. ಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ ಲಕ್ಷದ್ವೀಪಕ್ಕಾಗಿ ಮೀನುಗಾರಿಕೆ ಅಭಿವೃದ್ಧಿಯ ಅನೇಕ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಕಂಡು ಅತ್ಯಂತ ಸಂತೋಷವಾಯಿತು.

ಕೇಂದ್ರ ಬಜೆಟ್ 2025-26 ಸುಸ್ಥಿರ ರೀತಿಯಲ್ಲಿ ಮೀನು ಸಂಪನ್ಮೂಲವನ್ನು ಬಳಸಿಕೊಳ್ಳಲು ಪೂರಕವಾದ ಚೌಕಟ್ಟನ್ನು ಘೋಷಿಸಿದೆ. ಈ ಹೊಸ ಚೌಕಟ್ಟಿನಲ್ಲಿ ಮೀನುಗಾರರಿಗೆ ಅತ್ಯಂತ ಪ್ರಮುಖ ಸ್ಥಾನ ನೀಡಲಾಗಿದೆ. ಮೀಸಲು ಆರ್ಥಿಕ ವಲಯಕ್ಕಾಗಿನ ಮೀನುಗಾರಿಕೆ ನಿಯಮಗಳು ಮತ್ತು 2025ರ ಅಂತಾರಾಷ್ಟ್ರೀಯ ಜಲಪ್ರದೇಶ ಮೀನುಗಾರಿಕೆ ಮಾರ್ಗಸೂಚಿಗಳು ದೇಶಕ್ಕೆ ಹೊಸ ಆರಂಭವನ್ನು ಸೂಚಿಸುತ್ತವೆ. ಇದು ಮೀನುಗಾರಿಕೆ ಸಹಕಾರ ಸಂಘಗಳು, ಮೀನು ರೈತ ಉತ್ಪಾದಕ ಸಂಸ್ಥೆಗಳು ಮತ್ತು ಭಾರತೀಯ ಮೀನುಗಾರರಿಗೆ ಅಧಿಕೃತ ಅನುಮತಿ ಪತ್ರಗಳನ್ನು ನೀಡಲು ಆದ್ಯತೆ ನೀಡುತ್ತದೆ.

ನೀಲಿ ಆರ್ಥಿಕತೆಯ ಭವಿಷ್ಯ:

ಭಾರತದ ಸಮುದ್ರಾಹಾರ ಇಂದು 120ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ. ಕಳೆದ ಹಣಕಾಸು ವರ್ಷವೊಂದರಲ್ಲೇ, ನಮ್ಮ ರಫ್ತು 73,000 ಕೋಟಿ ರು.ಗಳಿಗಿಂತ ಹೆಚ್ಚು ಪ್ರಭಾವಶಾಲಿ ಸಂಖ್ಯೆಯನ್ನು ತಲುಪಿದೆ. 2013-2014ಕ್ಕೆ ಹೋಲಿಸಿದರೆ ಶೇ.140ಕ್ಕಿಂತ ಅಧಿಕ ಹೆಚ್ಚಳವಾಗಿದೆ. ಭಾರತೀಯ ಸಮುದ್ರಾಹಾರದ ಗುಣಮಟ್ಟದ ಬಗ್ಗೆ ಜಗತ್ತು ವಿಶ್ವಾಸ ಮತ್ತು ನಂಬಿಕೆಯನ್ನು ಬೆಳೆಸಿಕೊಂಡಿದೆ. ಡಿಜಿಟಲ್ ಅಧಿಕಾರ ವ್ಯವಸ್ಥೆಗಳು, ಹಡಗು ಟ್ರ್ಯಾಕಿಂಗ್, ಅಂತಾರಾಷ್ಟ್ರೀಯ ಪ್ರಮಾಣೀಕರಣ ಮತ್ತು ಇತರ ಹಂತಗಳು ಭಾರತೀಯ ಸಮುದ್ರಾಹಾರವು ಪ್ರೀಮಿಯಂ ಜಾಗತಿಕ ಮಾರುಕಟ್ಟೆಗಳಲ್ಲಿ ಇನ್ನೂ ಹೆಚ್ಚಿನ ಗೌರವವನ್ನು ಪಡೆಯಲು ಸಹಾಯ ಮಾಡುತ್ತವೆ. ಆದಾಗ್ಯೂ, ನಾವು ಪ್ರಕೃತಿಯ ಕಡೆಗೆ ನಮ್ಮ ಜವಾಬ್ದಾರಿಯನ್ನು ಎಂದಿಗೂ ಮರೆಯಬಾರದು.

ಸಮುದ್ರವು ಸಾವಿರಾರು ವರ್ಷಗಳಿಂದ ಮಾನವೀಯತೆಯನ್ನು ಪೋಷಿಸಿದೆ. ಮುಂಬರುವ ಸಾವಿರಾರು ವರ್ಷಗಳವರೆಗೆ ಅದನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಸುಸ್ಥಿರ ಮೀನುಗಾರಿಕೆ ನಮ್ಮ ಜವಾಬ್ದಾರಿಯಾಗಿದೆ. ಸಚಿವಾಲಯದ ಹೊಸ ಮಾರ್ಗಸೂಚಿಗಳು ಈ ದಿಕ್ಕಿನಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಿವೆ. ಇದು ಸಂರಕ್ಷಣಾ ಕ್ರಮಗಳ ಅನುಸರಣೆ ಮತ್ತು ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ ಮೀನುಗಾರಿಕೆಯ ವಿರುದ್ಧ ದೃಢವಾದ ನಿಲುವನ್ನು ಒತ್ತಿಹೇಳುತ್ತದೆ. ಆಳ ಸಮುದ್ರ ಮೀನುಗಾರಿಕೆಯಲ್ಲಿ ಮಾತ್ರವಲ್ಲದೆ, ಸಂಸ್ಕರಣೆ, ಕೋಲ್ಡ್ ಚೈನ್, ಸಾರಿಗೆ, ಪ್ಯಾಕೇಜಿಂಗ್, ಲಾಜಿಸ್ಟಿಕ್ಸ್ ಮತ್ತು ರಫ್ತು ಸೇವೆಗಳಲ್ಲಿಯೂ ಉದ್ಯೋಗವನ್ನು ಸೃಷ್ಟಿಸಬಹುದು. ಇದು ನಮ್ಮ ಯುವಜನರಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಕರಾವಳಿ ಭಾರತದ ಆರ್ಥಿಕ ಜೀವನವನ್ನು ಬಲಪಡಿಸಬಹುದು.

ಯುವಜನತೆಗೆ ಮನವಿ:

ನೀಲಿ ಕ್ರಾಂತಿಯ ಈ ಪಯಣದಲ್ಲಿ ಪ್ರತಿಯೊಂದು ವಲಯಕ್ಕೂ ನಿರ್ದಿಷ್ಟ ಪಾತ್ರವಿದೆ. ನಮ್ಮ ಮೀನುಗಾರ ಸಮುದಾಯಗಳು ಭಾರತದ ನೀಲಿ ಆರ್ಥಿಕತೆಗೆ ಶಕ್ತಿಯುತ ಚಾಲನೆ ನೀಡಲಿವೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಮೀನುಗಾರಿಕೆ ಸಚಿವಾಲಯವು ಅಭಿವೃದ್ಧಿ, ಸುಸ್ಥಿರತೆ ಮತ್ತು ಸಮೃದ್ಧಿಯ ಹೊಸ ಯುಗದತ್ತ ಮಹತ್ವದ ಹೆಜ್ಜೆಗಳನ್ನು ಇಡುತ್ತಿರುವುದು ಸಂತೋಷದ ವಿಷಯ. ಮೀನುಗಾರಿಕೆಯನ್ನು ಕೇವಲ ಆನುವಂಶಿಕ ಉದ್ಯೋಗವಾಗಿ ನೋಡದೆ ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಮತ್ತು ಜಾಗತಿಕ ಅವಕಾಶದಿಂದ ನಡೆಸಲ್ಪಡುವ ಆಧುನಿಕ ವೃತ್ತಿಯಾಗಿ ನೋಡಬೇಕೆಂದು ನಾನು ಯುವಜನರನ್ನು ಆಗ್ರಹಿಸುತ್ತೇನೆ. ಈ ನಿಟ್ಟಿನಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯೋಣ. ಸದಾ ಮಾತೃಭೂಮಿಯ ಸೇವೆಯಲ್ಲಿರೋಣ!