ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ₹80.69 ಕೋಟಿ ಮೌಲ್ಯದ 14 ಎಕರೆ ಒತ್ತುವರಿ ಸರ್ಕಾರಿ ಜಮೀನು ತೆರವು

| N/A | Published : Mar 03 2025, 01:47 AM IST / Updated: Mar 03 2025, 07:30 AM IST

ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ₹80.69 ಕೋಟಿ ಮೌಲ್ಯದ 14 ಎಕರೆ ಒತ್ತುವರಿ ಸರ್ಕಾರಿ ಜಮೀನು ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮರಾಯಸ್ವಾಮಿ ದೇವಸ್ಥಾನದ 6 ಎಕರೆ ಜಮೀನು ಸೇರಿದಂತೆ ಒಟ್ಟು ₹80.69 ಕೋಟಿ ಮೌಲ್ಯದ 14.15 ಎಕರೆ ಸರ್ಕಾರಿ ಜಮೀನುಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

 ಬೆಂಗಳೂರು : ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಕಸಬ ಹೋಬಳಿಯ ನೀಲಸಂದ್ರ ಗ್ರಾಮದಲ್ಲಿನ 25 ಕೋಟಿ ರು. ಮೌಲ್ಯದ ಧರ್ಮರಾಯಸ್ವಾಮಿ ದೇವಸ್ಥಾನದ 6 ಎಕರೆ ಜಮೀನು ಸೇರಿದಂತೆ ಒಟ್ಟು ₹80.69 ಕೋಟಿ ಮೌಲ್ಯದ 14.15 ಎಕರೆ ಸರ್ಕಾರಿ ಜಮೀನುಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ₹15 ಕೋಟಿ ಮೌಲ್ಯದ 1.12 ಎಕರೆ ಜಮೀನು, ಕೆಂಗೇರಿ ಹೋಬಳಿಯ ಹಲಗೇವಡೇರಹಳ್ಳಿ ಗ್ರಾಮದ ಹದ್ದುಗಿಡ್ಡದಹಳ್ಳದಲ್ಲಿ ₹3 ಕೋಟಿ ಮೌಲ್ಯದ ಜಮೀನು, ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಕಲ್ಕೆರೆ ಗ್ರಾಮದ 10 ಗುಂಟೆ, ಸರ್ಜಾಪುರ ಹೋಬಳಿಯ ತಿಗಳಚೌಡೇನಹಳ್ಳಿ ಗ್ರಾಮದಲ್ಲಿ 6 ಗುಂಟೆ, ಯಲಹಂಕ ತಾಲೂಕಿನ ಜಾಲ ಹೋಬಳಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ 3 ಎಕರೆ ಗೋಮಾಳ ಜಾಗವನ್ನು ತೆರವುಗೊಳಿಸಲಾಗಿದೆ.

ಹೆಸರುಘಟ್ಟ ಹೋಬಳಿಯ ತರಬನಹಳ್ಳಿ ಗ್ರಾಮದಲ್ಲಿ 8 ಗುಂಟೆ, ಯಲಹಂಕ ಹೋಬಳಿಯ ತಿರುಮೇನಹಳ್ಳಿ ಗ್ರಾಮದಲ್ಲಿ 6 ಗುಂಟೆ, ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಶಿವನಪುರ ಗ್ರಾಮದಲ್ಲಿ 30 ಗುಂಟೆ, ದಾಸನಪುರ ಹೋಬಳಿಯ ಆಲೂರು ಗ್ರಾಮದಲ್ಲಿ 10 ಗುಂಟೆ, ದಾಸನಪುರ ಹೋಬಳಿಯ ಆಲೂರು ಗ್ರಾಮದ 24 ಗುಂಟೆ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಯರಪ್ಪನಹಳ್ಳಿ ಗ್ರಾಮದಲ್ಲಿ 1.20 ಎಕರೆ, ವರ್ತೂರು ಹೋಬಳಿಯ ದೊಡ್ಡನೆಕ್ಕುಂದಿ ಗ್ರಾಮದಲ್ಲಿ 6 ಗುಂಟೆ, ಕೆ.ಆರ್. ಪುರ ಹೋಬಳಿಯ ಕೊಡಿಗೆಹಳ್ಳಿ ಗ್ರಾಮದಲ್ಲಿ 1.08 ಎಕರೆ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲಾಗಿದೆ.

ಒತ್ತುವರಿ ಕಾರ್ಯಾಚರಣೆ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ ಕೆ.ನಾಯಕ್ ಹಾಗೂ ವಿವಿಧ ತಾಲೂಕುಗಳ ತಹಶೀಲ್ದಾರ್ ಹಾಗೂ ಮುಜರಾಯಿ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.