ಸಾರಾಂಶ
ಫ್ಲಿಪ್‌ಕಾರ್ಟ್ ಅಧೀನದ ಕಂಪನಿಯಾದ ಕ್ಲಿಯರ್‌ಟ್ರಿಪ್ ದಿ ಬಿಗ್ ಬಿಲಿಯನ್ ಡೇ ಪ್ರಯುಕ್ತ ತನ್ನ ಹೊಸ ವೀಸಾ ಡಿನಯಲ್ ಕವರ್ ಆಫರ್ ಅನ್ನು ಘೋಷಿಸಿದೆ.
ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಒದಗಿಸಲಾಗುತ್ತಿರುವ ಈ ಆಫರ್ ಶೂನ್ಯ ವೆಚ್ಚದಲ್ಲಿ ಲಭ್ಯವಿದೆ. ಗ್ರಾಹಕರು ಯಾವಾಗಲೂ ಅಂತಾರಾಷ್ಟ್ರೀಯ ವಿಮಾನಗಳನ್ನು ಬುಕ್ ಮಾಡುವಾಗ ‘ನನ್ನ ವೀಸಾ ನಿರಾಕರಣೆಯಾದರೆ ಏನು ಮಾಡುವುದು?’ ಎಂಬ ಆತಂಕವನ್ನು ಅನುಭವಿಸುತ್ತಿರುತ್ತಾರೆ. ಈ ವೀಸಾ ನಿರಾಕರಣೆ ಕವರ್ ಅನ್ನು ಈ ಆತಂಕವನ್ನು ದೂರ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಇದೀಗ ಗ್ರಾಹಕರು ತಮ್ಮ ವೀಸಾ ನಿರಾಕರಣೆಯಾದರೆ ಟಿಕೆಟ್ ನ ಪೂರ್ಣ ಮರುಪಾವತಿಯನ್ನು ಪಡೆಯಬಹುದಾಗಿದೆ.
ಈ ಕುರಿತು ಮಾತನಾಡಿರುವ ಕ್ಲಿಯರ್‌ಟ್ರಿಪ್‌ನ ಚೀಫ್ ಬಿಸಿನೆಸ್ ಆಂಡ್ ಗ್ರೋತ್ ಆಫೀಸರ್ ಮಂಜರಿ ಸಿಂಘಾಲ್ ಅವರು, “ವೀಸಾ ನಿರಾಕರಣೆ ಕವರ್ ಮೂಲಕ ನಾವು ಅಂತಾರಾಷ್ಟ್ರೀಯ ಪ್ರಯಾಣವನ್ನು ಬುಕ್ ಮಾಡುವಾಗ ಎದುರಾಗುವ ಅತಿದೊಡ್ಡ ಆತಂಕವನ್ನು ಪರಿಹರಿಸುತ್ತಿದ್ದೇವೆ. ಈ ಹೊಸ ವೈಶಿಷ್ಟ್ಯವು ಕೇವಲ ಮರುಪಾವತಿಯ ಬಗ್ಗೆ ಮಾತ್ರವೇ ಅಲ್ಲ; ಇದು ನಮ್ಮ ಗ್ರಾಹಕರಿಗೆ ಮಾನಸಿಕ ಶಾಂತಿಯನ್ನು ನೀಡಲಿದೆ. ಪ್ರಯಾಣ ಪ್ಲಾನ್ ಮಾಡುವಾಗ ಉಂಟಾಗಬಹುದಾದ ಆತಂಕವನ್ನು ನಿವಾರಿಸಿ ರೋಮಾಂಚಕವಾಗಿರುವಂತೆ ನೋಡಿಕೊಳ್ಳುತ್ತದೆ” ಎಂದು ಹೇಳಿದರು. ವೀಸಾ ನಿರಾಕರಣೆ ಕವರ್‌ನ ವಿಶೇಷತೆಗಳು:
ಬೆಲೆ: ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಬುಕಿಂಗ್ ಗಳ ಮೇಲೆ ಉಚಿತ
ಅರ್ಹ ವೀಸಾ ಪ್ರಕಾರಗಳು: ಕೇವಲ ಪ್ರವಾಸಿ ವೀಸಾಗಳಿಗೆ ಮಾತ್ರ ಅನ್ವಯ
ಅರ್ಹ ರಾಷ್ಟ್ರೀಯತೆ: ಕೇವಲ ಭಾರತೀಯ ರಾಷ್ಟ್ರೀಯರಿಗೆ ಮಾತ್ರ ಲಭ್ಯ
ವಯಸ್ಸಿನ ಮಾನದಂಡ: ಯಾವುದೇ ವಯಸ್ಸಿನ ನಿರ್ಬಂಧವಿಲ್ಲ; ಎಲ್ಲಾ ಪ್ರಯಾಣಿಕರಿಗೆ ಲಭ್ಯವಿರುತ್ತದೆ
ಫೇರ್ ವಿಧ: ವಿಮಾನ ದರಗಳಲ್ಲಿ ಸಂಪೂರ್ಣ ಮತ್ತು ಭಾಗಶಃ ಮರುಪಾವತಿ
ಕವರೇಜ್ ವ್ಯಾಪ್ತಿ: ಭಾರತದಿಂದ ಆರಂಭವಾಗುವ ಅಂತಾರಾಷ್ಟ್ರೀಯ ಪ್ರಯಾಣ
ರದ್ದತಿ ವ್ಯವಸ್ಥೆ: ಪ್ರಯಾಣಕ್ಕೆ ಕನಿಷ್ಠ 24 ಗಂಟೆಗಳ ಮೊದಲು ರದ್ದತಿ ಮಾಡಬೇಕು ಈ ಕವರ್ ಜೊತೆಗೆ, ಕ್ಲಿಯರ್‌ಟ್ರಿಪ್ ಬಿಗ್ ಬಿಲಿಯನ್ ಡೇಯನ್ನು ಹಲವಾರು ಭಾರಿ ಆಫರ್ ಗಳೊಂದಿಗೆ ಆಚರಿಸುತ್ತಿದೆ. ಫ್ಲಾಶ್ ಸೇಲ್ ಗಳ ಸಮಯದಲ್ಲಿ, ದೇಶೀಯ ವಿಮಾನಗಳ ಟಿಕೆಟ್ ಗಳು ಕೇವಲ ₹999* ರಿಂದ ಪ್ರಾರಂಭವಾಗುತ್ತವೆ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ 20% ರಿಯಾಯಿತಿ* ಲಭ್ಯವಿದೆ. ಜೊತೆಗೆ, ಕ್ಲಿಯರ್‌ಟ್ರಿಪ್ ತನ್ನ ಹೋಟೆಲ್ ವಿಭಾಗವನ್ನು 20,000ರಿಂದ 80,000+ ಹೋಟೆಲ್ ಗಳಿಗೆ ಗಣನೀಯವಾಗಿ ವಿಸ್ತರಿಸಿದೆ. ಇದರಲ್ಲಿ 2-ಸ್ಟಾರ್‌ನಿಂದ ಹಿಡಿದು 5-ಸ್ಟಾರ್ ವರ್ಗದವರೆಗಿನ ಹೋಟೆಲ್‌ಗಳಿವೆ. ಈ ವೈವಿಧ್ಯಮಯ ಆಯ್ಕೆಯು ಫ್ಯಾಮಿಲಿ ಹಾಲಿಡೇ, ವೆಲ್‌ನೆಸ್ ರಿಟ್ರೀಟ್ ಗಳು, ಬಜೆಟ್ ಫ್ರೆಂಡ್ಲಿ ಸ್ಟೇ ಮತ್ತು ಪ್ರೀಮಿಯಂ ಐಷಾರಾಮಿ ಪ್ರವಾಸ ಹೀಗೆ ಎಲ್ಲಾ ಪ್ರವಾಸಕ್ಕೂ ಬೇಕಾಗುವ ಅಗತ್ಯಗಳನ್ನು ಪೂರೈಸುತ್ತದೆ. ಇದರ ಜೊತೆಗೆ, ಈ ಉತ್ಸವದ ಋತುವಿನಲ್ಲಿ ಮೂರು ಅಥವಾ ಹೆಚ್ಚು ಪ್ರಯಾಣಿಕರ ಬುಕಿಂಗ್ ಗಳಿಗೆ, ಕನಿಷ್ಠ ಒಬ್ಬ ಮಗು ಅಥವಾ ಶಿಶುವಿಗೆ ಚೈಲ್ಡ್ ಫ್ಲೈಸ್ ಫ್ರೀ ಆಫರ್ ಮರಳಿ ಪರಿಚಯಿಸಲಾಗಿದ್ದು, ಕುಟುಂಬಗಳಿಗೆ ದೇಶೀಯ ಪ್ರಯಾಣದಲ್ಲಿ ಹೆಚ್ಚಿನ ಉಳಿತಾಯವನ್ನು ಮಾಡಲು ಅನುವು ಮಾಡಿಕೊಡುತ್ತದೆ.