ಸಾರಾಂಶ
ಬೆಂಗಳೂರು : ‘ಪ್ರೌಢಾವಸ್ಥೆಯು ನಮ್ಮ ಜೀವನದಲ್ಲಿನ ಅತ್ಯಂತ ಪ್ರೊಡಕ್ಟಿವ್ ಹಂತವಾಗಿದೆ. ಈ ಹಂತದಲ್ಲಿ ದೊಡ್ಡ ಜವಾಬ್ದಾರಿಗಳು ಮತ್ತು ಬದಲಾವಣೆ ಹೊಂದಬೇಕಾದ ಅಗತ್ಯ ಕೂಡ ಎದುರಾಗುತ್ತವೆ. ವಯಸ್ಸಾದಂತೆ ಒಂಟಿತನ, ಬೆಂಬಲದ ಕೊರತೆ ಕಾಡುತ್ತದೆ ಮತ್ತು ಮೆದುಳಿನ ಚಟುವಟಿಕೆ ಕಡಿಮೆಯಾಗುತ್ತಾ ಬರುತ್ತದೆ. ಇಂತ ಸವಾಲುಗಳು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಈ ಸವಾಲುಗಳಿದ್ದರೂ ದೈಹಿಕ ಆರೋಗ್ಯವನ್ನು ಕಡೆಗಣಿಸಬಾರದು. ಉತ್ತಮ ಆಹಾರ ಕ್ರಮ ಹೊಂದಬೇಕು ಮತ್ತು ವ್ಯಾಯಾಮ ಮಾಡಬೇಕು. ಅದರಿಂದ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳನ್ನು ಎದುರಿಸಬಹುದು’ ಎಂದು ನಿಮ್ಹಾನ್ಸ್‌ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು ಹೇಳಿದ್ದಾರೆ.
ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಆಯೋಜಿಸಿದ್ದ ಎರಡನೇ ಆವೃತ್ತಿಯ ‘ಹ್ಯಾಪಿಯೆಸ್ಟ್ ಹರ್ 2025’ ಸಮಾವೇಶದಲ್ಲಿ ಅವರು ಮಾತನಾಡಿದರು. ದಿನಪೂರ್ತಿ ನಡೆದ ಈ ಸಮಾವೇಶದಲ್ಲಿ ವೃತ್ತಿಪರ ಮಹಿಳೆಯರ ದೈಹಿಕ, ಮಾನಸಿಕ ಮತ್ತು ಜೀವನಶೈಲಿ ಆರೋಗ್ಯ ಸವಾಲುಗಳ ಕುರಿತು ವೈದ್ಯಕೀಯ ತಜ್ಞರು, ಪರಿಣತರು ಸಂವಾದ ನಡೆಸಿದರು.
ಈ ಸಮಾವೇಶವನ್ನು ಹ್ಯಾಪಿಯೆಸ್ಟ್ ಹೆಲ್ತ್‌ನ ಕೋ- ಚೇರ್‌ಮನ್ ಡೇವಿಸ್ ಕರೆಡನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಮ್ಹಾನ್ಸ್‌ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹ್ಯಾಪಿಯೆಸ್ಟ್ ಹೆಲ್ತ್- ನಾಲೆಡ್ಜ್‌ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘು ಕೃಷ್ಣನ್, ಮತ್ತು ಹ್ಯಾಪಿಯೆಸ್ಟ್ ಹೆಲ್ತ್ - ನಾಲೆಡ್ಜ್ ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿ ಜೋಶಿ ಮತ್ತು 250ಕ್ಕೂ ಮಂದಿ ಉಪಸ್ಥಿತರಿದ್ದರು.
ಒತ್ತಡ ಹೆಚ್ಚುತ್ತಿರುವ ಈ ಸಮಾಜದಲ್ಲಿ ಮಹಿಳೆಯರ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇದೆ. ಇಂಥಾ ಸಂದರ್ಭದಲ್ಲಿ ಈ ಸಮಾವೇಶವು ಪಿಸಿಓಎಸ್, ಒತ್ತಡ ಮತ್ತು ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚಿಸುವ ಮಹತ್ವದ ವೇದಿಕೆಯಾಗಿ ಮೂಡಿ ಬಂದಿದೆ.
ಸಮಾವೇಶದಲ್ಲಿ ನಡೆದ ಗೋಷ್ಠಿಗಳಲ್ಲಿ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಐವಿಎಫ್ ಕೇಂದ್ರದ ಸ್ತ್ರೀರೋಗ ತಜ್ಞೆ ಹಾಗೂ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಮಾಜಿ ಅಧ್ಯಕ್ಷೆ ಡಾ. ವಿದ್ಯಾ ವಿ. ಭಟ್, ದಿ ಆಲ್ಟರ್ನೇಟಿವ್ ಸ್ಟೋರಿಯ ನಿರ್ದೇಶಕ ಡಾ. ಪರಾಸ್ ಶರ್ಮಾ, ಪವರ್‌ಲಿಫ್ಟರ್, ಅಥ್ಲೀಟ್, ರಿವರ್ ಮೊಬಿಲಿಟಿಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಸರಸ್ವತಿ ಆನಂದ್ ಮತ್ತು ಬೆಂಗಳೂರು ಸರ್ಜಾಪುರದ ಮದರ್‌ಹುಡ್ ಹಾಸ್ಪಿಟಲ್ ನ ಸ್ತ್ರೀರೋಗ ತಜ್ಞೆ ಮತ್ತು ಫರ್ಟಿಲಿಟಿ ತಜ್ಞೆ ಡಾ. ಶಾರ್ವರಿ ಮುಂಡೆ, ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಮತ್ತು ಹೆಲ್ತ್ ಕೋಚ್ ಹಾಗೂ ಬೆಂಗಳೂರಿನ ಕ್ವಾ ನ್ಯೂಟ್ರಿಷನ್ ನ ಸಂಸ್ಥಾಪಕರಾದ ರ್‍ಯಾನ್ ಫೆರ್ನಾಂಡೋ ಭಾಗವಹಿಸಿದರು.