ವಿಶೇಷ ಸೌಲಭ್ಯಗಳುಳ್ಳ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚಳ: ವಿಶೇಷ ಲೇಖನ

| Published : Nov 15 2025, 01:00 AM IST

ಸಾರಾಂಶ

ಐಷಾರಾಮಿ ಮನೆಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಈ ಟ್ರೆಂಡ್‌ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಿ.ನ ಹೌಸಿಂಗ್ ಫೈನಾನ್ಸ್ ವಿಭಾಗದ ಬಿಜಿನೆಸ್ ಹೆಡ್ ಮನು ಸಿಂಗ್ ಅವರು ವಿವರವಾಗಿ ಬರೆದಿದ್ದಾರೆ.

- ಮನು ಸಿಂಗ್, ಬಿಜಿನೆಸ್ ಹೆಡ್ - ಹೌಸಿಂಗ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಲಿ . ‘ಸಾರ್ವಜನಿಕರ ಹೃದಯ ಮತ್ತು ಮನಸ್ಸಿನಲ್ಲಿ ಉಳಿಯುವ ಬದಲು, ನಾನು ನನ್ನ ಅಪಾರ್ಟ್‌ಮೆಂಟ್‌ನಲ್ಲಿಯೇ ಉಳಿಯಲು ಬಯಸುತ್ತೇನೆ.’

- ಹೀಗೆ ಹೇಳಿರುವುದು ಪ್ರಸಿದ್ಧ ಕಾಮಿಡಿಯನ್, ಬರಹಗಾರ, ನಟ, ನಿರ್ದೇಶಕ ವೂಡಿ ಅಲೆನ್. ಅವರ ಮಾತು ತಮಾಷೆಯಂತೆ ಕಂಡರೂ ಈ ಆಧುನಿಕ ಜಗತ್ತಲ್ಲಿ ಬದುಕುವ ಜನರ ಮನಸ್ಥಿತಿಯನ್ನೂ ಸಾರುತ್ತದೆ. ಈಗಿನ ಮಂದಿ ಶಾಂತವಾದ, ಸುರಕ್ಷಿತವಾದ ಮತ್ತು ಎಲ್ಲಾ ಐಷಾರಾಮಿತನ ಲಭ್ಯವಿರುವ ಜಾಗದಲ್ಲಿರುವ ಇರಬೇಕೆಂದುಕೊಳ್ಳುವ ಅವನ ಮನಸ್ಥಿತಿಯನ್ನು ತಿಳಿಸುತ್ತದೆ.ಈ ಟ್ರೆಂಡ್ ಮಹಾನಗರಗಳಲ್ಲಿ ಮಾತ್ರವಲ್ಲ, ಸಣ್ಣ ನಗರಗಳಲ್ಲಿಯೂ ಚಾಲ್ತಿಯಲ್ಲಿದೆ. ರೆಡ್‌ಸೀರ್ ಸರ್ವೇ ಪ್ರಕಾರ ಮಿಲೇನಿಯಲ್ ಗಳು ಮತ್ತು ಜೆನ್ ಜೀ ಖರೀದಿದಾರರು ಡೆವಲಪರ್‌ಗಳನ್ನು ‘ಸಾಂಪ್ರದಾಯಿಕತೆಯಿಂದ ಅನುಕೂಲತೆ’ ಒದಗಿಸುವಂತೆ ಬದಲಿಸುತ್ತಿದ್ದಾರೆ.. ಅವರು ತಮ್ಮ ಅಭಿರುಚಿಗೆ ತಕ್ಕಂತೆ ಸೊಗಸಾದ, ಬುದ್ಧಿವಂತ ಮತ್ತು ಸುಸ್ಥಿರ ವಾತಾವರಣವನ್ನು ವಿನ್ಯಾಸಗೊಳಿಸಲು ಪ್ರೇರೇಪಿಸುತ್ತಿದ್ದಾರೆ. 2030ರ ವೇಳೆಗೆ ಹೊಸ ಮನೆ ಖರೀದಿದಾರರಲ್ಲಿ ಶೇ.60 ಮಂದಿ ಇವರೇ ಆಗಿರುತ್ತಾರೆ ಎಂದು ಜಾಗತಿಕ ರಿಯಾಲ್ಟಿ ಸಂಸ್ಥೆ ಜೆಎಲ್ಎಲ್ ಅಭಿಪ್ರಾಯಪಟ್ಟಿದೆ. ಆದ್ದರಿಂದ ರಿಯಲ್ ಎಸ್ಟೇಟ್ ಟ್ರೆಂಡ್‌ಗಳು, ವಸತಿ ಅಗತ್ಯತೆಗಳು ಮತ್ತು ಐಷಾರಾಮಿತನದ ಮನೆ ಖರೀದಿ ಆಕಾಂಕ್ಷೆ, ಸುಲಭ ಫೈನಾನ್ಸ್ ಸೌಲಭ್ಯ, ನೀತಿ ಸುಧಾರಣೆಗಳು ಮತ್ತು ಜಾಗತಿಕ ಟ್ರೆಂಡ್‌ ಗಳ ಕಾರಣದಿಂದ ಭಾರೀ ಬದಲಾವಣೆ ಉಂಟಾಗಲಿದೆ.ಐಷಾರಾಮಿ ವಸತಿಗೆ ವ್ಯವಸ್ಥೆಗೆ ಬೇಡಿಕೆ

2024ರ ಅನರಾಕ್ ರಿಪೋರ್ಟ್ ಪ್ರಕಾರ, ₹1.5 ಕೋಟಿಗಿಂತ ಹೆಚ್ಚು ಮೌಲ್ಯದ ಐಷಾರಾಮಿ ಮನೆ ಮೇಲಿನ ಬೇಡಿಕೆ ಶೇ.24ರಷ್ಟು ಜಾಸ್ತಿಯಾಗಿದೆ. ಖರೀದಿದಾರರು ಉತ್ತಮ ಸಂಪರ್ಕ, ಸೌಕರ್ಯ, ಸೌಲಭ್ಯ ಹೊಂದಿರುವ ಸ್ಮಾರ್ಟ್‌ ಇಂಟಿಗ್ರೇಟೆಡ್ ಮನೆಗಳು, ಉತ್ತಮ ಲೇಔಟ್‌ಗಳು ಮತ್ತು ಗೇಟೆಡ್ ಕಾಲೊನಿಗಳನ್ನು ಬಯಸುತ್ತಿದ್ದಾರೆ. ಬಹುತೇಕರು ವಿಶಾಲ ಮನೆಗಳು, ಆಧುನಿಕ ಸೌಲಭ್ಯಗಳು, ಸೊಗಸಾದ ಹೊರಾಂಗಣ ಸೌಲಭ್ಯ ಮತ್ತು ವಿಶೇಷ ಅನುಕೂಲತೆಗಳನ್ನು ಬಯಸುತ್ತಾರೆ.ಸಿ.ಬಿ.ಆರ್.ಇ ಇಂಡಿಯಾ ರಿಪೋರ್ಟ್ ಪ್ರಕಾರ, ಬೆಂಗಳೂರು, ದೆಹಲಿ-ಎನ್ ಸಿ ಆರ್, ಮುಂಬೈ, ಹೈದರಾಬಾದ್, ಪುಣೆ ಮತ್ತು ಚೆನ್ನೈಯಲ್ಲಿ ಐಷಾರಾಮಿ ಮನೆಗಳು ಕಳೆದ ಎರಡು ವರ್ಷಗಳಲ್ಲಿ ಶೇ.30ರಷ್ಟು ಬೆಳವಣಿಗೆ ಕಂಡಿವೆ. ಟೈಯರ್-2 ನಗರಗಳಲ್ಲೂ ಪ್ರೀಮಿಯಂ ಜೀವನಕ್ಕೆ ಖರೀದಿದಾರರು ಮರುಳಾಗಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು ಟೆಕ್ ಪಾರ್ಕ್‌ಗಳು ಮತ್ತು ಬಿಜಿನೆಸ್ ಹಬ್‌ಗಳ ಹತ್ತಿರದ ಇಂಟಿಗ್ರೇಟೆಡ್, ಗೇಟೆಡ್ ಹೌಸಿಂಗ್ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ.ಡೆವಲಪರ್‌ಗಳು ಸಾಥ್ ನೀಡುತ್ತಿದ್ದಾರೆ

ಈ ಬದಲಾವಣೆಗೆ ಹೊಂದಿಕೊಂಡಿರುವ ಟೈಯರ್-2 ಮತ್ತು ಟೈಯರ್-3 ನಗರಗಳ ಡೆವಲಪರ್‌ಗಳೂ ಸಾಂಪ್ರದಾಯಿಕ ಸೌಲಭ್ಯಗಳಾದ ಸ್ವಿಮ್ಮಿಂಗ್ ಪೂಲ್, ಜಿಮ್, ಜಾಗಿಂಗ್ ಟ್ರ್ಯಾಕ್ ಗಳನ್ನು ಮೀರಿ ಆಲೋಚಿಸುತ್ತಿದ್ದಾರೆ. ಅವರು ಕೋ-ವರ್ಕಿಂಗ್ ಸ್ಪೇಸ್‌ ಗಳು, ಸಮರ್ಥ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ, ಸೋಲಾರ್ ಲೈಟಿಂಗ್, ಇಕೋ-ಫ್ರೆಂಡ್ಲಿ ಸೌಲಭ್ಯಗಳು, ಮಳೆನೀರು ಕೊಯ್ಲು, ಗ್ರೇವಾಟರ್ ರೀಸೈಕ್ಲಿಂಗ್ ಮತ್ತು ಸ್ಮಾರ್ಟ್ ವೇಸ್ಟ್ ಮ್ಯಾನೇಜ್‌ಮೆಂಟ್ ಇತ್ಯಾದಿ ವ್ಯವಸ್ಥೆಗಳ ಕಡೆಗೆ ಗಮನ ಹರಿಸುತ್ತಿದ್ದಾರೆ.ಇಂದು ಅನೇಕ ಐಷಾರಾಮಿ ಪ್ರಾಜೆಕ್ಟ್‌ ಗಳು ಫ್ಲೆಕ್ಸಿಬಲ್ ಫ್ಲೋರ್ ಪ್ಲ್ಯಾನ್‌ ಗಳು, ಸ್ಮಾರ್ಟ್ ಹೋಮ್ ತಂತ್ರಜ್ಞಾನಗಳು ಮತ್ತು ಎನರ್ಜಿ-ಎಫಿಷಿಯೆಂಟ್ ಫೀಚರ್‌ಗಳನ್ನು ಒಳಗೊಂಡಿವೆ. ಯೋಗ ಸ್ಟುಡಿಯೋಗಳು, ಮೆಡಿಟೇಷನ್ ಝೋನ್‌ಗಳು ಮುಂತಾದ ಸೌಲಭ್ಯಗಳನ್ನು ರೂಪಿಸಲಾಗುತ್ತಿದೆ. ಆನ್-ಕಾಲ್ ಡಾಕ್ಟರ್‌ ಸೇವೆ, ಪೆಟ್-ಫ್ರೆಂಡ್ಲಿ ಪಾರ್ಕ್‌ಗಳು ಮತ್ತು ಗ್ರೂಮಿಂಗ್ ಝೋನ್‌ಗಳು ಮತ್ತಷ್ಟು ಐಷಾರಾಮಿತನ ಒದಗಿಸುತ್ತಿವೆ. ಕಸ್ಟಮೈಸೇಶನ್ ಮಾಡುವಾಗ ಕೆಲವರು ಟೆಂಪರೇಚರ್-ಕಂಟ್ರೋಲ್ಡ್ ವೈನ್ ಸೆಲ್ಲರ್, ಪ್ರೈವೇಟ್ ಆರ್ಟ್ ಗ್ಯಾಲರಿ ಅಥವಾ ಥಿಯೇಟರ್ ಮುಂತಾದ ವ್ಯವಸ್ಥೆ ಬೇಕೆಂದೂ ಹೇಳುತ್ತಾರೆ.ಬ್ಯಾಂಕ್‌ಗಳಿಂದ ಖರೀದಿದಾರರು ಮತ್ತು ಬಿಲ್ಡರ್‌ಗಳಿಗೆ ಆರ್ಥಿಕ ಬಲ

ಬ್ಯಾಂಕ್‌ ಗಳು ವೈವಿಧ್ಯಮಯ ಫೈನಾನ್ಸಿಂಗ್ ಆಯ್ಕೆಗಳು ಮತ್ತು ರಿಯಲ್ ಎಸ್ಟೇಟ್ ಸೇವೆಗಳ ಮೂಲಕ ಯುವ ಮತ್ತು ಮಹತ್ವಾಕಾಂಕ್ಷಿ ಜನರಿಗೆ ಐಷಾರಾಮಿ ಮನೆಗಳನ್ನು ಹೊಂದಲು ಸಹಾಯ ಮಾಡುತ್ತಿವೆ. ಅನೇಕ ಬ್ಯಾಂಕ್‌ಗಳು ವಿವಿಧ ರೀತಿಯ ಸಾಲಗಳು, ಹೆಚ್ಚಿನ ಮೊತ್ತದ ಸಾಲಗಳು, ಫ್ಲೆಕ್ಸಿಬಲ್ ಸಾಲಮರುಪಾವತಿ ಆಯ್ಕೆಗಳು ಮತ್ತು ವೈಯಕ್ತಿಕ ಸಲಹೆ ನೀಡುತ್ತವೆ. ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್ ಅಪ್ಲಿಕೇಶನ್, ಡಿಜಿಟಲ್ ಡಾಕ್ಯುಮೆಂಟೇಶನ್ ಮತ್ತು ಪ್ರಾಪರ್ಟಿ ಪೇಪರ್‌ಗಳ ಕಾನೂನು ಪರಿಶೀಲನೆ ಮುಂತಾದ ಕೆಲಸಗಳನ್ನು ಮಾಡಲು ಅನುವು ಮಾಡಿಕೊಟ್ಟು, ಅನುಕೂಲತೆಯನ್ನು ಹೆಚ್ಚಿಸಿವೆ.ಐಷಾರಾಮಿತನ ಮತ್ತು ಹೆಚ್ಚು ಪ್ರಯೋಜನ

ಆಧುನಿಕ ಐಷಾರಾಮಿ ಜೀವನವನ್ನು ಬಯಸುವವರು ಆ ಎಲ್ಲಾ ಸೌಲಭ್ಯಗಳು ಪ್ರಾಪರ್ಟಿಯ ಮೌಲ್ಯವನ್ನು ಹೆಚ್ಚಿಸುತ್ತವೆ ಎಂಬುದನ್ನು ನಂಬಿಕೊಂಡಿದ್ದಾರೆ. ಉತ್ತಮ ಹೂಡಿಕೆ ಎಂದು ಭಾವಿಸುತ್ತಾರೆ. ಉದಾಹರಣೆಗೆ ಐಷಾರಾಮಿ ವಸತಿ ವ್ಯವಸ್ಥೆ ಇದ್ದರೆ ಅದನ್ನು ಕಾರ್ಪೊರೇಟ್ ಪ್ರತಿನಿಧಿಗಳಿಗೆ ಬಾಡಿಗೆ ನೀಡಿದರೆ ಹೆಚ್ಚಿನ ಬಾಡಿಗೆ ಆದಾಯ ಬರುತ್ತವೆ ಎಂದು ಆಲೋಚಿಸುತ್ತಿದ್ದಾರೆ. ಸುಸ್ಥಿರ ಸೌಲಭ್ಯಗಳು ಪರಿಸರದ ಗುಣಮಟ್ಟ ಸುಧಾರಿಸುವುದಲ್ಲದೆ ದೀರ್ಘಕಾಲದಲ್ಲಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತವೆ. ಅನೇಕರು ಆರೋಗ್ಯ ಮತ್ತು ಮನರಂಜನಾ ಸೌಲಭ್ಯಗಳು ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುತ್ತವೆ ಎಂದು ನಂಬುತ್ತಾರೆ.ಅತ್ಯುತ್ತಮ ಆರ್ಥಿಕ ಅಭಿವೃದ್ಧಿ, ಆದಾಯ ಹೆಚ್ಚಳ, ಶ್ರೀಮಂತಪ ಸಂಖ್ಯೆಯಲ್ಲಿ ಹೆಚ್ಚಳ, ನಗರ ವಲಸೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಭಿರುಚಿ ಟ್ರೆಂಡ್ ಬದಲಾವಣೆ ಮುಂತಾದ ಕಾರಣಗಳಿಂದ ಭಾರತದ ಐಷಾರಾಮಿ ವಸತಿ ಮಾರುಕಟ್ಟೆಯು ಭಾರೀ ಬೆಳವಣಿಗೆ ಕಾಣಲಿದೆ. ಈ ಕನಸುಗಳನ್ನು ನನಸಾಗಿಸಲು ಬ್ಯಾಂಕ್‌ಗಳು ಸಿದ್ಧವಾಗಿರುವುದರಿಂದ ಹೊಸ ತಲೆಮಾರಿನ ಮಂದಿ ಆಧುನಿಕ ಮತ್ತು ಐಷಾರಾಮಿ ಸೌಲಭ್ಯ ಇರುವ ಸ್ಮಾರ್ಟ್ ಹೋಮ್‌ಗಳನ್ನು ಹುಡುಕುತ್ತಿದ್ದಾರೆ.