ಸಾರಾಂಶ
ಬೆಂಗಳೂರು : ರೋಟರಿ ಡಿಸ್ಟ್ರಿಕ್ಟ್ 3192 ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಾ.23ರಂದು ಬೆಳಗ್ಗೆ 8.30ಕ್ಕೆ ಸುಮನಹಳ್ಳಿ ವೃತ್ತ ಸಮೀಪದ ಡಾ। ಬಾಬು ಜಗಜೀವನ್‌ರಾಮ್ ಸಂಶೋಧನಾ ಸಂಸ್ಥೆ ಸಭಾಭವನದಲ್ಲಿ ದಕ್ಷಿಣ ಏಷ್ಯಾ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನ 2025 ಅನ್ನು ಆಯೋಜಿಸಲಾಗಿದೆ.
ಜಾಗತಿಕ ಶಾಂತಿ ಮತ್ತು ಸಂಘರ್ಷ ರಹಿತ ಸಮುದಾಯ ಈ ಸಮ್ಮೇಳನ ಮುಖ್ಯ ಉದ್ದೇಶ. ಶ್ರೀಲಂಕಾ, ಮಾಲ್ಡೀವ್ಸ್, ನೇಪಾಳ, ಭೂತಾನ್, ಬಾಂಗ್ಲಾದೇಶ ಸೇರಿದಂತೆ ಎಂಟು ರಾಷ್ಟ್ರಗಳ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಆರ್ಟ್ ಆಫ್ ಲೀವ್ಹಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ, ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಸರ್ಕಾರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ಡಾ। ಜಿ.ಪರಮೇಶ್ವರ್, ಸಂಸದ ಡಾ। ಸಿ.ಎನ್.ಮಂಜುನಾಥ್, ಶಾಸಕ ಮುನಿರತ್ನ, ಉದ್ಯಮಿ ಐಶ್ವರ್ಯಾ ಹೆಗಡೆ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಭಾಗವಹಿಸಲಿದ್ದಾರೆ.