ಪ್ರತಿಷ್ಠಿತ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್, ಝೀಮರ್ ಝಡ್8 ನಿಯೋ ಎಂಬ ಅತ್ಯಾಧುನಿಕ ಬಹು-ಉದ್ದೇಶದ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆಯನ್ನು ಹೊಂದಿರುವ ಸಂಚಾರಿ ಫೆಮ್ಟೋ ಸರ್ಜರಿ ಯುನಿಟ್ ಉದ್ಘಾಟಿಸಿದೆ. ಈ ಕುರಿತ ವಿವರಣೆ ಇಲ್ಲಿದೆ.
ಕನ್ನಡಪ್ರಭವಾರ್ತೆ ಬೆಂಗಳೂರುಪ್ರತಿಷ್ಠಿತ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್, ಝೀಮರ್ ಝಡ್8 ನಿಯೋ ಎಂಬ ಅತ್ಯಾಧುನಿಕ ಬಹು-ಉದ್ದೇಶದ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆಯನ್ನು ಹೊಂದಿರುವ ಸಂಚಾರಿ ಫೆಮ್ಟೋ ಸರ್ಜರಿ ಯುನಿಟ್ ಉದ್ಘಾಟಿಸಿದೆ.
ವಿಶೇಷವಾಗಿ ವಿನ್ಯಾಸಗೊಳಿಸಿದ ಮೊಬೈಲ್ ಯೂನಿಟ್‌ನಲ್ಲಿ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆ ಸ್ಥಾಪಿಸಲಾಗಿದ್ದು, ಈ ಮೂಲಕ ಬ್ಲೇಡ್ ರಹಿತ ಶಸ್ತ್ರಚಿಕಿತ್ಸೆ ಮಾಡಬಹುದಾಗಿದೆ. ಸಂಚಾರಿ ವ್ಯವಸ್ಥೆಯಿಂದ ನಗರದಲ್ಲಿರುವ ವಿವಿಧ ನೇತ್ರಧಾಮ ಕೇಂದ್ರಗಳಲ್ಲಿ ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದಾಗಿದೆ. ಈ ಮೂಲಕ ಒಂದೇ ಕೇಂದ್ರದಲ್ಲಿ ಈ ಸೌಲಭ್ಯ ಪಡೆಯುವ ಕಷ್ಟವಿಲ್ಲದೆ, ನೇತ್ರಧಾಮದ ಎಲ್ಲಾ ಶಾಖೆಗಳ ರೋಗಿಗಳು ಬ್ಲೇಡ್ರಹಿತ, ಹೆಚ್ಚು ನಿಖರವಾದ ಶಸ್ತ್ರಚಿಕಿತ್ಸಾ ಸೌಲಭ್ಯ ಹೊಂದಬಹುದಾಗಿದೆ.ಝೀಮರ್ ಝಡ್8 ನಿಯೋ ತಂತ್ರಜ್ಞಾನವನ್ನು ಸಾಮಾನ್ಯವಾಗಿ ಕಣ್ಣಿನ ಚಿಕಿತ್ಸೆಯಲ್ಲಿ ಬಳಸುವ ಲೇಸರ್ ಗಳ ಸ್ವಿಸ್ ಆರ್ಮಿ ನೈಫ್ ಎಂದು ಕರೆಯುತ್ತಾರೆ. ಇದನ್ನು ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುತ್ತಿದ್ದು, ಇದನ್ನು ಬಳಸಿದರೆ ನಿಖರವಾಗಿ ಚಿಕಿತ್ಸೆ ಮಾಡಬಹುದು ಮತ್ತು ಬೇಗ ಗುಣವಾಗುತ್ತವೆ. ಫೆಮ್ಟೋ ಸಹಾಯದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಕನ್ನಡಕ ಅವಲಂಬನೆ ಕಡಿಮೆ ಮಾಡುವ ಕ್ಲಿಯರ್ ಮತ್ತು ಲಸಿಕ್ ನಂತಹ ದೃಷ್ಟಿ ಸಮಸ್ಯೆ ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಗಳು ಹಾಗೂ ಕೆರಟೋಕೋನಸ್ ಅಥವಾ ಹಾನಿಗೊಳಗಾದ ಕಾರ್ನಿಯಾ ಚಿಕಿತ್ಸೆಗಳನ್ನು ಈ ತಂತ್ರಜ್ಞಾನದಲ್ಲಿ ಮಾಡಬಹುದಾಗಿದೆ. ಈ ಎಲ್ಲವನ್ನೂ ಬ್ಲೇಡ್ ಬದಲು ಲೇಸರ್ ಪಲ್ಸ್ ಗಳ ಮೂಲಕ ಮಾಡುವುದರಿಂದ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದಾಗಿದೆ ಮತ್ತು ರೋಗಿಗಳಿಗೆ ಹೆಚ್ಚು ಆರಾಮದಾಯಕವಾಗಿರುತ್ತದೆ.
ಈ ಕುರಿತು ಮಾತನಾಡಿರುವ ನೇತ್ರಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸುಪ್ರಿಯಾ ಶ್ರೀಗಣೇಶ್ ಅವರು, ‘ಇಂದಿನ ರೋಗಿಗಳು ಹೆಚ್ಚು ನಿಖರತೆ ಮತ್ತು ಬೇಗ ಚೇತರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಝಡ್8 ನಿಯೋ ತಂತ್ರಜ್ಞಾನ ಈ ಬಯಕೆಯನ್ನು ಪೂರೈಸಲು ನಮಗೆ ಅನುವು ಮಾಡಿಕೊಡಲಿದೆ. ಯುವ ವೃತ್ತಿಪರರು ಕನ್ನಡಕಕ್ಕೆ ಬದಲಾಗಿ ಬೇಗನೆ ಮಾಡಬಹುದಾದ ಬ್ಲೇಡ್ ರಹಿತ ಚಿಕಿತ್ಸಾ ಆಯ್ಕೆಯನ್ನು ಬಯಸಿದರೂ ಅಥವಾ ಹಿರಿಯರು ಸುರಕ್ಷಿತ ಮತ್ತು ನಿಖರವಾದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಬಯಸಿದರೂ ಝಡ್8 ನಿಯೋ ತಂತ್ರಜ್ಞಾನ ಬಳಸಿಕೊಂಡು ಸೂಕ್ತ ಚಿಕಿತ್ಸೆ ನೀಡಬಹುದಾಗಿದ್ದು, ಈ ಸೌಲಭ್ಯವು ವಿವಿಧ ದೃಷ್ಟಿದೋಷ ಸಮಸ್ಯೆಗಳನ್ನು ಪೂರೈಸುತ್ತದೆ’ ಎಂದು ಹೇಳಿದರು.ರೋಗಿಗಳು ಈಗ ಕಣ್ಣಿನ ಚಿಕಿತ್ಸೆಗೆ ಅತ್ಯುತ್ತಮ ತಂತ್ರಜ್ಞಾನಗಳನ್ನು ಹುಡುಕುತ್ತಿರುವುದರಿಂದ, ಬ್ಲೇಡ್ ರಹಿತ ಶಸ್ತ್ರಚಿಕಿತ್ಸೆಗಳು ಅವುಗಳ ನಿಖರತೆ, ಆರಾಮದಾಯಕತೆ ಮತ್ತು ಕಡಿಮೆ ವಿಶ್ರಾಂತಿ ಅಗತ್ಯತೆಯಿಂದ ಹೆಚ್ಚು ಆದ್ಯತೆ ಪಡೆಯುತ್ತಿವೆ. ಝಡ್8 ನಿಯೋ ತಂತ್ರಜ್ಞಾನವು ಪ್ರೀಮಿಯಂ ಇಂಟ್ರಾಆಕ್ಯುಲರ್ ಲೆನ್ಸ್ ಗಳು ಮತ್ತು ಸುಧಾರಿತ ಯೋಜನಾ ಸಾಫ್ಟ್ ವೇರ್ ನೊಂದಿಗೆ ಸಂಯೋಜನೆ ಹೊಂದುವ ಸಾಮರ್ಥ್ಯ ಹೊಂದಿರುವುದರಿಂದ ರೋಗಿಗಳು ಹೈ ಡೆಫಿನಿಷನ್ ದೃಷ್ಟಿಯನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಇದರಿಂದ ಕನ್ನಡಕ ಅವಲಂಬನೆ ಕಡಿಮೆಯಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿರುವ ನೇತ್ರಧಾಮದ ಚೇರ್ ಮ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರೊ. ಡಾ. ಶ್ರೀ ಗಣೇಶ್ ಅವರು, ‘ಭಾರತದಲ್ಲಿ ಬ್ಲೇಡ್‌ರಹಿತ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಬಳಸುವ ಕ್ಯಾಟಲಿಸ್ ಪ್ಲಾಟ್‌ಫಾರ್ಮ್ ಅನ್ನು ಅಳವಡಿಸಿಕೊಂಡ ಮೊದಲಿಗರು ನಾವೇ. ಜೊತೆಗೆ ದೇಶದಲ್ಲಿ ಸ್ಮೈಲ್ ಪ್ರೊ ಒದಗಿಸುವ ವಿಸುಮ್ಯಾಕ್ಸ್ 800 ಸಿಸ್ಟಮ್ ಅನ್ನು ಪರಿಚಯಿಸಿದ ಮೊದಲಿಗರು ಕೂಡಾ ನಾವೇ. ಝಡ್8 ನಿಯೋ ತಂತ್ರಜ್ಞಾನದ ಮೂಲಕ ನಾವು ಈಗ ಮತ್ತೊಂದು ಎತ್ತರಕ್ಕೆ ಏರಿದ್ದು, ಕೇವಲ ನಮ್ಮ ಕೇಂದ್ರದೊಳಗಿನ ಸಾಮರ್ಥ್ಯವನ್ನು ಅಪ್‌ಗ್ರೇಡ್ ಮಾಡುವುದರ ಜೊತೆಗೆ, ಸ್ವಲ್ಪ ಭಿನ್ನವಾಗಿ ಹೊಸ ತಂತ್ರಜ್ಞಾನವನ್ನೇ ಸಂಚಾರಿ ವ್ಯವಸ್ಥೆ ಮೂಲಕ ಒದಗಿಸಲಿದ್ದೇವೆ’ ಎಂದು ಹೇಳಿದರು.ಪೈಲೆಟ್ ಹಂತದಲ್ಲಿ ಝಡ್8 ನಿಯೋ ತಂತ್ರಜ್ಞಾನ ಬಳಸಿ 600ಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ಮತ್ತು ಸುಮಾರು 300 ಕಾರ್ನಿಯಾ ಮತ್ತು ರಿಫ್ರ್ಯಾಕ್ಟಿವ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರಲ್ಲಿ ಬ್ಲೇಡ್ ರಹಿತ ಲಸಿಕ್ ಮತ್ತು ಬಹಳ ಜನಪ್ರಿಯವಾಗುತ್ತಿರುವ ಕ್ಲಿಯರ್ ಚಿಕಿತ್ಸೆಗಳೂ ಸೇರಿವೆ. ಸುಧಾರಿತ ಸಾಫ್ಟ್ ವೇರ್ ಎಂಜಿನ್ ಮತ್ತು ಬಲಿಷ್ಠ ಕಾರ್ಯಕ್ಷಮತೆಯಿಂದ ಹೆಚ್ಚಿನ ರೋಗಿಗಳು ಮೊದಲನೇ ದಿನವೇ ಸ್ಪಷ್ಟವಾದ ದೃಷ್ಟಿ ಮರಳಿ ಪಡೆಯುತ್ತಾರೆ ಮತ್ತು ಒಂದು ವಾರದೊಳಗೆ ಪೂರ್ಣ ದೃಷ್ಟಿ ಹೊಂದುತ್ತಾರೆ.
ನೇತ್ರಧಾಮ ಈ ಸಂಚಾರಿ ಫೆಮ್ಟೋ ಮಾದರಿಯನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದು, ದಕ್ಷಿಣ ಭಾರತದ ಹೆಚ್ಚು ಕೇಂದ್ರಗಳಿಗೆ ಈ ಸಂಚಾರಿ ಘಟಕವನ್ನು ತಲುಪಿಸಿ, ಪ್ರಾದೇಶಿಕ ವ್ಯವಸ್ಥೆಗೆ ಜಾಗತಿಕ ದರ್ಜೆಯ ತಂತ್ರಜ್ಞಾನವನ್ನು ಪರಿಚಯಿಸುವ ತನ್ನ ಪರಂಪರೆಯನ್ನು ಮುಂದುವರಿಸಲಿದೆ.