ಸಾರಾಂಶ
ಇಷ್ಟು ದಿನ ಕೇಳಿದ ಕತೆಗಳಿಗಿಂತ ಇದು ಭಿನ್ನ -ವಿಭಿನ್ನವಾಗಿದೆ. ವಿಶೇಷವಾಗಿದೆ. ತಿನ್ನಲು ಎಲ್ಲರೂ ಇಷ್ಟಪಡುವ ಕೆಂಪು ಕಂಪಾದ ಕಲ್ಲಂಗಡಿಯ ಪೌಡರ್ ಮಾಡಿ ಮಾರುವ ಉದ್ಯಮ ಬೆಳೆದು ನಿಂತ ಕತೆ ಇದು.
ಇಷ್ಟು ದಿನ ಕೇಳಿದ ಕತೆಗಳಿಗಿಂತ ಇದು ಭಿನ್ನ -ವಿಭಿನ್ನವಾಗಿದೆ. ವಿಶೇಷವಾಗಿದೆ. ತಿನ್ನಲು ಎಲ್ಲರೂ ಇಷ್ಟಪಡುವ ಕೆಂಪು ಕಂಪಾದ ಕಲ್ಲಂಗಡಿಯ ಪೌಡರ್ ಮಾಡಿ ಮಾರುವ ಉದ್ಯಮ ಬೆಳೆದು ನಿಂತ ಕತೆ ಇದು.
ಕಾರವಾರ ತಾಲೂಕಿನಲ್ಲಿರುವ ಕಾವೇರಿ ಆಗ್ರೋ ಕಂಪನಿ ಕಟ್ಟಿ ಬೆಳೆಸುತ್ತಿರುವ ಸುದೇಶ್ ಕೊಯ್ರ ನಾಯಕ್ ಈ ಕತೆಯ ನಾಯಕ. ಸುದೇಶ್ ಕೊಯ್ರ ನಾಯಕ್, ಅನೇಕ ಔಷಧ ಕಂಪನಿಗಳಲ್ಲಿ 13 ವರ್ಷ ಕೆಲಸ ಮಾಡಿದ್ರು. ಗೋವಾ, ಬೆಂಗಳೂರು, ಅಂಕೋಲದ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಪಡೆದ ಅನುಭವ ಸ್ವಂತದ್ದು ಮಾಡಲು ಪ್ರೇರಣೆಯಾಯಿತು. ಸ್ವಂತದ್ದು ಮಾಡಲು ಕೆಲಸ ಬಿಟ್ಟ ಮೇಲೆ ಲಾಂಡ್ರಿಯಿಂದ ಆರಂಭಿಸಿ ಅನೇಕ ಸ್ವಂತ ಉದ್ಯಮ ಮಾಡಲು ಪ್ರಯತ್ನಿಸಿದ್ರು. ಆದರೆ, ಅವರ ಕೈ ಹಿಡಿದದ್ದು ಹಣ್ಣು ಪುಡಿಯಾಗಿಸೋ ಉದ್ಯಮ. ಮೂರು ವರ್ಷಗಳ ಹಿಂದೆ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಮಗದಿಂದ ಪಿಎಂಎಫ್ಎಂಇ 34 ಲಕ್ಷ ರೂಪಾಯಿ ಸಾಲ ಪಡೆದು ಕಾವೇರಿ ಆಗ್ರೋ ಹೆಸರಿನಲ್ಲೇ ಕಂಪನಿ ಮತ್ತು ಉತ್ಪನ್ನ ಶುರು ಮಾಡಿದ್ರು.
ತಾವೇ ಮೂರು ಎಕರೆಯಲ್ಲಿ ಬೆಳೆದ ಕಲ್ಲಂಗಡಿಯನ್ನೂ ಸೇರಿಸಿ ರೈತರಿಂದ ನೇರ ಖರೀದಿಸಿ ಸ್ಪ್ರೇ ಡ್ರೈ ತಾಂತ್ರಿಕತೆ ಬಳಸಿ ಕಲ್ಲಂಗಡಿ ಹಣ್ಣಿನ ರಸವನ್ನು ಪೌಡರ್ ಮಾಡುತ್ತಿದ್ದೇವೆ. ಇದಕ್ಕೆ ಔಷಧ ಉತ್ಪಾದನೆ ಮತ್ತು ಆಯುರ್ವೇದ ವೈದ್ಯದಲ್ಲಿ ಭಾರೀ ಬೇಡಿಕೆ ಇದೆ. ಜೊತೆಗೆ ಅನೇಕ ಆಹಾರ ಉದ್ಯಮಗಳು ನಮ್ಮಿಂದ ಹಣ್ಣಿನ ಪುಡಿ ಪಡೆಯುತ್ತಿವೆ ಎಂದು ಕಾವೇರಿ ಆಗ್ರೋ ಸಂಸ್ಥಾಪಕರಾದ ಸುದೇಶ್ ಕೊಯ್ರ ನಾಯಕ್, ಕನ್ನಡಪ್ರಭಕ್ಕೆ ವಿವರಿಸಿದರು.
ಪಪ್ಪಾಯಿ ಎಲೆ ಬೇಕು ಮಾವಿನಹಣ್ಣಿನ್ನು ಸಹ ಪುಡಿ ಮಾಡಿ ಬಳಸಬಹುದು. ಜಾಕೋಲೇಟ್, ಐಸಕ್ರೀಮಿಗೂ ಇದನ್ನ ಬಳಸಬಹುದು. ಚಿಕ್ಕೂ ಪೌಡರಿಗೂ ಡಿಮ್ಯಾಂಡ್ ಇದೆ. ಡೆಂಗ್ಯೂ ಸಂಬಂಧಿತ ಔಷಧ ಕಂಪನಿಯೊಂದು ಪಪ್ಪಾಯಿ ಎಲೆಯ ಉತ್ಪನ್ನಕ್ಕಾಗಿ ಬೇಡಿಕೆ ಇಟ್ಟಿದೆ. ಆದರೆ, ಇದಕ್ಕೆ ಬೇಕಾಗುವ ಪಪ್ಪಾಯಿಯ ಹಸಿ ಎಲೆ ಸಿಗುತ್ತಿಲ್ಲ. ಪಪ್ಪಾಯಿ ಬೆಳೆಯುವ ರೈತರು ಇದ್ದರೆ ಅಥವಾ ಬೆಳೆಯುವ ಆಸೆ ಇದ್ದವರು ನಮ್ಮನ್ನು ಸಂಪರ್ಕಿಸಿದರೆ ಪಪ್ಪಾಯಿ ಹಣ್ಣ ಮತ್ತು ಎಲೆ ಖರೀದಿಸಲು ಸಕಲ ರೀತಿಯ ನೆರವು ನೀಡಲಿದ್ದೇವೆ.
ಅದನ್ನು ಕೊಂಡುಕೊಳ್ಳುವ ಖಚಿತ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಪಪ್ಪಾಯಿ ಎಲೆಯನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ ತರಬೇಕು. ಡೆಂಗ್ಯು ಗೆ ಪರಿಣಾಮಕಾರಿ ಔಷಧ ಎಂದೇ ಗುರುತಿಸಿಕೊಂಡಿರುವ ಪಪ್ಪಾಯಿ ಎಲೆ ಕೊಳ್ಳಲು ಸಿದ್ಧವಿದ್ದೇವೆ ಎಂದರು ಸುದೇಶ್. 8 ಜನರಿಗೆ ಉದ್ಯೋಗ ನೀಡಿರುವ ಕಾವೇರಿ ಆಗ್ರೋ ಕಳೆದ ವರ್ಷ 20 ಲಕ್ಷ ರೂಪಾಯಿ ವಹಿವಾಟು ನಡೆಸಿದೆ. ನಾನು ಔಷಧ ಕಂಪನಿಗಳಲ್ಲಿ ಕೆಲಸ ಮಾಡುವಾಗ ಆಗಿರೋ ಸ್ನೇಹ, ಪರಿಚಯಗಳು ಮಾರ್ಕೆಟಿಂಗ್ ಕೆಲಸಕ್ಕೆ ನೆರವಾಗಿದೆ. ಯಾವುದೇ ರೀತಿಯ ಹಣ್ಣನ್ನು ಪುಡಿಯಾಗಿಸಿ ಕೊಡುವ ತಾಂತ್ರಿಕತೆ ನಮ್ಮಲ್ಲಿದೆ. 1 ಟನ್ ಉತ್ಪಾದನಾ ಸಾಮರ್ಥ್ಯವನ್ನು 5 ಟನ್ನಿಗೆ ಹೆಚ್ಚಿಸುವ ಗುರಿ ಹೊಂದಿದ್ದೇನೆ. ಯಾವುದೇ ಹಣ್ಣಿನ ಬೆಳೆಗಾರರು ಮುಂಚಿತವಾಗಿ ಬಂದಲ್ಲಿ ಅವರ ಹಣ್ಣು ನಮಗೆ ಅಗತ್ಯ ಇದ್ದರೆ ಖರೀದಿಸಲು ಹಿಂಜರಿಯುವುದಿಲ್ಲ ಎಂದರು.
ನಾವು ಮಾಡುವ ಉತ್ಪನ್ನಗಳು ಸಾಮಾನ್ಯರ ದಿನನಿತ್ಯದ ನೇರ ಅಗತ್ಯ ಇರುವುದಿಲ್ಲ. ಆದರೆ ಅನೇಕ ಅಲೋಪತಿ ಮತ್ತು ಆಯುರ್ವೇದ ಔಷಧಗಳಿಗೆ ನಮ್ಮ ಉತ್ಪನ್ನಗಳೇ ಬೇಕು. ನಾವು ಹೆಚ್ಚಾಗಿ ದೊಡ್ಡ ದೊಡ್ಡ ಔಷಧ ಕಂಪನಿಗಳ ಜೊತೆಗೇ ಬ್ಯೂಸಿನೆಸ್ ಮಾಡುತ್ತಿದ್ದೇವೆ. ಗಿಡಮೂಲಿಕೆಗಳ ರಸ ಮತ್ತು ಪೌಡರ್ ಎರಡೂ ಉತ್ಪನ್ನಗಳನ್ನು ಸಿದ್ಧಪಡಿಸಲು ನಾವು ರೆಡಿ ಇದ್ದೇವೆ. ನಾವು ಯಾವುದೇ ರಸಾಯನಿಕ ಬಳಸದೆ ಹಣ್ಣಿನ ರಸವನ್ನು ಪುಡಿಯಾಗಿ ಪರಿವರ್ತನೆ ಮಾಡಬಲ್ಲೆವು. ಇವನ್ನು ಎರಡರಿಂದ ಎರಡೂವರೆ ವರ್ಷದವರೆಗೂ ಕೆಡದಂತೆ ಇಡಬಹುದು. ಈ ವರ್ಷ ಮತ್ತಷ್ಟು ಆರ್ಡರ್ ಬರುವ ನಿರೀಕ್ಷೆಯಲ್ಲಿದ್ದೇನೆ. ದೇಹದ ತೂಕ ಇಳಿಸುವ ಉತ್ಪನ್ನವನ್ನು ಸಿದ್ಧಪಡಿಸಲು ಯೋಚನೆ ನಡೆದಿದೆ ಎಂದೂ ಸುದೇಶ್ ಹೇಳಿದರು.
ಮೊದ ಮೊಲಿಗೆ ಹೇಗಪ್ಪ ಅನ್ನೋ ಭಯವಿತ್ತು. ಆದರೆ, ಇದರ ಉದ್ಯಮಿಗಳು ಪರಿಚಯ ಇದ್ದಿದ್ದರಿಂದ ಮಾರ್ಕೆಟಿಂಗ್ಗೆ ಅನುಕೂಲವಾಗಿದೆ. ಕೃಷಿ ಇಲಾಖೆಯ ನೋಡಲ್ ಅಧಿಕಾರಿ ಸುಜಯ್ ಭಟ್ ಅವರ ಮಾರ್ಗದರ್ಶನದಲ್ಲಿ ಇದನ್ನು ಶುರು ಮಾಡಿ ಯಶಸ್ವಿಯಾಗಿದ್ದೇನೆ. ಹಣ್ಣು ಬೆಳೆಯುವ ರೈತರು ಕಾವೇರಿ ಆಗ್ರೋ ಸಂಪರ್ಕಿಸಿ ಹಣ್ಣು ಮಾರಿ ಹೆಚ್ಚಿನ ಲಾಭ ಪಡೆಯಬಹುದು. ಕಪೆಕ್ ಅಧಿಕಾರಿಗಳು ವಿವಿಧ ಮೇಳಗಳಲ್ಲಿ ನೀಡಿದ ಉಚಿತ ಮಳಿಗೆಯ ಅವಕಾಶದಿಂದ ಅನೇಕ ಅವಕಾಶಗಳು ಒದಗಿ ಬಂದಿವೆ. ಕಪೆಕ್ ಯಂತ್ರೋಪಕರಣಕ್ಕೆ ಸಾಲ ನೀಡುತ್ತದೆ. ಉತ್ಪಾದನಾ ಘಟಕಗಳ ನಿರ್ವಹಣೆಗೂ ಸಾಲ ನೀಡಿದರೆ ಅನುಕೂಲ ಆಗುತ್ತದೆ. ಎಂದೂ ಕಾವೇರಿ ಆಗ್ರೋದ ಸುದೇಶ್ ಸ್ಪಷ್ಟಪಡಿಸಿದರು.
ಕಾವೇರಿ ಆಗ್ರೋ ಉತ್ಪನ್ನಗಳಿಗಾಗಿ ಅಥವಾ ಹಣ್ಣು, ಪಪ್ಪಾಯಿ ಮಾರುವವರು ಸಂಪರ್ಕಿಸಿ - 9480517060 15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.