ಸಾರಾಂಶ
ಬೇಸಿಗೆಯಲ್ಲಿ ಸೆಕೆ ಹೆಚ್ಚಾಗಿದೆ. ಬಿಸಿಲ ಝಳಕ್ಕೆ ಬೇಗ ಸುಸ್ತಾಗುತ್ತದೆ. ಹೀಗಾಗಿ ಸೆಕೆಯ ತೊಂದರೆಗಳಿಗೆ ಇತಿಶ್ರೀ ಹಾಡಲು ಸ್ಯಾಮ್‌ಸಂಗ್ ಕಂಪನಿಯು ತನ್ನ ಹೊಸ ಆವಿಷ್ಕಾರ ‘ಕಸ್ಟಮೈಸ್ಡ್ ಕೂಲಿಂಗ್’ ಅನ್ನು ಪರಿಚಯಿಸಿದೆ.
ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿರುವ ಈ ಫೀಚರ್ ಸ್ಯಾಮ್‌ಸಂಗ್ ಸ್ಮಾರ್ಟ್ ಏರ್ ಕಂಡೀಷನರ್‌ಗಳನ್ನು ಡಬ್ಲ್ಯೂಡಬ್ಲ್ಯೂಎಸ್‌ಟಿ (ವರ್ಕ್ಸ್ ವಿಥ್ ಸ್ಮಾರ್ಟ್‌ಥಿಂಗ್ಸ್) ಸರ್ಟಿಫೈಡ್ ಫ್ಯಾನ್‌ಗಳು ಮತ್ತು ಸ್ವಿಚ್‌ಗಳೊಂದಿಗೆ ಸಂಯೋಜಿಸಿ ಕಸ್ಟಮೈಸ್ಡ್ ಕೂಲಿಂಗ್ ಪರಿಹಾರ ಒದಗಿಸುತ್ತದೆ. ಇದರಿಂದ ವಿದ್ಯುತ್ ಉಳಿತಾಯ ಆಗುವುದರ ಜೊತೆಗೆ ನಿರಂತರವಾಗಿ ತಂಪಾದ, ಆರಾಮದಾಯಕ ವಾತಾವರಣ ಸೃಷ್ಟಿಯಾಗುತ್ತದೆ.
ಭಾರತದಲ್ಲಿ ವಿದ್ಯುತ್ ಬೇಡಿಕೆ ಪ್ರತೀ ವರ್ಷ ಶೇ.6-7 ರಷ್ಟು ಬೆಳೆಯುತ್ತಿದೆ, ಇದಕ್ಕೆ ಬೇಸಿಗೆಯಲ್ಲಿ ಏರ್ ಕಂಡೀಷನರ್‌ಗಳ ಬಳಕೆಯ ಹೆಚ್ಚಳವೂ ಒಂದು ಕಾರಣವಾಗಿದೆ. ಬಹಳಷ್ಟು ಮನೆಗಳಲ್ಲಿ ಆರಾಮದಾಯಕ ವಾತಾವರಣಕ್ಕಾಗಿ ಏರ್ ಕಂಡಿಷನರ್‌ಗಳು ಮತ್ತು ಫ್ಯಾನ್‌ಗಳು ಎರಡನ್ನೂ ಬಳಸಲಾಗುತ್ತದೆ.
ಸ್ಯಾಮ್‌ಸಂಗ್‌ನ ಒಂದು ಅಧ್ಯಯನದ ಪ್ರಕಾರ, ಭಾರತದ ಹೆಚ್ಚಿನ ಮನೆಗಳಲ್ಲಿ ಕನಿಷ್ಠ ಮೂರು ಫ್ಯಾನ್ ಗಳಿವೆ. ಇದಲ್ಲದೆ, ಶೇ.50 ಭಾರತೀಯ ಗ್ರಾಹಕರು ಏರ್ ಕಂಡೀಷನರ್ ಮತ್ತು ಫ್ಯಾನ್ ಗಳನ್ನು ಏಕಕಾಲದಲ್ಲಿ ಬಳಸುತ್ತಾರೆ. ರಾತ್ರಿಯಲ್ಲಿ ತುಂಬಾ ತಂಪಾದಾಗ ಏಸಿ ಆಫ್ ಮಾಡುವುದು ಅಥವಾ ಕೊಠಡಿ ಬಿಸಿಯಾದಾಗ ಮತ್ತೆ ಆನ್ ಮಾಡುವುದು ಮಾಡುತ್ತಾರೆ.
ಈ ಸಮಸ್ಯೆಯನ್ನು ಗುರುತಿಸಿರುವ ಸ್ಯಾಮ್‌ಸಂಗ್ 2025ರ ಬೀಸ್ಪೋಕ್ ಎಐ ಏರ್ ಕಂಡೀಷನರ್ ಗಳಲ್ಲಿ ಸ್ಮಾರ್ಟ್‌ಥಿಂಗ್ಸ್ ಆಧರಿತ ‘ಕಸ್ಟಮೈಸ್ಡ್ ಕೂಲಿಂಗ್’ ಫೀಚರ್ ಅನ್ನು ಪರಿಚಯಿಸಿದೆ. ಇದು ರಾತ್ರಿ ಮತ್ತು ಹಗಲಿನಲ್ಲಿ ಗ್ರಾಹಕರು ತಾವೇ ಎದ್ದು ಹೋಗಿ ಸ್ವತಃ ಹೊಂದಾಣಿಕೆಯ ಮಾಡುವ ಅಗತ್ಯವನ್ನು ತೊಡೆದು ಸ್ವಯಂಚಾಲಿತವಾಗಿ ಆರಾಮದಾಯಕ ತಾಪಮಾನವನ್ನು ಹೊಂದುವ ಸೌಕರ್ಯವನ್ನು ಒದಗಿಸುತ್ತದೆ.
ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್ ಏಸಿಗಳನ್ನು ಸ್ಮಾರ್ಟ್‌ಥಿಂಗ್ಸ್ ಪ್ರಮಾಣೀಕೃತ ಫ್ಯಾನ್‌ಗಳು ಮತ್ತು ಸ್ವಿಚ್‌ಗಳೊಂದಿಗೆ ಸಂಯೋಜನೆ ಮಾಡಿ ಉತ್ತಮ ಸೌಕರ್ಯ ಒದಗಿಸುತ್ತದೆ. ಇದರಿಂದ ಆರಾಮದಾಯಕತೆ ಹೆಚ್ಚುವುದರ ಜೊತೆಗೆ ವಿದ್ಯುತ್ ಬಿಲ್ ಗಳನ್ನು ಕಡಿಮೆ ಮಾಡಬಹುದಾಗಿದೆ.‘ಕಸ್ಟಮೈಸ್ಡ್ ಕೂಲಿಂಗ್’ ವೈಶಿಷ್ಟ್ಯವು ನೀವೇ ಸ್ವತಃ ಅಡ್ಜಸ್ಟ್ ಮಾಡಬೇಕಾದ ಅಗತ್ಯವನ್ನು ತೊಡೆದುಹಾಕುತ್ತದೆ. ಸಮತೋಲಿತ ಮತ್ತು ಅತ್ಯುತ್ತಮ ನಿದ್ರೆ ಹೊಂದಲು ಅನುವು ಮಾಡಿಕೊಡುತ್ತದೆ.