ಸ್ಟಾರ್ಟ್ಅಪ್ ಮಹಾಕುಂಭದಲ್ಲಿ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಪರಿಚಯಿಸಿದ ಸ್ಲೈಸ್

| N/A | Published : Apr 06 2025, 01:46 AM IST / Updated: Apr 06 2025, 10:29 AM IST

ಸಾರಾಂಶ

ಏಪ್ರಿಲ್ 3 ರಿಂದ 5ರವರೆಗೆ ನವದೆಹಲಿಯಲ್ಲಿ ಸ್ಟಾರ್ಟಪ್ ಮಹಾಕುಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸ್ಲೈಸ್ ಮತ್ತು ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಪರಿಚಯಿಸಿದ್ದು, ಅದರ ವಿವರಗಳು ಇಲ್ಲಿವೆ.

ಬೆಂಗಳೂರು : ಏಪ್ರಿಲ್ 3 ರಿಂದ 5ರವರೆಗೆ ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ಸ್ಟಾರ್ಟಪ್ ಮಹಾಕುಂಭ 2025ರಲ್ಲಿ ಸ್ಲೈಸ್ ಮತ್ತು ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಅನಾವರಣಗೊಳಿಸಿದೆ.

ಸ್ಲೈಸ್ ಮತ್ತು ಎನ್‌ಇಎಸ್‌ಎಫ್‌ಬಿ ವಿಲೀನಗೊಂಡ ನಂತರ ಇದೀಗ ವಿಕಸನಗೊಳ್ಳುತ್ತಿರುವ ಡಿಜಿಟಲ್ ಆರ್ಥಿಕತೆಗೆ ಪೂರಕವಾಗಿ ವಿನ್ಯಾಸಗೊಳಿಸಲಾದ ಹೆಚ್ಚಿನ ಲಾಭದಾಯಕ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ತಕ್ಷಣದ ಸಾಲ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ವಿಶೇಷವಾಗಿ ಭಾರತದ ಮೊದಲ ಎಐ- ಚಾಲಿತ ಸ್ಮಾರ್ಟ್ ಬ್ಯಾಂಕಿಂಗ್ ಶಾಖೆಯನ್ನು ಅನಾವರಣಗೊಳಿಸಲು ಸಿದ್ಧವಾಗಿದೆ.

ಬ್ಯಾಂಕಿನ ಹೊಸ ಕೊಡುಗೆಗಳು, ಸೌಲಭ್ಯಗಳನ್ನು ಗ್ರಾಹಕರಿಗೆ ಉತ್ತಮ ಆದಾಯ ಮತ್ತು ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಹೊಸ ಕೊಡುಗೆಗಳು ಈ ಕೆಳಗಿನಂತಿವೆ:- ಸ್ಥಿರ ಠೇವಣಿ: ವರ್ಷಕ್ಕೆ ಶೇ.9ವರೆಗೆ ಬಡ್ಡಿ, ದೇಶದಲ್ಲಿ ಅತ್ಯಧಿಕವಾದದ್ದು.

- ಡಿಜಿಟಲ್ ಉಳಿತಾಯ ಖಾತೆ: ಆರ್‌ಬಿಐ ರೆಪೋ ದರದ ಶೇ.100ರಷ್ಟು ಗಳಿಸಿ, ಪ್ರತಿದಿನ ಬಡ್ಡಿ ಗಳಿಸುವ ಮೂಲಕ ಉಳಿತಾಯ ಹೆಚ್ಚಿಸುತ್ತದೆ.

- ಪುನರಾವರ್ತಿತ ಠೇವಣಿ: ಶೇ.8.5ವರೆಗಿನ ಬಡ್ಡಿ ದರಗಳು ಸುಲಭವಾಗಿ ಸಂಪತ್ತು ಸಂಗ್ರಹಿಸಲು ನೆರವಾಗುತ್ತವೆ.

- ಉದ್ಯಮ ಅಭಿವೃದ್ಧಿ ಸಾಲಗಳು: ಸಣ್ಣ ವ್ಯವಹಾರಗಳು ಮತ್ತು ವ್ಯಾಪಾರಿಗಳಿಗೆ ಸೂಕ್ತವಾದ ಸಾಲ ಉತ್ಪನ್ನ ಒದಗಿಸಲಾಗುತ್ತದೆ.

- ಸ್ಲೈಸ್‌ಬರೋ: ತ್ವರಿತವಾಗಿ ತಕ್ಷಣವೇ 5 ಲಕ್ಷ ರೂ.ವರೆಗಿನ ಹಣವನ್ನು ನೀಡಲಾಗುತ್ತದೆ.

- ಸ್ಲೈಸ್ ಯುಪಿಐ: ತಕ್ಷಣದ ವಹಿವಾಟುಗಳಿಗೆ ಅತಿ-ವೇಗದ ಯುಪಿಐ ಪೇಮೆಂಟ್ ವ್ಯವಸ್ಥೆ ಆಗಿದೆ.ಈ ಸಂಸ್ಥೆಯ ಹೊಸ ಎಐ ಚಾಲಿತ ಶಾಖೆಯು ಕಾಗದರಹಿತ ಮತ್ತು ಕಸ್ಟಮೈಸ್ ಮಾಡಿದ ಬ್ಯಾಂಕಿಂಗ್ ಅನುಭವವನ್ನು ಒದಗಿಸಲಿದೆ. 24x7 ಡಿಜಿಟಲ್ ಸೇವೆ, ಸ್ವಯಂ-ಸೇವಾ ಕಿಯೋಸ್ಕ್‌ಗಳು ಇತ್ಯಾದಿ ಸೇವೆ ಒದಗಿಸುತ್ತದೆ. ಈ ಶಾಖೆಗಳು ನಗರ ಮತ್ತು ಗ್ರಾಮೀಣ ಜನಸಂಖ್ಯೆ ಎರಡಕ್ಕೂ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾಗಿದ್ದು, ಎನ್‌ಇಎಸ್‌ಎಫ್‌ಬಿ ತನ್ನ ಡಿಜಿಟಲ್-ಫರ್ಸ್ಟ್ ವಿಧಾನವನ್ನು ವೈವಿಧ್ಯಮಯ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ.