ಮೈಸೂರು ಯೋಗ ಪರಂಪರೆ ಅನಾವರಣ

| Published : Jun 21 2024, 01:09 AM IST / Updated: Jun 21 2024, 05:20 AM IST

ಸಾರಾಂಶ

ಯೋಗ ಮತ್ತು ಯೋಗದ ಪ್ರಕಾರಗಳು, ಯೋಗ ಎಂದರೇನು?, ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ, ಯೋಗದ ಪ್ರಾಚೀನತೆ ಮತ್ತು ಯೋಗ ಪರಂಪರೆ, ಆದಿಯೋಗಿ ಶಿವ, ಯೋಗೇಶ್ವರ ಕೃಷ್ಣ, ದತ್ತಾತ್ತೇಯ, ಹಠಯೋಗ ಪ್ರದೀಪಿಕೆ, ಹಿರಣ್ಯಗರ್ಭ ಪ್ರಸ್ತಾಪ, ಷಡ್ದರ್ಶನಗಳ ಪ್ರಸ್ತಾಪ ಇದೆ.

 ಮೈಸೂರು : ಹಿಮಾಲಯ ಫೌಂಡೇಷನ್‌ ಸಂಸ್ಥಾಪಕ ಎನ್‌.ಅನಂತ ಅವರು ರಚಿಸಿರುವ ಮೈಸೂರು ಯೋಗ ಪರಂಪರೆ ಕೃತಿಯಲ್ಲಿ ಸಂಪೂರ್ಣ ಇತಿಹಾಸವನ್ನು ಅನಾವರಣ ಮಾಡಲಾಗಿದೆ. ಮುಖ್ಯವಾಗಿ ಹಿಂದಿನ ಯೋಗ ಗುರುಗಳ ಸಮಗ್ರ ಚಿತ್ರಣವನ್ನು ನೀಡಲಾಗಿದೆ.

ಯೋಗ ಮತ್ತು ಯೋಗದ ಪ್ರಕಾರಗಳು, ಯೋಗ ಎಂದರೇನು?, ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ, ಯೋಗದ ಪ್ರಾಚೀನತೆ ಮತ್ತು ಯೋಗ ಪರಂಪರೆ, ಆದಿಯೋಗಿ ಶಿವ, ಯೋಗೇಶ್ವರ ಕೃಷ್ಣ, ದತ್ತಾತ್ತೇಯ, ಹಠಯೋಗ ಪ್ರದೀಪಿಕೆ, ಹಿರಣ್ಯಗರ್ಭ ಪ್ರಸ್ತಾಪ, ಷಡ್ದರ್ಶನಗಳ ಪ್ರಸ್ತಾಪ ಇದೆ.

ಯೋಗ ಮಹರ್ಷಿ ಪತಂಜಲಿ ಕುರಿತು ಪೌರಾಣಿಕ ಕಥೆಯ ಮೂಲಕ ವಿವರಿಸಲಾಗಿದೆ. ಅಷ್ಟಾಂಗ ಯೋಗ ಮಾರ್ಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಸಿಂಧೂ ನಾಗರಿಕತೆಯಲ್ಲಿ ಯೋಗದ ಕುರುಹುಗಳನ್ನು ದಾಖಲಿಸಲಾಗಿದೆ.

ಸಾಂಸ್ಕೃತಿಕ ನಗರಿಯ ಯೋಗ ಪರಂಪರೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡಯರ್‌ ಮತ್ತು ಶ್ರೀತತ್ತ್ವನಿಧಿ, ಶ್ರೀತತ್ವನಿಧಿಯ ಯೋಗಾಸನ ಭಂಗಿಗಳು, ಯೋಗ ಬೆಳವಣಿಗೆಗೆ ನೀರೆರೆದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಬಗ್ಗೆ ವಿವರಿಸಲಾಗಿದೆ.

ಯೋಗಿರಾಜ ಶ್ರೀ ಕೃಷ್ಮಮಾಚಾರ್ಯರನ್ನು ಕುರಿತು ಬಾಲ್ಯ, ವಿದ್ಯಾಭ್ಯಾಸ, ಯೋಗಾಭ್ಯಾಸ, ವಿವಾಹ, ಒಡೆಯರ್‌ ಕೃಪಾಕಟಾಕ್ಷ, ಸಾರ್ವಜನಿಕರಿಗೆ ಯೋಗ, ಕೃತಿಗಳ ರಚನೆ, ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಬಗ್ಗೆ ತಿಳಿಸಲಾಗಿದೆ.

ಯೋಗಭಾಸ್ಕರ ಶ್ರೀರಂಗ ಸದ್ಗುರು ಅವರ ಬಹುಮುಖ ಪ್ರತಿಭಾ ಸಾಮರ್ಥ್ಯ, ಧ್ಯಾನ ಪರವಶತೆ, ಮೈಸೂರು ಸಂಸ್ಕೃತ ಪಾಠಶಾಲೆಗೆ ಸೇರ್ಪಡೆ, ಗ್ರಂಥಾಲಯ ಸ್ಥಾಪನೆ, ಅಷ್ಟಾಂಗ ಯೋಗ ವಿಜ್ಞಾನ ಮಂದಿರ ಸ್ಥಾಪಿಸಿದ್ದನ್ನು ವಿವರಿಸಲಾಗಿದೆ.

ಯೋಗಭೀಷ್ಮ ಬಿಕೆಎಸ್‌ ಅಯ್ಯಂಗಾರ್‌ ಅವರು ಹೇಗೆ ವಿಶ್ವಮಾನ್ಯರಾದರು ಎಂಬದರ ಸಂಪೂರ್ಣ ಚಿತ್ರಣ ನೀಡಲಾಗಿದೆ.

ಯೋಗಲೋಕದ ಭಗೀರಥ ಪಟ್ಟಾಭಿ ಜೋಯಿಸ್‌, ವೇದಬ್ರಹ್ಮ ಗಂಜಾಂ ಸುಬ್ಬರಾಯ ದೀಕ್ಷಿತರು, ಯೋಗರತ್ನ ಬಿಎನ್ಎಸ್‌ ಅಯ್ಯಂಗಾರ್‌, ಮಹರ್ಷಿ ಬಿರುದಾಂಕಿತ ನಾಗರಾಜ ಸೂರ್ಯನಾರಾಯಣ ಪಾಂಡೇಜಿ, ಕ್ರಿಯಾಶೀಲ ಯೋಗೆ ಕೆ. ಕೇಶವಮೂರ್ತಿ, ಸತ್ತ್ವಶಾಲಿ ಯೋಗಗುರು ಡಾ.ಕೆ.ಎಲ್. ನಾರಾಯಣ ಜೋಯಿಸರು, ಯೋಗಕ್ಕೆ ಹೊಸ ಆಯಾಮ ನೀಡಿದ ಋಷಿ ಪ್ರಭಾಕರ ಗುರೂಜಿ, ಮಹಾನ್‌ ಯೋಗಸಾಧಕ ಬಾಲಾಜಿರಾವ್‌ ತೋಂಬರೆ, ಗೋ ಉತ್ಪನ್ನಗಳ ಸಂಶೋಧಕ ಯೋಗಿ ನಾರಾಯಣ ಸ್ವಾಮೀಜಿ, ಮೌಲಿಕ ಯೋಗಾಚಾರ್ಯ ಡಾ.ಎ.ಆರ್‌. ಸೀತಾರಾಂ, ಕ್ಷಿಪ್ರಕ್ರಾಂತಿಯ ಯೋಗಿ ರಾಮಸ್ವಾಮಿ ಅಣ್ಣ ಅವರ ವ್ಯಕ್ಚಿಚಿತ್ರಗಳಿವೆ.

ಡಾ.ರಾಜ್‌ ಯೋಗ, ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಮೈಸೂರು ನಂಟು, ದತ್ತ ಕ್ರಿಯಾಯೋಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅರ್ಕ ಧ್ಯಾನದ ರೂವಾರಿ ಶ್ರೀನಿವಾಸ ಅರ್ಕ, ನಾಟ್ಯ ಯೋಗ ಸಂಗಮದ ರೂವಾರಿ ಡಾ.ವಸುಂಧರಾ ದೊರೆಸ್ವಾಮಿ ಕುರಿತು ಲೇಖನಗಳಿವೆ. ಕೊನೆಯಲ್ಲಿ ಮೈಸೂರು ಯೋಗ ವೈವಿಧ್ಯತೆಯ ತವರೂರಾಗಿದ್ದು, ಯೋಗ ಸಾಧಕರ ಸ್ಮಾರಕಗಳು, ಯೋಗ ವಿವಿ ಆರಂಭವಾಗಬೇಕು ಎಂಬ ಆಶಯದೊಂದಿಗೆ ಕೃತಿ ಸಮಾಪ್ತಿಗೊಳಿಸಲಾಗಿದೆ. ಡಾ.ಕೆ. ಅನಂತರಾಂ ಅವರ ಮುನ್ನುಡಿ, ಡಾ.ಕೆ. ರಾಘವೇಂದ್ರ ಪೈ ಅವರ ಬೆನ್ನುಡಿ ಇದೆ. ಆಸಕ್ತರು ಎನ್‌. ಅನಂತ, ಮೊ. 97437 69403 ಸಂಪರ್ಕಿಸಬಹುದು.