ಇಂದು ಭಾರತ vs ಯುಎಇ

| N/A | Published : Sep 10 2025, 01:03 AM IST

ಸಾರಾಂಶ

1 ತಿಂಗಳು, 5 ದಿನಗಳ ಬಿಡುವಿನ ಬಳಿಕ ಭಾರತ ಕ್ರಿಕೆಟ್‌ ತಂಡ ಮೈದಾನಕ್ಕಿಳಿಯಲಿದೆ. ಏಷ್ಯಾಕಪ್‌ ಟಿ20 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗುರುವಾರ ತನ್ನ ಪರವಾಗಿ ಟೂರ್ನಿಯಗೆ ಆತಿಥ್ಯ ವಹಿಸುತ್ತಿರುವ ಯುಎಇ ವಿರುದ್ಧ ಸೆಣಸಲಿದೆ.

ದುಬೈ: 1 ತಿಂಗಳು, 5 ದಿನಗಳ ಬಿಡುವಿನ ಬಳಿಕ ಭಾರತ ಕ್ರಿಕೆಟ್‌ ತಂಡ ಮೈದಾನಕ್ಕಿಳಿಯಲಿದೆ. ಏಷ್ಯಾಕಪ್‌ ಟಿ20 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗುರುವಾರ ತನ್ನ ಪರವಾಗಿ ಟೂರ್ನಿಯಗೆ ಆತಿಥ್ಯ ವಹಿಸುತ್ತಿರುವ ಯುಎಇ ವಿರುದ್ಧ ಸೆಣಸಲಿದೆ.

ಮುಂದಿನ ವರ್ಷ ಟಿ20 ವಿಶ್ವಕಪ್‌ಗೆ ಈ ಟೂರ್ನಿಯನ್ನು ರಿಹರ್ಸಲ್‌ ರೀತಿ ಬಳಸಿಕೊಳ್ಳಲು ಎದುರು ನೋಡುತ್ತಿರುವ ಭಾರತ, ತಂಡದೊಳಗೆ ಕೆಲವೇ ಕೆಲವು ಸ್ಥಾನಗಳಿಗೆ ಅಗತ್ಯವಿರುವ ಆಟಗಾರರನ್ನು ಅಂತಿಮಗೊಳಿಸುವ ಪ್ರಯತ್ನ ನಡೆಸಲಿದೆ.

2024ರ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಭಾರತ , ಆ ಟೂರ್ನಿ ಆರಂಭದಿಂದ ಈ ವರೆಗೂ ಆಡಿದ ಪಂದ್ಯಗಳಲ್ಲಿ 24-3 ಗೆಲುವು-ಸೋಲಿನ ದಾಖಲೆ ಹೊಂದಿದ್ದು, ಏಷ್ಯಾಕಪ್‌ ಗೆಲ್ಲುವ ನೆಚ್ಚಿನ ತಂಡ ಕೂಡ ಎನಿಸಿದೆ.

ಟೆಸ್ಟ್‌ ತಂಡದ ನಾಯಕ ಶುಭ್‌ಮನ್‌ ಗಿಲ್‌ ಟಿ20ಗೆ ವಾಪಸಾಗಿರುವ ಕಾರಣ, ಇತ್ತೀಚೆಗೆ ಅಭಿಷೇಕ್‌ ಶರ್ಮಾ ಜೊತೆ ಇನ್ನಿಂಗ್ಸ್‌ ಆರಂಭಿಸುತ್ತಿದ್ದ ಸಂಜು ಸ್ಯಾಮ್ಸನ್‌ಗೆ ಪ್ರಬಲ ಪೈಪೋಟಿ ಶುರುವಾಗಿದೆ. ಭಾರತ ಕಳೆದ 3-4 ದಿನ ನಡೆಸಿದ ಅಭ್ಯಾಸ ಅವಧಿಗಳನ್ನು ಗಮನಿಸಿದಾಗ ತಂಡದ ಆಡಳಿತ ಗಿಲ್‌ಗೆ ಮಣೆಹಾಕುವ ಸಾಧ್ಯತೆಯೇ ಹೆಚ್ಚು.

3ನೇ ಕ್ರಮಾಂಕದಲ್ಲಿ ತಿಲಕ್‌ ವರ್ಮಾ, 4ರಲ್ಲಿ ನಾಯಕ ಸೂರ್ಯಕುಮಾರ್‌, 5ನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಆಡಲಿದ್ದಾರೆ. ಅಕ್ಷರ್‌ ಪಟೇಲ್‌, ಜಿತೀಶ್‌ ಶರ್ಮಾರನ್ನು ಫಿನಿಶರ್‌ಗಳಾಗಿ ಬಳಸಿಕೊಳ್ಳುವ ಆಯ್ಕೆ ತಂಡಕ್ಕಿದೆ. ಹರ್ಷಿತ್‌ ರಾಣಾಗೆ ಅವಕಾಶ ಸಿಗುತ್ತಾ? ಅಥವಾ ತಂಡ ಶಿವಂ ದುಬೆಯನ್ನು ಆಡಿಸುತ್ತಾ ಎನ್ನುವ ಬಗ್ಗೆಯೂ ಕುತೂಹಲವಿದೆ. ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ ಇಬ್ಬರೂ ಕಣಕ್ಕಿಳಿಯಬಹುದು. ಜಸ್‌ಪ್ರೀತ್‌ ಬೂಮ್ರಾ ಜೊತೆಗೆ ಅರ್ಶ್‌ದೀಪ್‌ ಸಿಂಗ್‌ ತಜ್ಞ ವೇಗಿಯಾಗಿ ಆಡುವುದು ಬಹುತೇಕ ಖಚಿತ.

ಇನ್ನು ಯುಎಇ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದಿತ್ತು. ಅಫ್ಘಾನಿಸ್ತಾನವನ್ನು ಸೋಲಿಸುವ ಸನಿಹಕ್ಕೂ ಬಂದಿತ್ತು. ಹೀಗಾಗಿ ಯುಎಇಯನ್ನು ಭಾರತ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸಂಭವನೀಯ ತಂಡಗಳು

ಭಾರತ: ಅಭಿಷೇಕ್‌, ಶುಭ್‌ಮನ್‌ ಗಿಲ್, ತಿಲಕ್‌, ಸೂರ್ಯಕುಮಾರ್‌ (ನಾಯಕ), ಹಾರ್ದಿಕ್‌, ಜಿತೇಶ್‌, ಅಕ್ಷರ್‌, ಕುಲ್ದೀಪ್‌, ಬೂಮ್ರಾ, ವರುಣ್, ಅರ್ಶ್‌ದೀಪ್‌.

ಯುಎಇ: ವಸೀಂ (ನಾಯಕ), ಅಲಿಶಾನ್‌, ರಾಹುಲ್‌, ಆಸಿಫ್‌, ಫಾರೂಕ್‌, ಹರ್ಷಿತ್‌ ಕೌಶಿಕ್‌, ಜೋಹೆಬ್‌, ಜವಾದುಲ್ಲಾ/ಸಗೀರ್‌, ಹೈದರ್‌, ಜುನೈದ್‌, ರೋಹಿದ್‌. ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌/ಸೋನಿ ಲಿವ್‌ 9 ವರ್ಷ ಬಳಿಕ ಟಿ20

ಪಂದ್ಯದಲ್ಲಿ ಮುಖಾಮುಖಿ

ಭಾರತ ವಿರುದ್ಧ ಯುಎಇ ಕೇವಲ ಒಂದು ಟಿ20 ಪಂದ್ಯವನ್ನಾಡಿದೆ. ಅದು 2016ರ ಏಷ್ಯಾಕಪ್‌ನಲ್ಲಿ. ಆ ಪಂದ್ಯವನ್ನು ಭಾರತ 9 ವಿಕೆಟ್‌ನಿಂದ ಗೆದ್ದಿತ್ತು. ಭಾರತ ವಿರುದ್ಧ 3 ಏಕದಿನ ಪಂದ್ಯಗಳನ್ನಾಡಿರುವ ಯುಎಇ, ಮೂರರಲ್ಲೂ ಸೋಲುಂಡಿದೆ.

Read more Articles on