ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಬುಧವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) 11ನೇ ಆವೃತ್ತಿಯ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಸೆಣಸಲಿದೆ.

ಬೆಂಗಳೂರು : ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಬುಧವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) 11ನೇ ಆವೃತ್ತಿಯ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಸೆಣಸಲಿದೆ. ಸೆಮೀಸ್‌ ಮುಖಾಮುಖಿಯ ಮೊದಲ ಚರಣದ ಪಂದ್ಯದ ಇದಾಗಿದ್ದು, 2ನೇ ಚರಣ ಏ.6ರಂದು ಗೋವಾದಲ್ಲಿ ನಡೆಯಲಿದೆ.

ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ 5-0 ಗೋಲುಗಳ ಅಮೋಘ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಬಿಎಫ್‌ಸಿ ಮತ್ತೊಂದು ಭರ್ಜರಿ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಎಫ್‌ಸಿ ಗೋವಾ ಲೀಗ್‌ ಹಂತದಲ್ಲಿ ಅದ್ಭುತ ಆಟ ಪ್ರದರ್ಶಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ನೇರವಾಗಿ ಸೆಮೀಸ್‌ಗೇರಿತ್ತು.

ಸೆಮಿಫೈನಲ್‌ ಮುಖಾಮುಖಿಯು 2 ಚರಣಗಳನ್ನು ಹೊಂದಿರಲಿದ್ದು, ಎರಡು ಪಂದ್ಯಗಳಲ್ಲಿ ತಂಡಗಳು ದಾಖಲಿಸುವ ಒಟ್ಟು ಗೋಲುಗಳ ಆಧಾರದ ಮೇಲೆ ಫೈನಲ್‌ ಸ್ಥಾನ ನಿರ್ಧಾರವಾಗಲಿದೆ. ಪಂದ್ಯ: ಸಂಜೆ 7.30ಕ್ಕೆ