ಸಾರಾಂಶ
ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ 11ನೇ ಆವೃತ್ತಿಯ ಫೈನಲ್‌ಗೇರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಆಸೆಗೆ ಜೀವ ಬಂದಿದೆ.
ಬೆಂಗಳೂರು : ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ 11ನೇ ಆವೃತ್ತಿಯ ಫೈನಲ್‌ಗೇರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಆಸೆಗೆ ಜೀವ ಬಂದಿದೆ. ಎಫ್‌ಸಿ ಗೋವಾ ವಿರುದ್ಧದ ಸೆಮಿಫೈನಲ್ ಮೊದಲ ಚರಣದಲ್ಲಿ ಬಿಎಫ್‌ಸಿ 2-0 ಗೋಲುಗಳ ಜಯ ಸಾಧಿಸಿ, 2 ಗೋಲುಗಳ ಮುನ್ನಡೆ ಸಾಧಿಸಿದೆ.
ಬುಧವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಆಕರ್ಷಕ ಪ್ರದರ್ಶನ ತೋರಿತು. ಗೋವಾದ ತಾರಾ ಆಟಗಾರ ಸಂದೇಶ್ ಝಿಂಗಾನ್ ಸ್ವಂತ ಗೋಲು ಬಾರಿಸಿ, ಬಿಎಫ್‌ಸಿ ಖಾತೆ ತೆರೆಯಲು ನೆರವಾದರು. 51ನೇ ನಿಮಿಷದಲ್ಲಿ ಎಡ್ಗಾರ್ ಮೆನ್ಡೆಜ್ ಗಳಿಸಿದ ಗೋಲು ಬಿಎಫ್‌ಸಿಯ ಮುನ್ನಡೆ ಹೆಚ್ಚಿಸಿತು.
ಏ.6ರಂದು ಗೋವಾದಲ್ಲಿ 2ನೇ ಚರಣದ ಪಂದ್ಯ ನಡೆಯಲಿದ್ದು, ಬಿಎಫ್‌ಸಿ ಆ ಪಂದ್ಯವನ್ನು ಸೋತರೂ, ಡ್ರಾ ಮಾಡಿಕೊಂಡರೂ ಫೈನಲ್‌ಗೇರುವ ಅವಕಾಶವಿರಲಿದೆ.
ಇದೇ ವೇಳೆ ಗುರುವಾರ ಮೋಹನ್ ಬಗಾನ್ ಹಾಗೂ ಜಮ್ಷೆಡ್‌ಪುರ ಎಫ್‌ಸಿ ನಡುವೆ 2ನೇ ಸೆಮೀಸ್‌ನ ಮೊದಲ ಚರಣ ನಡೆಯಲಿದೆ. ಜಮ್ಷೆಡ್‌ಪುರ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.