ಸಾರಾಂಶ
ನ್ಯೂಯಾರ್ಕ್: ಈ ಬಾರಿ ಟಿ20 ವಿಶ್ವಕಪ್‌ನ ಗುಂಪು ಹಂತದ ಮೊದಲೆರಡೂ ಪಂದ್ಯಗಳಲ್ಲಿ ಪರಾಭವಗೊಂಡಿರುವ ಮಾಜಿ ಚಾಂಪಿಯನ್ ಪಾಕಿಸ್ತಾನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಂಗಳವಾರ ಕೆನಡಾ ವಿರುದ್ಧ ಸೆಣಸಾಡಲಿದೆ. ಸೋತರೆ ತಂಡ ಅಧಿಕೃತವಾಗಿ ಗುಂಪು ಹಂತದಲ್ಲೇ ಹೊರಬೀಳಲಿದೆ.‘ಎ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧ ಸೂಪರ್ ಓವರ್‌ನಲ್ಲಿ ಆಘಾತಕಾರಿ ಸೋಲು ಕಂಡಿದ್ದ ಬಾಬರ್ ಆಜಂ ಪಡೆ, ಭಾನುವಾರ ಬದ್ಧವೈರಿ ಭಾರತಕ್ಕೆ ಶರಣಾಗಿದೆ.
ತಂಡ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದ್ದು, ಈ ಪಂದ್ಯದಲ್ಲಿ ಗೆದ್ದರಷ್ಟೇ ಸೂಪರ್-8 ಹಂತದ ಕನಸು ಜೀವಂತವಾಗಿರಲಿದೆ. ಗುಂಪಿನಲ್ಲಿರುವ ಭಾರತ ಹಾಗೂ ಅಮೆರಿಕ ಈಗಾಗಲೇ ತಲಾ 2 ಪಂದ್ಯಗಳನ್ನು ಗೆದ್ದಿವೆ. ಈ 2 ತಂಡಗಳ ಪೈಕಿ 1 ತಂಡ ಸೂಪರ್-8 ಪ್ರವೇಶಿಸುವುದು ಖಚಿತವಾಗಿದ್ದು, ಮತ್ತೊಂದು ಸ್ಥಾನದ ಮೇಲೆ ಪಾಕ್ ಕಣ್ಣಿಟ್ಟಿದೆ.
ಆದರೆ ತಂಡ ಕೆನಡಾ ಹಾಗೂ ಐರ್ಲೆಂಡ್ ವಿರುದ್ಧದ ಪಂದ್ಯ ದೊಡ್ಡ ಅಂತರದಲ್ಲಿ ಗೆದ್ದು, ಭಾರತ ಅಥವಾ ಅಮೆರಿಕ ಪೈಕಿ 1 ತಂಡ ಉಳಿದ 2 ಪಂದ್ಯಗಳಲ್ಲೂ ಸೋತರಷ್ಟೇ ಪಾಕ್‌ಗೆ ಸೂಪರ್-8 ಪ್ರವೇಶಿಸುವ ಅವಕಾಶ ಸಿಗಲಿದೆ. ಅತ್ತ ಕೆನಡಾ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯ ಗೆದ್ದರೆ ‘ಎ’ ಗುಂಪಿನ ಸೂಪರ್-8 ರೇಸ್ ಮತ್ತಷ್ಟು ರೋಚಕತೆ ಸೃಷ್ಟಿಸಲಿದೆ.ಪಂದ್ಯ ಆರಂಭ: ರಾತ್ರಿ 8 ಗಂಟೆಗೆನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್, ಡಿಡಿ ಸ್ಪೋರ್ಟ್ಸ್