ಕೆಎಸ್‌ಸಿಎ ಲೀಗ್‌ನಲ್ಲಿ ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌ ಚಾಂಪಿಯನ್‌

| Published : Jun 15 2024, 01:06 AM IST / Updated: Jun 15 2024, 05:05 AM IST

ಸಾರಾಂಶ

ಹೆರಾನ್ಸ್‌ ಕ್ಲಬ್‌ ತಂಡ ಸುಮಾರು 2 ದಶಕಕ್ಕೂ ಹೆಚ್ಚಿನ ಸಮಯದ ಬಳಿಕ ಟ್ರೋಫಿ ಗೆದ್ದಿದ್ದು, 2ನೇ ಡಿಷಿಷನ್‌ನಿಂದ 1ನೇ ಡಿವಿಷನ್‌ಗೆ ಭಡ್ತಿ ಪಡೆದಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಗುಂಪು 1ರ ಎಂಎಟಿ ಆಚಾರ್ಯ ಶೀಲ್ಡ್‌ 2ನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಹೆರಾನ್ಸ್‌ ಕ್ಲಬ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

ಹೆರಾನ್ಸ್‌ ಕ್ಲಬ್‌ ತಂಡ ಸುಮಾರು 2 ದಶಕಕ್ಕೂ ಹೆಚ್ಚಿನ ಸಮಯದ ಬಳಿಕ ಟ್ರೋಫಿ ಗೆದ್ದಿದ್ದು, 2ನೇ ಡಿಷಿಷನ್‌ನಿಂದ 1ನೇ ಡಿವಿಷನ್‌ಗೆ ಭಡ್ತಿ ಪಡೆದಿದೆ.ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡವು. ಹೆರಾನ್ಸ್‌ ಕ್ಲಬ್‌ ತಂಡ ತಾನಡಿದ 11 ಪಂದ್ಯಗಳಲ್ಲಿ 37 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. 

ತಂಡ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 5 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಅಂಕ ಸಂಪಾದಿಸಿತು. ಜವಾನ್ಸ್‌ ಕ್ರಿಕೆಟ್‌ ಕ್ಲಬ್‌ 33 ಅಂಕಗಳೊಂದಿಗೆ 2ನೇ ಸ್ಥಾನ ಪಡೆದರೆ, ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ 29 ಅಂಕ ಪಡೆದು 3ನೇ ಸ್ಥಾನ ಪಡೆಯಿತು.

ಸೂಪರ್‌ಕ್ರಾಸ್‌ ರೇಸಿಂಗ್‌ ಜನವರಿಯಲ್ಲಿ ಆರಂಭ

ಮುಂಬೈ: 2ನೇ ಆವೃತ್ತಿಯ ಇಂಡಿಯನ್‌ ಸೂಪರ್‌ಕ್ರಾಸ್‌ ರೇಸಿಂಗ್‌ ಲೀಗ್(ಐಎಸ್‌ಆರ್‌ಎಲ್‌) 2025ರ ಜನವರಿಯಿಂದ ಮಾರ್ಚ್‌ವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ರೇಸರ್‌ಗಳ ನೋಂದಣಿ ಕಾರ್ಯ ಆರಂಭಗೊಳ್ಳಲಿದ್ದು, ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.