ಇಂದು ಭಾರತ vs ಪಾಕ್‌ ಮಹಿಳಾ ವಿಶ್ವಕಪ್ ಫೈಟ್‌ : ಮತ್ತೆ ನೋ ಶೇಕ್‌ಹ್ಯಾಂಡ್‌?

| N/A | Published : Oct 05 2025, 01:00 AM IST

ಇಂದು ಭಾರತ vs ಪಾಕ್‌ ಮಹಿಳಾ ವಿಶ್ವಕಪ್ ಫೈಟ್‌ : ಮತ್ತೆ ನೋ ಶೇಕ್‌ಹ್ಯಾಂಡ್‌?
Share this Article
  • FB
  • TW
  • Linkdin
  • Email

ಸಾರಾಂಶ

 ಭಾರತ-ಪಾಕ್‌ ಮಹಿಳಾ ತಂಡಗಳು ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 24ರಲ್ಲಿ ಗೆದ್ದಿದೆ. ಏಕದಿನದಲ್ಲಿ ಭಾರತ ಎಲ್ಲಾ 11 ಪಂದ್ಯಗಳಲ್ಲಿ ಗೆದ್ದಿದ್ದು, ಶೇ.100 ಗೆಲುವಿನ ದಾಖಲೆ ಹೊಂದಿದೆ.

ಕೊಲಂಬೊ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಶ್ರೀಲಂಕಾ ವಿರುದ್ಧ ಗೆದ್ದಿದ್ದ ಭಾರತ ಸತತ 2ನೇ ಜಯದ ನಿರೀಕ್ಷೆಯಲ್ಲಿದೆ.

ಭಾರತ-ಪಾಕ್‌ ಮಹಿಳಾ ತಂಡಗಳು ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 24ರಲ್ಲಿ ಗೆದ್ದಿದೆ. ಏಕದಿನದಲ್ಲಿ ಭಾರತ ಎಲ್ಲಾ 11 ಪಂದ್ಯಗಳಲ್ಲಿ ಗೆದ್ದಿದ್ದು, ಶೇ.100 ಗೆಲುವಿನ ದಾಖಲೆ ಹೊಂದಿದೆ. 

ಆದರೆ ಭಾನುವಾರದ ಪಂದ್ಯದಲ್ಲಿ ಫಲಿತಾಂಶಕ್ಕಿಂತಲೂ ಹೆಚ್ಚಾಗಿ, ಭಾರತೀಯ ಆಟಗಾರ್ತಿಯರ ನಡೆ ಬಗ್ಗೆ ಕುತೂಹಲವಿದೆ. ಇತ್ತೀಚೆಗೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್‌ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಇದು ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರಿಯುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಬಿಸಿಸಿಐ ಅಧಿಕಾರಿಗಳೇ ಸುಳಿವು ನೀಡಿದ್ದು, ಭಾರತೀಯ ಆಟಗಾರ್ತಿರು ಪಾಕ್‌ ಜೊತೆ ಕೈಕುಲುವುದಿಲ್ಲ ಎಂದಿದ್ದರು. ಭಾರತ ತಂಡವನ್ನು ಹರ್ಮನ್‌ಪ್ರೀತ್ ಕೌರ್, ಪಾಕ್‌ ತಂಡವನ್ನು ಫಾತಿಮಾ ಸನಾ ಮುನ್ನಡೆಸಲಿದ್ದಾರೆ.

ಪಂದ್ಯ: ಮಧ್ಯಾಹ್ನ 3 ಗಂಟೆಗೆ । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಪಂದ್ಯ ಮಳೆಗೆ ಬಲಿ

ಶನಿವಾರ ಕೊಲಂಬೊದಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ-ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಭಾರೀ ಮಳೆಯಿಂದಾಗಿ ಟಾಸ್‌ ಕೂಡಾ ನಡೆಯಲಿಲ್ಲ. ಭಾನುವಾರದ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ.

Read more Articles on