ಇಂಡಿಯನ್‌ ಗ್ರ್ಯಾನ್‌ ಪ್ರೀ ಅಥ್ಲೆಟಿಕ್ಸ್‌ ಕೂಟದಲ್ಲಿ ಕರ್ನಾಟಕ ಪ್ರಾಬಲ್ಯ

| Published : Jun 13 2024, 12:52 AM IST / Updated: Jun 13 2024, 04:59 AM IST

ಇಂಡಿಯನ್‌ ಗ್ರ್ಯಾನ್‌ ಪ್ರೀ ಅಥ್ಲೆಟಿಕ್ಸ್‌ ಕೂಟದಲ್ಲಿ ಕರ್ನಾಟಕ ಪ್ರಾಬಲ್ಯ
Share this Article
  • FB
  • TW
  • Linkdin
  • Email

ಸಾರಾಂಶ

100 ಮೀ.ನಲ್ಲಿ ಸ್ನೇಹಾ, ಲಾಂಗ್‌ಜಂಪಲ್ಲಿ ಆರ್ಯ, ಹೈ ಜಂಪ್‌ ಸ್ಪರ್ಧೆಯಲ್ಲಿ ಅಭಿನಯಗೆ ಅಗ್ರಸ್ಥಾನ ಪಡೆದುಕೊಂಡರು. ಇನ್ನೂ ಕೆಲ ಸ್ಪರ್ಧೆಗಳಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಅಗ್ರ-3 ಸ್ಥಾನ ಗಳಿಸಿದರು.

ಬೆಂಗಳೂರು: ಬುಧವಾರ ನಡೆದ ಇಂಡಿಯನ್ ಗ್ರ್ಯಾನ್‌ಪ್ರಿ-3 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ.ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೂಟದಲ್ಲಿ ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಸ್ನೇಹಾ 11.41 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರೆ, ಸುದೀಕ್ಷ(11.75 ಸೆಕೆಂಡ್‌) ತೃತೀಯ ಸ್ಥಾನ ಪಡೆದರು.

 ಪುರುಷರ ಲಾಂಗ್‌ ಜಂಪ್‌ನಲ್ಲಿ ಆರ್ಯ 7.76 ಮೀ. ದೂರಕ್ಕೆ ಜಿಗಿದರೆ, ಮಹಿಳೆಯರ ಹೈ ಜಂಪ್‌ನಲ್ಲಿ ಅಭಿನಯ ಶೆಟ್ಟಿ 1.74 ಮೀ. ಎತ್ತರಕ್ಕೆ ನೆಗೆದು ಅಗ್ರಸ್ಥಾನ ಪಡೆದುಕೊಂಡರು. ಇನ್ನು, ಪುರುಷರ 100 ಮೀ. ಓಟದಲ್ಲಿ ಮಣಿಕಂಠ 10.56 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನ, ಮಹಿಳೆಯರ 200 ಮೀ.ನಲ್ಲಿ ಕಾವೇರಿ 24.38 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನ, ಮಹಿಳೆಯರ 400 ಮೀ. ಓಟದಲ್ಲಿ ಪೂವಮ್ಮ ರಾಜು 52.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು.

ಮಹಿಳೆಯರ ಶಾಟ್‌ಪುಟ್‌ನಲ್ಲಿ ಅಂಬಿಕಾ 14.32 ಮೀ. ದೂರ ದಾಖಲಿಸಿ ತೃತೀಯ ಪಡೆದರು. ಅಂಡರ್‌-20 ಪುರುಷರ ಹರ್ಡಲ್ಸ್‌ನಲ್ಲಿ ನೋಯೆಲ್‌ ಜೋಸೆಫ್‌ 57.74 ಸೆಕೆಂಡ್‌ಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.