ಸಾರಾಂಶ
ಬೆಂಗಳೂರು : ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ್ದ ಕನ್ನಡಿಗರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಹಾಗೂ ಕರ್ನಾಟಕ ಕ್ರಿಕೆಟ್ ಅಂಪೈರ್‌ಗಳ ಸಂಸ್ಥೆ(ಎಸಿಯುಕೆ) ವತಿಯಿಂದ ಸನ್ಮಾನಿಸಲಾಯಿತು. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಟೆಸ್ಟ್ ಅಂಪೈರ್‌ಗಳಾದ ಬಿ.ವಿಕ್ರಂ ರಾಜು, ಎ.ಎಲ್.ನರಸಿಂಹನ್, ಶಾವಿರ್ ತಾರಪೋರ್, ಎ.ವಿ.ಜಯಪ್ರಕಾಶ್, ಏಕದಿನ ಪಂದ್ಯಗಳಿಗೆ ಅಂಪೈರ್ ಆಗಿದ್ದ ನಂದನ್, ವಿನಾಯಕ ಕುಲಕರ್ಣಿ ಹಾಗೂ ಬಿ.ಅರ್.ಕೇಶವಮೂರ್ತಿ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಜೈರಾಮ್, ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದ ರಾಜ್ಯದ ಅಂಪೈರ್ಸ್
1. ಟೆಸ್ಟ್ ಇತಿಹಾಸದಲ್ಲಿ ಕೇವಲ 2 ಪಂದ್ಯಗಳು ಟೈ ಆಗಿವೆ. ಈ ಪೈಕಿ 1986ರಲ್ಲಿ ಮದ್ರಾಸ್‌ನಲ್ಲಿ ನಡೆದಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಕೂಡಾ ಒಂದು. ಈ ಪಂದ್ಯದಲ್ಲಿ ರಾಜ್ಯದ ವಿಕ್ರಂ ರಾಜು ಅಂಪೈರ್ ಆಗಿದ್ದರು.
2. 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಭಾರತದ ಅನಿಲ್ ಕುಂಬ್ಳೆ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್ ಪಡೆದಿದ್ದರು. ಈ ಪಂದ್ಯಕ್ಕೆ ಅಂಪೈರ್ ಆಗಿದ್ದವರು ಎ.ವಿ.ಜಯಪ್ರಕಾಶ್. ಎಲ್ಲಾ 10 ಬ್ಯಾಟರ್‌ಗಳ ಔಟ್ ತೀರ್ಪು ನೀಡಿದ್ದು ಕೂಡಾ ಇವರೇ.
3. 2010ರಲ್ಲಿ ಏಕದಿನ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕವನ್ನು ಸಚಿನ್ ತೆಂಡುಲ್ಕರ್ ಬಾರಿಸಿದ್ದರು. ದ.ಆಫ್ರಿಕಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಶಾವಿರ್ ತರಪೋರ್ ಅಂಪೈರ್ ಆಗಿದ್ದರು.
ಅಂಪೈರ್‌ಗಳ ಸಾಧನೆ
ಅಂಪೈರ್‌ಮಾದರಿಪಂದ್ಯಅವಧಿ
ವಿಕ್ರಂ ರಾಜುಟೆಸ್ಟ್021984-87
ನರಸಿಂಹನ್‌ಟೆಸ್ಟ್011993-94
ಜಯಪ್ರಕಾಶ್‌ಟೆಸ್ಟ್131997-02
ಶಾವಿರ್‌ಟೆಸ್ಟ್042011-12
ನಂದನ್‌ಏಕದಿನ072016-19
ಕುಲಕರ್ಣಿಏಕದಿನ021999-00
ಕೇಶವಮೂರ್ತಿಏಕದಿನ011986