ಫೆಡರೇಶನ್‌ ಕಪ್‌ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ 4 ಮೆಡಲ್‌ ಗೆದ್ದ ಕರ್ನಾಟಕ

| N/A | Published : Apr 25 2025, 12:33 AM IST / Updated: Apr 25 2025, 04:14 AM IST

ಸಾರಾಂಶ

ಇಲ್ಲಿ ಗುರುವಾರ ಕೊನೆಗೊಂಡ ಫೆಡರೇಶನ್‌ ಕಪ್‌ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಒಟ್ಟು 7 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನ ರಾಜ್ಯಕ್ಕೆ 4 ಪದಕಗಳು ಲಭಿಸಿದವು.

ಕೊಚ್ಚಿ: ಇಲ್ಲಿ ಗುರುವಾರ ಕೊನೆಗೊಂಡ ಫೆಡರೇಶನ್‌ ಕಪ್‌ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಒಟ್ಟು 7 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನ ರಾಜ್ಯಕ್ಕೆ 4 ಪದಕಗಳು ಲಭಿಸಿದವು.

ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ರಾಜ್ಯದ ಇಬ್ಬರು ಪದಕ ಜಯಿಸಿದರು. ಕರಿಶ್ಮಾ ಸನಿಲ್‌ 52.73 ಮೀಟರ್‌ ದೂರ ದಾಖಲಿಸಿ ಬೆಳ್ಳಿ ಗೆದ್ದರೆ, ರಮ್ಯಶ್ರೀ ಜೈನ್‌(51.17 ಮೀ.) ಕಂಚು ತಮ್ಮದಾಗಿಸಿಕೊಂಡರು. ಉತ್ತರ ಪ್ರದೇಶದ ಅನ್ನು ರಾಣಿ(56.66 ಮೀ.) ಚಿನ್ನಕ್ಕೆ ಮುತ್ತಿಟ್ಟರು. ಮಹಿಳೆಯರ ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿ 1.80 ಮೀ. ಎತ್ತರಕ್ಕೆ ನೆಗೆದು ಕಂಚು ಗೆದ್ದರೆ, 200 ಮೀ. ಓಟದಲ್ಲಿ ಸುದೀಕ್ಷಾ 24.31 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕಂಚಿಗೆ ತೃಪ್ತಿಪಟ್ಟುಕೊಂಡರು.

ಇದಕ್ಕೂ ಮುನ್ನ ಪುರುಷರ 100 ಮೀ.ನಲ್ಲಿ ಮಣಿಕಂಠ ಕಂಚು, ಮಹಿಳೆಯರ 100 ಮೀ. ಓಟದಲ್ಲಿ ಸ್ನೇಹಾ ಕಂಚು, ಪುರುಷರ 400 ಮೀಟರ್‌ ಹರ್ಡಲ್ಸ್‌ನಲ್ಲಿ ಯಶಸ್‌ ಪಿ. ಚಿನ್ನ ಗೆದ್ದಿದ್ದರು.