ಸಾರಾಂಶ
ವಿಶಾಖಪಟ್ಟಣಂ: ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ವೀರೋಚಿತ ಸೋಲಿನ ಆರಂಭ ಪಡೆದಿದೆ. ಶುಕ್ರವಾರ ನಡೆದ ಪುಣೇರಿ ಪಲ್ಟನ್ ವಿರುದ್ಧದ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಬುಲ್ಸ್‌ಗೆ ಸೋಲು ಎದುರಾಯಿತು. 40 ನಿಮಿಷಗಳ ಆಟ ಮುಕ್ತಾಯಗೊಂಡ ಬಳಿಕ ಉಭಯ ತಂಡಗಳು 32-32ರಲ್ಲಿ ಸಮಬಲ ಸಾಧಿಸಿದವು.
ಹೊಸ ನಿಯಮದಂತೆ, ಫಲಿತಾಂಶ ನಿರ್ಧರಿಸಲು ಟೈ ಬ್ರೇಕರ್ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಉಭಯ ತಂಡಗಳು ತಲಾ 5 ರೈಡ್ ನಡೆಸಿದವು. ನಿರ್ಣಾಯಕ ರೈಡ್‌ನಲ್ಲಿ ಬುಲ್ಸ್‌ನ ತಾರಾ ರೈಡರ್ ಆಕಾಶ್ ಶಿಂಧೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆಯಾಯಿತು. ಕೊನೆಯ ರೈಡ್‌ನಲ್ಲೂ ಬುಲ್ಸ್ ಅಂಕ ಗಳಿಸಲಿಲ್ಲ. ಹೀಗಾಗಿ, 6-4ರ ಅಂತರದಲ್ಲಿ ಪುಣೇರಿ ಗೆದ್ದು ಸಂಭ್ರಮಿಸಿತು.
ದಿನದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ತಮಿಳ್ ತಲೈವಾಸ್ 38-35 ಅಂಕಗಳಲ್ಲಿ ಗೆಲುವು ಸಾಧಿಸಿತು. ಪಂದ್ಯದ ಕೊನೆಯ ರೈಡ್‌ನಲ್ಲಿ ಸೂಪರ್ ರೈಡ್ ದಾಖಲಿಸಿದ ಪವನ್ ಶೆರಾವತ್ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಇಂದಿನ ಪಂದ್ಯ: ಟೈಟಾನ್ಸ್-ಯೋಧಾಸ್, ರಾತ್ರಿ 8ಕ್ಕೆ, ಮುಂಬಾ-ಗುಜರಾತ್, ರಾತ್ರಿ 9ಕ್ಕೆ