412 ರನ್‌ ಗುರಿ ಬೆನ್ನತ್ತಿಭಾರತ ‘ಎ’ ಹೊಸ ದಾಖಲೆ!

| Published : Sep 27 2025, 01:00 AM IST

ಸಾರಾಂಶ

ಕೆ.ಎಲ್‌.ರಾಹುಲ್‌ ಹಾಗೂ ಸಾಯಿ ಸುದರ್ಶನ್‌ರ ಅಮೋಘ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’, ದಾಖಲೆಯ 412 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ 5 ವಿಕೆಟ್‌ಗಳ ಜಯದೊಂದಿಗೆ 2 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಜಯಿಸಿದೆ.

ಲಖನೌ: ಕೆ.ಎಲ್‌.ರಾಹುಲ್‌ ಹಾಗೂ ಸಾಯಿ ಸುದರ್ಶನ್‌ರ ಅಮೋಘ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’, ದಾಖಲೆಯ 412 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ 5 ವಿಕೆಟ್‌ಗಳ ಜಯದೊಂದಿಗೆ 2 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಜಯಿಸಿದೆ.

ಬೃಹತ್‌ ಗುರಿ ಬೆನ್ನತ್ತಿದ ಭಾರತ ‘ಎ’ ಪರ ರಾಹುಲ್‌ ಔಟಾಗದೆ 176, ಸಾಯಿ ಸುದರ್ಶನ್‌ 100, ನಾಯಕ ಧೃವ್‌ ಜುರೆಲ್‌ 56 ರನ್‌ ಸಿಡಿಸಿದರು. 5 ವಿಕೆಟ್‌ ನಷ್ಟಕ್ಕೆ 413 ರನ್‌ ಗಳಿಸಿದ ಭಾರತ ‘ಎ’, ದೇಶದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6ನೇ ಅತಿದೊಡ್ಡ ಮೊತ್ತವನ್ನು ಚೇಸ್‌ ಮಾಡಿದ ದಾಖಲೆಗೆ ಪಾತ್ರವಾಯಿತು. ಇನ್ನು ‘ಎ’ ಟೆಸ್ಟ್‌ಗಳ ಇತಿಹಾಸದಲ್ಲೇ ಗರಿಷ್ಠ ರನ್‌ ಚೇಸ್‌ ಎನ್ನುವ ದಾಖಲೆಯನ್ನೂ ಭಾರತ ತಂಡ ಬರೆಯಿತು.

ಸ್ಕೋರ್‌: ಆಸ್ಟ್ರೇಲಿಯಾ ‘ಎ’ 420 ಹಾಗೂ 185, ಭಾರತ ‘ಎ’ 194 ಹಾಗೂ 413/5