ದುಲೀಪ್‌ ಟ್ರೋಫಿ: ಮೊದಲ ದಿನ ಜಗದೀಶನ್‌ ಅಜೇಯ 148, ಋತುರಾಜ್‌ 184 ರನ್‌

| Published : Sep 05 2025, 01:00 AM IST

ಸಾರಾಂಶ

ಕೇಂದ್ರ ವಲಯ ವಿರುದ್ಧ ಪಶ್ಚಿಮ ವಲಯ ಮೇಲುಗೈ ಸಾಧಿಸಿದೆ. ಮೊದಲ ದಿನ ತಂಡ 6 ವಿಕೆಟ್‌ಗೆ 363 ರನ್‌ ಕಲೆಹಾಕಿದೆ. ಯಶಸ್ವಿ ಜೈಸ್ವಾಲ್(4), ಶ್ರೇಯಸ್‌ ಅಯ್ಯರ್‌(25) ವಿಫಲರಾದರು.

ಬೆಂಗಳೂರು: ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಮೊದಲ ದಿನ ಉತ್ತರ ವಲಯ ವಿರುದ್ಧ ದಕ್ಷಿಣ ವಲಯ ತಂಡ ಮೇಲುಗೈ ಸಾಧಿಸಿದೆ. ತಂಡ ದಿನದಂತ್ಯಕ್ಕೆ 3 ವಿಕೆಟ್‌ಗೆ 297 ರನ್‌ ಕಲೆಹಾಕಿದೆ.ಮೊದಲ ವಿಕೆಟ್‌ಗೆ ತನ್ಮಯ್ ಅಗರ್‌ವಾಲ್‌ ಹಾಗೂ ಜಗದೀಶನ್‌ 103 ರನ್‌ ಜೊತೆಯಾಟವಾಡಿದರು. ತನ್ಮಯ್‌ 43 ರನ್‌ಗೆ ಔಟಾದ ಬಳಿಕ ಕರ್ನಾಟಕದ ದೇವದತ್‌ ಪಡಿಕ್ಕಲ್‌ ಜೊತೆಗೂಡಿ ಜಗದೀಶನ್‌ 2ನೇ ವಿಕೆಟ್‌ಗೆ 128 ರನ್‌ ಸೇರಿಸಿದರು. ಪಡಿಕ್ಕಲ್‌ 71 ಎಸೆತಕ್ಕೆ 57 ರನ್‌ ಗಳಿಸಿ ಔಟಾದರು. ಆದರೆ ಜಗದೀಶನ್‌ 260 ಎಸೆತಕ್ಕೆ ಔಟಾಗದೆ 148 ರನ್‌ ಗಳಿಸಿದ್ದು, ನಾಯಕ ಅಜರುದ್ದೀನ್‌(ಔಟಾಗದೆ 11) ಜೊತೆ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.ಪಶ್ಚಿಮ ವಲಯ ಮೇಲುಗೈ:ಮತ್ತೊಂದು ಪಂದ್ಯದಲ್ಲಿ ಕೇಂದ್ರ ವಲಯ ವಿರುದ್ಧ ಪಶ್ಚಿಮ ವಲಯ ಮೇಲುಗೈ ಸಾಧಿಸಿದೆ. ಮೊದಲ ದಿನ ತಂಡ 6 ವಿಕೆಟ್‌ಗೆ 363 ರನ್‌ ಕಲೆಹಾಕಿದೆ. ಯಶಸ್ವಿ ಜೈಸ್ವಾಲ್(4), ಶ್ರೇಯಸ್‌ ಅಯ್ಯರ್‌(25) ವಿಫಲರಾದರು. ಆದರೆ ಸ್ಫೋಟಕ ಆಟವಾಡಿದ ಋತುರಾಜ್‌ ಗಾಯಕ್ವಾಡ್‌ 206 ಎಸೆತಗಳಲ್ಲಿ 184 ರನ್‌ ಸಿಡಿಸಿ ನಿರ್ಗಮಿಸಿದರು. ತನುಶ್‌ ಕೋಟ್ಯನ್(ಔಟಾಗದೆ 65), ನಾಯಕ ಶಾರ್ದೂಲ್‌ ಠಾಕೂರ್‌(ಔಟಾಗದೆ 24) ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಖಲೀಲ್‌ ಅಹ್ಮದ್‌, ಸರನ್ಶ್‌ ಜೈನ್‌ ತಲಾ 2 ವಿಕೆಟ್‌ ಕಿತ್ತರು.