ಸಾರಾಂಶ
ಮಾಜಿ ಚಾಂಪಿಯನ್ ಶ್ರೀಲಂಕಾಗೆ ಶಾಕ್ ನೀಡುತ್ತಾ ನೇಪಾಳ? ಟಿ20 ವಿಶ್ವಕಪ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಂಕಾಕ್ಕೆ ಎದುರಾಗಲಿದೆ ನೇಪಾಳ ಸವಾಲು.
ಲಾಡರ್‌ಹಿಲ್ (ಫ್ಲೋರಿಡಾ): ಮೊದಲೆರಡು ಪಂದ್ಯಗಳಲ್ಲಿ ದ.ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಸೋಲುಂಡು ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಚಾಂಪಿಯನ್ ಶ್ರೀಲಂಕಾಕ್ಕೆ ಬುಧವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೇಪಾಳ ಸವಾಲು ಎದುರಾಗಲಿದೆ. ಲಂಕಾಕ್ಕೆ ನೇಪಾಳ ಹಾಗೂ ನೆದರ್‌ಲೆಂಡ್ಸ್ ವಿರುದ್ಧ ಪಂದ್ಯಗಳು ಬಾಕಿ ಇದ್ದು, ಈ ಎರಡೂ ಪಂದ್ಯಗಳನ್ನು ಗೆದ್ದರೂ ತಂಡದ ಸೂಪರ್-8 ಹಾದಿ ಸುಗಮಗೊಳ್ಳುವುದಿಲ್ಲ. ಈ ಎರಡು ತಂಡಗಳ ಪೈಕಿ ಒಂದು ತಂಡ ಬಾಂಗ್ಲಾದೇಶವನ್ನು ಸೋಲಿಸಲಿ ಎಂದು ಲಂಕನ್ನರು ಪ್ರಾರ್ಥಿಸುತ್ತಿದ್ದಾರೆ. ಇನ್ನು ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದ್ದು, ಪಂದ್ಯ ರದ್ದಾರೆ ಲಂಕಾ ಗುಂಪು ಹಂತದಲ್ಲೇ ಹೊರಬೀಳಲಿದೆ.
ನೇಪಾಳ ಟಿ20 ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದ್ದು, ದೊಡ್ಡ ತಂಡಗಳನ್ನು ಎದುರಿಸಿದ ಅನುಭವ ಹೊಂದಿದೆ. ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ನೆದರ್‌ಲೆಂಡ್ಸ್ ವಿರುದ್ಧ ಸೋತಿದ್ದ ನೇಪಾಳ, ಮೊದಲ ಜಯಕ್ಕಾಗಿ ಕಾತರಿಸುತ್ತಿದೆ.ಪಂದ್ಯ ಆರಂಭ: ಬೆಳಗ್ಗೆ 5ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್