ಸಾರಾಂಶ
ಇಂದು ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಗೆ ಎದುರಾಗಲಿದೆ ನಮೀಬಿಯಾ ಸವಾಲು. ಕಾಂಗರೂ ಪಡೆಗೆ ಹ್ಯಾಟ್ರಿಕ್ ಜಯದ ಜೊತೆಗೆ ಸೂಪರ್-8 ಹಂತಕ್ಕೆ ಪ್ರವೇಶಿಸುವ ಗುರಿ.
ನಾರ್ಥ್‌ಸೌಂಡ್ (ಆ್ಯಂಟಿಗಾ): ಟೂರ್ನಿ ಗೆಲ್ಲುವ ಫೇವರಿಟ್‌ಗಳಲ್ಲಿ ಒಂದಾದ ಆಸ್ಟ್ರೇಲಿಯಾ, ಟಿ20 ವಿಶ್ವಕಪ್‌ನ ‘ಬಿ’ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯ ಗೆದ್ದಿದ್ದು, ಬುಧವಾರ ತನ್ನ 3ನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಆಸೀಸ್ ಗೆದ್ದರೆ ಸೂಪರ್-8 ಹಂತಕ್ಕೆ ಪ್ರವೇಶ ಖಚಿತವಾಗಲಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 36 ರನ್ ಗೆಲುವು ಸಾಧಿಸಿದ್ದ ಆಸೀಸ್, ಟೂರ್ನಿಯಲ್ಲಿ 200ಕ್ಕೂ ಹೆಚ್ಚು ರನ್ ಕಲೆಹಾಕಿದ ಮೊದಲ ತಂಡ ಎನಿಸಿತ್ತು. ತಂಡ ಸಾಂಘಿಕ ಪ್ರದರ್ಶನ ತೋರುತ್ತಿದ್ದು, ಈ ಪಂದ್ಯದಲ್ಲಿ ಸುಲಭ ಗೆಲುವಿನ ನಿರೀಕ್ಷೆ ಇದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಒಮಾನ್ ವಿರುದ್ಧ ಸೂಪರ್ ಓವರ್‌ನಲ್ಲಿ ಜಯಿಸಿದ್ದ ನಮೀಬಿಯಾ, 2ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಶರಣಾಗಿತ್ತು. ಸೂಪರ್-8 ರೇಸ್‌ನಲ್ಲಿ ಉಳಿಯಲು ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಇನ್ನು, ಟಿ20ಯಲ್ಲಿ ನಮೀಬಿಯಾ ವಿರುದ್ಧ ಆಸೀಸ್ ಮೊದಲ ಬಾರಿಗೆ ಸೆಣಸುತ್ತಿದೆ.ಪಂದ್ಯ ಆರಂಭ: ಬೆಳಗ್ಗೆ 6ಕ್ಕೆ