ನ್ಯೂಯಾರ್ಕ್‌ನಲ್ಲಿ ಜಿಮ್‌ಗಾಗಿಟೀಂ ಇಂಡಿಯಾ ಹುಡುಕಾಟ!

| Published : Jun 12 2024, 12:36 AM IST

ಸಾರಾಂಶ

ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಜಿಮ್‌ ವ್ಯವಸ್ಥೆ ಸರಿಯಿಲ್ಲದ ಹಿನ್ನೆಲೆಯಲ್ಲಿ ಜಿಮ್‌ಗಾಗಿ ಹುಡುಕಾಟ. ನ್ಯೂಯಾರ್ಕ್‌ನ ಖಾಸಗಿ ಜಿಮ್‌ನ ಸದಸ್ಯತ್ವ ಪಡೆದು ವರ್ಕೌಟ್‌ ಮಾಡುತ್ತಿರುವ ಆಟಗಾರರು.

- ಹೋಟೆಲ್‌ನಲ್ಲಿರುವ ಜಿಮ್‌ ಸರಿಯಿಲ್ಲದ ಹಿನ್ನೆಲೆನ್ಯೂಯರ್ಕ್‌: ಟಿ20 ವಿಶ್ವಕಪ್‌ನಲ್ಲಿ ಆಡಲು ಅಮೆರಿಕಕ್ಕೆ ತೆರಳಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಸಾಲು ಸಾಲು ಸಮಸ್ಯೆ ಎದುರಾಗಿದೆ. ಸ್ಥಳೀಯ ಪಾರ್ಕ್‌ವೊಂದರಲ್ಲಿ ನೆಟ್ಸ್‌ ಅಭ್ಯಾಸ ನಡೆಸುತ್ತಿದ್ದ ತಂಡ, ವರ್ಕೌಟ್‌ ಮಾಡಲು ಜಿಮ್‌ಗಾಗಿ ಹುಡುಕಾಟ ನಡೆಸಬೇಕಾಯಿತು ಎನ್ನುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣದ ಸಮೀಪವೇ ಹೋಟೆಲ್‌ವೊಂದರಲ್ಲಿ ಭಾರತ ತಂಡ ವಾಸ್ತವ್ಯ ಹೂಡಿದ್ದು, ಆ ಹೋಟೆಲ್‌ನಲ್ಲಿರುವ ಜಿಮ್‌ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ತಿಳಿದುಬಂದಿದೆ. ಆಟಗಾರರಿಗೆ ಬೇಕಿರುವ ಉಪಕರಣಗಳು ಲಭ್ಯವಿಲ್ಲದ ಕಾರಣ, ನ್ಯೂಯಾರ್ಕ್‌ ನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಜಿಮ್‌ನ ಸದಸ್ಯತ್ವ ಪಡೆದು ಆಟಗಾರರು ವರ್ಕೌಟ್‌ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಟಿ20 ವಿಶ್ವಕಪ್‌ ನಡೆಯುತ್ತಿದ್ದು, ಆಯೋಜಕರು ಬಹುತೇಕ ತಂಡಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತ ತಂಡದಿಂದಲೂ ಅಸಮಾಧಾನ ವ್ಯಕ್ತವಾಗಿದೆಯಾದರೂ, ಐಸಿಸಿಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳ ವರದಿಯಲ್ಲಿ ಹೇಳಲಾಗಿದೆ.