ಉಲ್ಹಾಸ್‌ ಯುವಿಪೆಪ್‌ ಬಾಸ್ಕೆಟ್‌ಬಾಲ್‌ ಅಕಾಡೆಮಿ ಲೋಕಾರ್ಪಣೆ

| N/A | Published : Aug 07 2025, 12:45 AM IST / Updated: Aug 07 2025, 08:15 AM IST

ಸಾರಾಂಶ

ಬೆಂಗಳೂರು, ನವದೆಹಲಿ ಸೇರಿದಂತೆ ದೇಶದ ವಿವಿಧೆಡೆದ ಶಾಲೆಗಳೊಂದಿಗೆ ಕೈಜೋಡಿಸಿ ಈ ಅಕಾಡೆಮಿ ಕಾರ್ಯಾಚರಿಸಲಿದೆ.

 ಬೆಂಗಳೂರು :  ಉಲ್ಹಾಸ್‌ ಯುವಿಪೆಪ್‌ ಬಾಸ್ಕೆಟ್‌ಬಾಲ್‌ ಅಕಾಡೆಮಿ(ಯುವೈಬಿಎ) ಹಾಗೂ ಅದರ ಅಥ್ಲೀಟ್‌ಗಳ ಸಹಾಯಕ ಆ್ಯಪ್‌ವೊಂದನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು. 

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಅವರು ಅಕಾಡೆಮಿ, ಆ್ಯಪ್‌ಗೆ ಚಾಲನೆ ನೀಡಿದರು. 

ಯುರೋಪ್‌ನಲ್ಲಿ ಆಡಿದ ಭಾರತದ ಮೊದಲ ವೃತ್ತಿಪರ ಬಾಸ್ಕೆಟ್‌ಬಾಲ್‌ ಆಟಗಾರ ಎನಿಸಿಕೊಂಡಿರುವ ಉಲ್ಹಾಸ್ ಕೆ.ಎಸ್‌. ಅಕಾಡೆಮಿಯ ಸ್ಥಾಪಕ. ಬೆಂಗಳೂರು, ನವದೆಹಲಿ ಸೇರಿದಂತೆ ದೇಶದ ವಿವಿಧೆಡೆದ ಶಾಲೆಗಳೊಂದಿಗೆ ಕೈಜೋಡಿಸಿ ಈ ಅಕಾಡೆಮಿ ಕಾರ್ಯಾಚರಿಸಲಿದೆ. 2036ರಲ್ಲಿ ಒಲಿಂಪಿಕ್ಸ್‌ ಪದಕ, ಬಾಸ್ಕೆಟ್‌ಬಾಲ್‌ನಲ್ಲಿ ಭಾರತ ನಂ.1 ಸ್ಥಾನ ಮತ್ತು ಭಾರತದ ಪ್ರತಿಭೆಗಳನ್ನು ವಿಶ್ವ ಮಟ್ಟದಲ್ಲಿ ಆಡಿಸುವ ಗುರಿಯನ್ನು ಅಕಾಡೆಮಿ ಹೊಂದಿದೆ.

ಯುಎಸ್‌ ಓಪನ್‌: ಈ ಸಲ ₹745 ಕೋಟಿ ಬಹುಮಾನ, ಟೆನಿಸ್‌ ಇತಿಹಾಸದ ಗರಿಷ್ಠ

ನ್ಯೂಯಾರ್ಕ್‌: ಈ ಬಾರಿ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಬಹುಮಾನ ಮೊತ್ತದಲ್ಲಿ ಭಾರೀ ಏರಿಕೆಯಾಗಿದೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತವನ್ನು 85 ಮಿಲಿಯನ್‌ ಯುಎಸ್‌ ಡಾಲರ್‌(745 ಕೋಟಿ ರು.)ಗೆ ಹೆಚ್ಚಿಸಲಾಗಿದೆ. 

ಇದು ಟೆನಿಸ್‌ ಇತಿಹಾಸದಲ್ಲೇ ಗರಿಷ್ಠ ಮೊತ್ತ.ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗುವವರಿಗೆ ತಲಾ 5 ಮಿಲಿಯನ್‌ ಡಾಲರ್‌(₹43 ಕೋಟಿ) ನಗದು ಬಹುಮಾನ ಲಭಿಸಲಿದೆ. ಇದು ಕಳೆದ ಬಾರಿಗಿಂತ ಶೇ.39ರಷ್ಟು ಹೆಚ್ಚು. 2024ರಲ್ಲಿ ಸಿಂಗಲ್ಸ್‌ ವಿಭಾಗದ ವಿಜೇತರಿಗೆ ₹31 ಕೋಟಿ ಬಹುಮಾನ ಲಭಿಸಿದ್ದವು. ಈ ಬಾರಿ ಸಿಂಗಲ್ಸ್‌ನ ರನ್ನರ್‌-ಅಪ್‌ಗೆ ₹21.9 ಕೋಟಿ, ಡಬಲ್ಸ್‌ ವಿಜೇತರಿಗೆ ₹8.7 ಕೋಟಿ ನಗದು ಬಹುಮಾನ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Read more Articles on