ಎಲ್ಲಾ ಪಿಚ್‌ಗಳಲ್ಲೂ ನಾವು ಗೆಲ್ಲಬಲ್ಲೆವು: ರೋಹಿತ್‌ ಶರ್ಮಾ

| Published : Feb 19 2024, 01:35 AM IST / Updated: Feb 19 2024, 07:44 AM IST

Rohith Sharma
ಎಲ್ಲಾ ಪಿಚ್‌ಗಳಲ್ಲೂ ನಾವು ಗೆಲ್ಲಬಲ್ಲೆವು: ರೋಹಿತ್‌ ಶರ್ಮಾ
Share this Article
  • FB
  • TW
  • Linkdin
  • Email

ಸಾರಾಂಶ

ಪಿಚ್‌ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

ರಾಜ್‌ಕೋಟ್‌: ಪಿಚ್‌ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. 

ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಜಯಭೇರಿ ಬಾರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ‘ಸ್ಪಿನ್‌ ಸ್ನೇಹಿ ಪಿಚ್‌ ಸೇರಿ ಯಾವುದೇ ಪಿಚ್‌ಗಳಲ್ಲೂ ನಾವು ಗೆಲ್ಲಬಲ್ಲೆವು. 

ಹಲವು ವರ್ಷಗಳಿಂದ ನಾವು ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಗೆದ್ದಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ’ ಎಂದರು. 

ಪಿಚ್‌ ಕ್ಯುರೇಟರ್‌ಗಳಿಗೆ ತಂಡದ ಆಡಳಿತ ಬೇಡಿಕೆ ಪಿಚ್‌ ಹೀಗೇ ಇರಬೇಕು ಎಂದು ಒತ್ತಾಯಿಸಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೋಹಿತ್‌, ‘ಯಾವುದೇ ಕ್ರೀಡಾಂಗಣದ ಕ್ಯುರೇಟರ್‌ಗಳ ಬಳಿ ನಾವು ಪಿಚ್‌ ಬಗ್ಗೆ ಚರ್ಚಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಡಬ್ಲ್ಯುಟಿಸಿ ರ್‍ಯಾಂಕಿಂಗ್‌ : 2ನೇ ಸ್ಥಾನದಲ್ಲೇ ಭಾರತ
ದುಬೈ: 2023-25ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಕಾಯ್ದುಕೊಂಡಿದೆ. ಈ ವರೆಗೂ ಆಡಿರುವ ಒಟ್ಟು 7 ಪಂದ್ಯಗಳಲ್ಲಿ 4 ಜಯ, 2 ಸೋಲು, 1 ಡ್ರಾ ಸಾಧಿಸಿ 59.52% ಗೆಲುವಿನ ಪ್ರತಿಶತ ಹೊಂದಿದೆ. 

75.00 ಗೆಲುವಿನ ಪ್ರತಿಶತ ಹೊಂದಿರುವ ನ್ಯೂಜಿಲೆಂಡ್‌ ಅಗ್ರಸ್ಥಾನದಲ್ಲಿದೆ. ಭಾರತದ ವಿರುದ್ಧ ಸತತ 2 ಟೆಸ್ಟ್‌ಗಳಲ್ಲಿ ಸೋಲನುಭವಿಸಿರುವ ಇಂಗ್ಲೆಂಡ್‌ 8ನೇ ಸ್ಥಾನಕ್ಕೆ ಕುಸಿದಿದೆ. 

ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ ಕ್ರಮವಾಗಿ 3, 4 ಹಾಗೂ 5ನೇ ಸ್ಥಾನದಲ್ಲಿದ್ದು, 6ನೇ ಸ್ಥಾನದಲ್ಲಿ ವೆಸ್ಟ್‌ಇಂಡೀಸ್‌, 7ರಲ್ಲಿ ದ.ಆಫ್ರಿಕಾ, 9ನೇ ಸ್ಥಾನದಲ್ಲಿ ಶ್ರೀಲಂಕಾ ತಂಡ ಇದೆ.