ಸಾರಾಂಶ
ಐಪಿಎಲ್ ಆಟಗಾರರ ಹರಾಜಿನಲ್ಲಿ 3.4 ಕೋಟಿ ರು.ಗೆ ಬಿಕರಿಯಾಗಿ ಭಾರೀ ಅಚ್ಚರಿ ಮೂಡಿಸಿದ್ದ ದೆಹಲಿ ಮೂಲದ 19 ವರ್ಷದ ಪ್ರಿಯಾನ್ಶ್ ಆರ್ಯಾ, ಐಪಿಎಲ್‌ನಲ್ಲಿ ತಾವಾಡಿದ ಕೇವಲ 4ನೇ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
ಮುಲ್ಲಾನ್‌ಪುರ್: ಐಪಿಎಲ್ ಆಟಗಾರರ ಹರಾಜಿನಲ್ಲಿ 3.4 ಕೋಟಿ ರು.ಗೆ ಬಿಕರಿಯಾಗಿ ಭಾರೀ ಅಚ್ಚರಿ ಮೂಡಿಸಿದ್ದ ದೆಹಲಿ ಮೂಲದ 19 ವರ್ಷದ ಪ್ರಿಯಾನ್ಶ್ ಆರ್ಯಾ, ಐಪಿಎಲ್‌ನಲ್ಲಿ ತಾವಾಡಿದ ಕೇವಲ 4ನೇ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಮಂಗಳವಾರ ಇಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 39 ಎಸೆತದಲ್ಲಿ ಶತಕ ಸಿಡಿಸುವ ಮೂಲಕ, ಪ್ರಿಯಾನ್ಶ್ ಎಲ್ಲರನ್ನೂ ಬೆರಗಾಗಿಸಿದರು.
ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದ ಪ್ರಿಯಾನ್ಶ್ ಮೊದಲು 19 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಬಳಿಕ 20 ಎಸೆತಗಳಲ್ಲಿ ಮತ್ತೆ 50 ರನ್ ಕಲೆಹಾಕಿ, ಐಪಿಎಲ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು.
ಐಪಿಎಲ್ ಇತಿಹಾಸದಲ್ಲೇ ಅತಿವೇಗವಾಗಿ ಶತಕ ಸಿಡಿಸಿದ ಅನ್‌ಕ್ಯಾಪ್ಡ್ (ಅಂ.ರಾ. ಕ್ರಿಕೆಟ್ ಆಡದ) ಆಟಗಾರ ಎನ್ನುವ ದಾಖಲೆ ಬರೆದ ಪ್ರಿಯಾನ್ಶ್, ಭಾರತೀಯನಿಂದ ದಾಖಲಾದ 2ನೇ ಅತಿವೇಗದ ಶತಕದ ದಾಖಲೆಗೂ ಪಾತ್ರರಾದರು.
2010ರಲ್ಲಿ ಯೂಸುಫ್ ಪಠಾಣ್ 37 ಎಸೆತದಲ್ಲಿ ಶತಕ ಸಿಡಿಸಿದ್ದರು. ಇನ್ನು, ಐಪಿಎಲ್‌ನಲ್ಲಿ ಇದು ಒಟ್ಟಾರೆ 5ನೇ ಅತಿವೇಗದ ಶತಕ ಎನಿಸಿತು. ಐಪಿಎಲ್‌ನಲ್ಲಿ ಅತಿವೇಗದ ಶತಕ
ಆಟಗಾರಎಸೆತತಂಡವಿರುದ್ಧವರ್ಷ
ಕ್ರಿಸ್ ಗೇಲ್30ಆರ್‌ಸಿಬಿಪುಣೆ2013
ಯೂಸುಫ್37ರಾಜಸ್ಥಾನಮುಂಬೈ2010
ಮಿಲ್ಲರ್‌ಪಂಜಾಬ್‌ಆರ್‌ಸಿಬಿ2013
ಹೆಡ್‌ಹೈದ್ರಾಬಾದ್‌ಆರ್‌ಸಿಬಿ2024
ಪ್ರಿಯಾನ್ಶ್‌ಪಂಜಾಬ್‌ಚೆನ್ನೈ2025