ಸಾರಾಂಶ
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ತಂಡವನ್ನು ತೊರೆದಿದ್ದಾರೆ.
ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ತಂಡವನ್ನು ತೊರೆದಿದ್ದಾರೆ. ಮುಂದಿನ ಋತುವಿನಿಂದ ಅವರು ಗೋವಾ ಪರ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಗೋವಾ ತಂಡದ ನಾಯಕತ್ವವನ್ನೂ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಈಗಾಗಲೇ ಜೈಸ್ವಾಲ್ ಮುಂಬೈ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದು, ಗೋವಾ ತಂಡದ ಪರ ಆಡಲು ಅನುಮತಿ ಪಡೆದುಕೊಂಡಿದ್ದಾರೆ. ಅವರು ಜನವರಿಯಲ್ಲಿ ರಣಜಿ ಟ್ರೋಫಿ ಗುಂಪು ಹಂತದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯದಲ್ಲಿ ಕೊನೆ ಬಾರಿ ಮುಂಬೈ ಪರ ಆಡಿದ್ದರು.
ಅದು 2024-25ರ ಋತುವಿನಲ್ಲಿ ಮುಂಬೈ ಪರ ಅವರಾಡಿದ ಏಕೈಕ ಪಂದ್ಯ. ಭಾರತದ ಪರ 19 ಟೆಸ್ಟ್ ಆಡಿರುವ ಹಾಗೂ ತಂಡದ ಮೊದಲ ಆದ್ಯತೆಯ ಆರಂಭಿಕ ಆಟಗಾರನಾಗಿರುವ 23 ವರ್ಷದ ಜೈಸ್ವಾಲ್ ಮುಂಬೈ ತಂಡದ ತೊರೆಯಲು ನಿಜವಾದ ಕಾರಣ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.