ಹೊಸ ಆಮದು ಸುಂಕ ಘೋಷಣೆಗಳು ಏ.9ರಿಂದ ಜಾರಿಗೆ : ಭಾರತದಿಂದ ಅಮೆರಿಕಕ್ಕೆ 5 ಫ್ಲೈಟ್‌ ತುಂಬಾ ಐಫೋನ್‌!

| N/A | Published : Apr 07 2025, 12:36 AM IST / Updated: Apr 07 2025, 04:55 AM IST

ಸಾರಾಂಶ

 ಐಫೋನ್‌ ಉತ್ಪಾದಿಸುವ ಆ್ಯಪಲ್‌ ಕಂಪನಿ, ಭಾರತದಿಂದ 5 ವಿಮಾನದಷ್ಟು ಐಫೋನ್‌ ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರವಾನಿಸಿದೆ. ಅಂತೆಯೇ ಚಿನ್ನ ಹಾಗೂ ಮುತ್ತು-ರತ್ನಗಳು ಕೂಡ ಭಾರತದಿಂದ ಅಮೆರಿಕಕ್ಕೆ ಸಾಗಣೆ ಆಗಿವೆ ಎಂದು ತಿಳಿದುಬಂದಿದೆ.

 ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾಡಿರುವ ಹೊಸ ಆಮದು ಸುಂಕ ಘೋಷಣೆಗಳು ಏ.9ರಿಂದ ಜಾರಿಗೆ ಬರುತ್ತಿರುವ ಕಾರಣ ಅಮೆರಿಕದಲ್ಲಿ ಐಫೋನ್‌ಗಳೂ ದುಬಾರಿ ಆಗಲಿವೆ. ಹೀಗಾಗಿ ಬೆಲೆ ಏರಿಕೆಯಿಂದ ಸದ್ಯದ ಮಟ್ಟಿಗೆ ಪಾರಾಗಲು ಐಫೋನ್‌ ಉತ್ಪಾದಿಸುವ ಆ್ಯಪಲ್‌ ಕಂಪನಿ, ಭಾರತದಿಂದ 5 ವಿಮಾನದಷ್ಟು ಐಫೋನ್‌ ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರವಾನಿಸಿದೆ. ಅಂತೆಯೇ ಚಿನ್ನ ಹಾಗೂ ಮುತ್ತು-ರತ್ನಗಳು ಕೂಡ ಭಾರತದಿಂದ ಅಮೆರಿಕಕ್ಕೆ ಸಾಗಣೆ ಆಗಿವೆ ಎಂದು ತಿಳಿದುಬಂದಿದೆ.

ಭಾರತದ ಮೇಲೆ ಟ್ರಂಪ್‌ ಶೇ.26, ಚೀನಾದ ಮೇಲೆ ಶೇ.52, ತೈವಾನ್‌ ಮೇಲೆ ಶೇ.32ರಷ್ಟು ತೆರಿಗೆ ಹೇರಿದ್ದಾರೆ. ಐಫೋನ್‌ ಅಮೆರಿಕ ಕಂಪನಿಯಾದರೂ . ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಭಾರತ, ತೈವಾನ್‌ ಹಾಗೂ ಚೀನಾದಲ್ಲಿ ತಯಾರಾಗುತ್ತವೆ. ಹೀಗಾಗಿ ಈ 3 ದೇಶಗಳಿಂದ ರಫ್ತಾಗುವ ಐಫೋನ್‌ಗಳೂ ದುಬಾರಿ ಆಗಲಿವೆ.

ಹೀಗಾಗಿ ಸದ್ಯದ ಮಟ್ಟಿಗೆ ಈ ಬೆಲೆ ಏರಿಕೆಯಿಂದ ಪಾರಾಗಲು ಆ್ಯಪಲ್‌ ಕಂಪನಿ ಭಾರತದಿಂದ 5 ವಿಮಾನದಷ್ಟು ಐಫೋನ್‌ಗಳನ್ನು ಅಮೆರಿಕಕ್ಕೆ ಸಾಗಿಸಿದೆ. ಅವನ್ನು ಅಮೆರಿಕದಲ್ಲಿನ ಗೋದಾಮಿನಲ್ಲಿ ಸಂಗ್ರಹಿಸಲಾಗುತ್ತದೆ. ಏ.9ರೊಳಗೆ ಸಾಗಿಸುವ ಉತ್ಪನ್ನಗಳಿಗೆ ಹಳೆಯ ತೆರಿಗೆಯೇ ಅನ್ವಯ ಆಗುವ ಕಾರಣ ಹೊಸ ತೆರಿಗೆಯಿಂದ ಸದ್ಯಕ್ಕೆ ಬಚಾವಾಗಬಹುದಾಗಿದೆ ಎಂಬುದು ಕಂಪನಿ ಲೆಕ್ಕಾಚಾರ.