ಸಾರಾಂಶ
ಭಾರತದಲ್ಲಿ ಗುರುತಿನ ಚೀಟಿಗಳಲ್ಲಿ ಪ್ರಮುಖವಾಗಿರುವ ಆಧಾರ್ ಕಾರ್ಡ್‌ನಿಂದ ಪ್ರೇರಣೆ ಪಡೆದು, ವಲಸೆ ಸಮಸ್ಯೆ ನಿವಾರಿಸಲು ಅದೇ ರೀತಿಯ ವ್ಯವಸ್ಥೆಯನ್ನು ಬ್ರಿಟನ್‌ನಲ್ಲಿ ಜಾರಿಗೆ ತರುವ ಬಗ್ಗೆ ಅಲ್ಲಿನ ಪ್ರಧಾನಿ ಕೀರ್ ಸ್ಟಾರ್ಮರ್ ಚಿಂತನೆ ನಡೆಸಿದ್ದಾರೆ.
ಮುಂಬೈ: ಭಾರತದಲ್ಲಿ ಗುರುತಿನ ಚೀಟಿಗಳಲ್ಲಿ ಪ್ರಮುಖವಾಗಿರುವ ಆಧಾರ್ ಕಾರ್ಡ್‌ನಿಂದ ಪ್ರೇರಣೆ ಪಡೆದು, ವಲಸೆ ಸಮಸ್ಯೆ ನಿವಾರಿಸಲು ಅದೇ ರೀತಿಯ ವ್ಯವಸ್ಥೆಯನ್ನು ಬ್ರಿಟನ್‌ನಲ್ಲಿ ಜಾರಿಗೆ ತರುವ ಬಗ್ಗೆ ಅಲ್ಲಿನ ಪ್ರಧಾನಿ ಕೀರ್ ಸ್ಟಾರ್ಮರ್ ಚಿಂತನೆ ನಡೆಸಿದ್ದಾರೆ.
2 ದಿನಗಳ ಭಾರತ ಭೇಟಿಯಲ್ಲಿರುವ ಸ್ಟಾರ್ಮರ್ ಅವರು, ಆಧಾರ್ ಕಾರ್ಡ್‌ನ ಮಾಸ್ಟರ್‌ಮೈಂಡ್ ಆಗಿರುವ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು, ಬ್ರಿಟನ್‌ನಲ್ಲೂ ಆಧಾರ್ ಮಾದರಿಯ ರಾಷ್ಟ್ರೀಯ ಗುರುತಿನ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಸಲಹೆಗಳನ್ನು ಕೇಳಿದರು ಎನ್ನಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾರ್ಮರ್, ‘ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅಥವಾ ಇನ್ಯಾವುದೋ ಕೆಲಸಕ್ಕೆ ಕೆಲ ದೇಶದವರು ಇನ್ನೂ ರಸೀದಿಗಳನ್ನು ಹುಡುಕುತ್ತಿರುತ್ತಾರೆ. ಆದರೆ ಭಾರತ ಈಗಾಗಲೇ ಇದಕ್ಕಾಗಿ ಒಂದು ಐಡಿ ತಯಾರಿಸಿ ಯಶಸ್ಸು ಕಂಡಾಗಿದೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿ, ‘ಬ್ರಿಟನ್‌ಲ್ಲೂ ಅಕ್ರಮ ವಲಸೆಯನ್ನು ತಡೆಗಟ್ಟಲು ಇಂತಹ ಗುರುತಿನ ಚೀಟಿ ಅಗತ್ಯ. ಜತೆಗೆ ಆ ಒಂದು ಕಾರ್ಡ್ ಬಳಸಿಕೊಂಡು ಬ್ರಿಟನ್ ಪ್ರಜೆಗಳು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತಾಗುತ್ತದೆ’ ಎಂದು ಹೇಳಿದರು.