ಬಾಂಗ್ಲಾ : ಕೃಷ್ಣ ಜನ್ಮಾಷ್ಟಮಿಯಲ್ಲಿ 3 ಸೇನಾ ಪಡೆಗಳ ಮುಖ್ಯಸ್ಥರು ಪ್ರತ್ಯಕ್ಷ

| N/A | Published : Aug 18 2025, 12:02 AM IST

ಬಾಂಗ್ಲಾ : ಕೃಷ್ಣ ಜನ್ಮಾಷ್ಟಮಿಯಲ್ಲಿ 3 ಸೇನಾ ಪಡೆಗಳ ಮುಖ್ಯಸ್ಥರು ಪ್ರತ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಇಸ್ಕಾನ್ ದೇಗುಲಗಳೊಂದಿಗೆ ಸಂಘರ್ಷ, ದೇಗುಲಕ್ಕೆ ಬೆಂಕಿ ಘಟನೆಗಳ ಬೆನ್ನಲ್ಲೇ ಅಚ್ಚರಿ ಬೆಳವಣಿಗಯೊಂದರಲ್ಲಿ ಶನಿವಾರ ನಡೆದ ಕೃಷ್ಣಜನ್ಮಾಷ್ಟಮಿ ಆಚರಣೆ ವೇಳೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ.

 ಢಾಕಾ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಇಸ್ಕಾನ್ ದೇಗುಲಗಳೊಂದಿಗೆ ಸಂಘರ್ಷ, ದೇಗುಲಕ್ಕೆ ಬೆಂಕಿ ಘಟನೆಗಳ ಬೆನ್ನಲ್ಲೇ ಅಚ್ಚರಿ ಬೆಳವಣಿಗಯೊಂದರಲ್ಲಿ ಶನಿವಾರ ನಡೆದ ಕೃಷ್ಣಜನ್ಮಾಷ್ಟಮಿ ಆಚರಣೆ ವೇಳೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ.

ಶನಿವಾರ ಇಲ್ಲಿನ ಪಲಾಶಿ ಛೇದಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್‌ ವಾಕರ್‌ - ಉಜ್- ಜಮಾನ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಎಂ. ನಜ್ಮುಲ್ ಹಸನ್ , ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್ ಹಸನ್ ಮಹಮೂದ್‌ ಖಾನ್, ಸೇರಿದಂತೆ ಸೇನಾ ಪಡೆಯ ಪ್ರಮುಖರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸೇನಾ ಮುಖ್ಯಸ್ಥ, ‘ಈ ದೇಶ ಎಲ್ಲರಿಗೂ ಸೇರಿದ್ದು. ಧರ್ಮ, ಜನಾಂಗ ಅಥವಾ ಸಮುದಾಯದ ಆಧಾರದ ಮೇಲೆ ಯಾವುದೇ ವಿಭಜನೆ ಇರುವುದಿಲ್ಲ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ. ನೀವು ನಿರ್ಭೀತಿಯಿಂದ ಬದುಕಬಹುದು’ ಎಂದು ಬಾಂಗ್ಲಾ ಹಿಂದೂಗಳಿಗೆ ಅಭಯ ನೀಡಿದರು. ಜೊತೆಗೆ ಕೃಷ್ಣನ ಚಿಂತನೆಗಳು ದೇಶದಲ್ಲಿ ಶಾಂತಿಗೆ ದಾರಿದೀಪವಾಗಲಿ ಎಂದು ಆಶಿಸಿದ್ದಾರೆ.

Read more Articles on