ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣ, ತಪ್ಪಿದರೆ ಇಸ್ರೇಲ್‌ನ ಗಗನಚುಂಬಿ ಕಟ್ಟಡವೊಂದಕ್ಕೆ ಡಿಕ್ಕಿಹೊಡೆದು 2001ರಲ್ಲಿ ಅಮೆರಿಕದ ಮೇಲಿನ 9/11ನಂಥ ದಾಳಿಯ ಪುನರಾವರ್ತನೆ, ಇವೆರಡೂ ಸಾಧ್ಯವಾಗದಿದ್ದರೆ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ವಿಮಾನ ಪತನ!
ನವದೆಹಲಿ: ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣ, ತಪ್ಪಿದರೆ ಇಸ್ರೇಲ್‌ನ ಗಗನಚುಂಬಿ ಕಟ್ಟಡವೊಂದಕ್ಕೆ ಡಿಕ್ಕಿಹೊಡೆದು 2001ರಲ್ಲಿ ಅಮೆರಿಕದ ಮೇಲಿನ 9/11ನಂಥ ದಾಳಿಯ ಪುನರಾವರ್ತನೆ, ಇವೆರಡೂ ಸಾಧ್ಯವಾಗದಿದ್ದರೆ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ವಿಮಾನ ಪತನ!
ಇವು ಸೆ.30ರಂದು ಭಾರತೀಯ ಮೂಲದ ಸಹಪೈಲಟ್ ಸ್ಮಿತ್ ಮಚ್ಛರ್ ಮೇಲೆ ದಾಳಿ ನಡೆಸಿ ಫ್ಲೈ ದುಬೈ ವಿಮಾನವನ್ನು ಪತನಗೊಳಿಸಲು ಮುಂದಾಗಿದ್ದ ಬಂಧಿತ ಒಮಾನ್ ಮೂಲದ ಪೈಲಟ್ ಹಮಾಮ್ ಅಲ್ ಹಮಾಮಿ ವಿಚಾರಣೆ ವೇಳೆ ಬಾಯ್ಬಿಟ್ಟ ಆಘಾತಕಾರಿ ಸಂಗತಿಗಳು.
ದಾಳಿಗೆಂದೇ ಫ್ಲೈದುಬೈ ಸೇರ್ಪಡೆ:
ಇಸ್ರೇಲ್, ಇಟಲಿ, ಬ್ರಿಟನ್ ಮಾಧ್ಯಮ ವರದಿಗಳ ಪ್ರಕಾರ, ಮಾಧ್ಯಮ ವರದಿಗಳ ಪ್ರಕಾರ ಫ್ಲೈ ದುಬೈ ಸಂಸ್ಥೆಗೆ ಸೇರುವ ಮೊದಲೇ ಹಮಾಮಿ 9/11 ಮಾದರಿಯ ದಾಳಿಗೆ ಸಂಚು ಸಿದ್ಧಪಡಿಸಿಕೊಂಡಿದ್ದ. ಇದಕ್ಕೆಂದೇ ಆತ ಇಸ್ರೇಲ್‌ಗೆ ತೆರಳುವ ವಿಮಾನದಲ್ಲೇ ಪೈಲಟ್ ಆಗಲು ಬಯಸಿದ್ದ. ‘ನಾನು ಯಾವ್ಯಾವ ವಿಮಾನ ಇಸ್ರೇಲ್‌ಗೆ ಹಾರಾಟ ನಡೆಸುತ್ತದೆ ಎಂದು ಪರಿಶೀಲಿಸಿದೆ, ಆ ಬಳಿಕವೇ ಫ್ಲೈದುಬೈ ಸಂಸ್ಥೆಯಲ್ಲಿ ಪೈಲಟ್ ಆಗಿ ಸೇರಲು ನಿರ್ಧರಿಸಿದೆ. ಫ್ಲೈದುಬೈ ಸೇರುವ ಮೊದಲೇ ದಾಳಿ ಕುರಿತು ಯೋಜನೆ ಹಾಕಿಕೊಂಡಿದ್ದೆ’ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ತಿಳಿದುಬಂದಿದೆ. ಫ್ಲೈದುಬೈ ಸಂಸ್ಥೆ ಸೇರಿದ ಬಳಿಕ ಇಸ್ರೇಲ್ ಮಾರ್ಗದ ವಿಮಾನದ ಪೈಲಟ್ ಆಗಲು ಹಮಾಮಿ ತೀವ್ರ ಆಸಕ್ತಿ ತೋರಿದ್ದ ಎನ್ನಲಾಗಿದೆ.
ಹೊಂದು ಹಾಕಿ ದಾಳಿ:
ಘಟನೆ ದಿನ ಅಂದರೆ ಸೆ.30ರಂದು ಹಮಾಮಿ ಫ್ಲೈದುಬೈ ವಿಮಾನ ಜೋರ್ಡನ್ ವಾಯು ಪ್ರದೇಶ ಪ್ರವೇಶಿಸುವವರೆಗೆ ಸುಮ್ಮನಿದ್ದ, ಈ ಮೂಲಕ ವಿಮಾನ ಇಸ್ರೇಲ್ ಪ್ರವೇಶಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದ. ಆ ಬಳಿಕವಷ್ಟೇ ಭಾರತೀಯ ಮೂಲದ ಸಹಪೈಲಟ್ ಸ್ಮಿತ್ ಮಚ್ಚಾನಿ ಮೇಲೆ ದಾಳಿ ನಡೆಸಿದ್ದ.
ಏರ್ಪೋರ್ಟ್/ಗಗನಚುಂಚಿ ಕಟ್ಟಡ ಗುರಿ:
ಒಮ್ಮೆ ಕಾಕ್‌ಪಿಟ್ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಂತೆ ಯಾವುದೇ ಅನುಮಾನ ಬಾರದಂತೆ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನೆಪದಲ್ಲಿ ವಿಮಾನ ಪತನಗೊಳಿಸಿ ಸಾವಿರಾರು ಮಂದಿ ಜೀವ ಹಾನಿ ಮಾಡುವುದು ಹಮಾಮಿ ಮೂಲ ಉದ್ದೇಶ ಆಗಿತ್ತು. ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ 9/11 ಮಾದರಿಯಲ್ಲಿ ಇಸ್ರೇಲ್‌ನ ಗಗನಚುಂಬಿ ಕಟ್ಟಡವೊಂದಕ್ಕೆ ವಿಮಾನವನ್ನು ಡಿಕ್ಕಿಹೊಡೆಸುವ ಪ್ಲ್ಯಾನ್ ಕೂಡ ಆತನ ಬಳಿ ಇತ್ತು. ಈ ಎರಡೂ ಪ್ರಯತ್ನ ಕೈಕೊಟ್ವರೆ ಅಂತಿಮವಾಗಿ ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ದಾಳಿ ನಡೆಸುವುದು ಆತನ ಗುರಿ ಆಗಿತ್ತಂತೆ.
ಇಸ್ರೇಲ್‌ಗೆ ತೆರಳಿ ಮಾಹಿತಿ:
ಉಗ್ರ ಹಮಾಮಿ ಹಲವು ಬಾರಿ ಫ್ಲೈದುಬೈ ವಿಮಾನದ ಪೈಲಟ್ ಆಗಿ ಬೆನ್ ಗುರಿಯಾನ್ ಏರ್ಪೋರ್ಟ್‌ಗೆ ಹೋಗಿ ಬಂದಿದ್ದ. ಈ ವೇಳೆ ದಾಳಿಯ ಕಾರ್ಯತಂತ್ರ ರೂಪಿಸಲು ಬೇಕಿರುವ ಮಾಹಿತಿಗಳನ್ನು ಕಲೆಹಾಕಿದ್ದ. ಬ್ರಿಟನ್‌ನ ಮಾಧ್ಯಮವೊಂದರ ಪ್ರಕಾರ ಕಳೆದ ಜುಲೈ ತಿಂಗಳಲ್ಲೇ ಹಮಾಮಿ 9/11 ಮಾದರಿಯಲ್ಲಿ ವಿಮಾನ ಪತನಕ್ಕೆ ಮುಂದಾಗಿದ್ದ. ಆದರೆ, ವಿಮಾನದ ಸಿಬ್ಬಂದಿಯೊಬ್ಬರ ಜತೆಗಿನ ಗೆಳೆತನದಿಂದಾಗಿ ಅದು ವಿಫಲವಾಗಿತ್ತು. ಆ ವಿಮಾನದಲ್ಲಿ ಆತ್ಮೀಯ ಸಿಬ್ಬಂದಿಯೂ ಇದ್ದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ತನ್ನ ಯೋಜನೆ ಕೈಬಿಟ್ಟಿದ್ದ.
ಆ ಬಳಿಕ ಸೆ.30ರಂದು ಎರಡನೇ ಬಾರಿಗೆ ಆ ಷಡ್ಯಂತ್ರವನ್ನು ಕಾರ್ಯರೂಪಕ್ಕಿಳಿಸಲು ಮುಂದಾಗಿದ್ದ. ಆದರೆ ಸಹಪೈಲಟ್ ಸ್ಮಿತ್ ಮಚ್ಚರ್‌ನ ಅಸಾಧಾರಣ ಪ್ರತಿರೋಧದಿಂದಾಗಿ ಈ ಯೋಜನೆ ಅದೃಷ್ಟವಶಾತ್ ವಿಫಲವಾಗಿ ಸಾವಿರಾರು ಮಂದಿ ಜೀವ ಉಳಿಯುವಂತಾಯಿತು.
