ಸಾರಾಂಶ
ಐರೋಪ್ಯ ಒಕ್ಕೂಟದ ಪ್ರಮುಖ ರಾಷ್ಟ್ರಗಳಾದ ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ಸೋಮವಾರ ಭಾರಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಲಿಸ್ಬನ್/ಬಾರ್ಸಿಲೋನಾ: ಐರೋಪ್ಯ ಒಕ್ಕೂಟದ ಪ್ರಮುಖ ರಾಷ್ಟ್ರಗಳಾದ ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ಸೋಮವಾರ ಭಾರಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆ ನೆರೆಯ ಫ್ರಾನ್ಸ್‌ನ ಹಲವು ಭಾಗಗಳಲ್ಲೂ ಕಾಣಿಸಿಕೊಂಡಿದ್ದು ಸಾಮಾನ್ಯ ಜನಜೀವನದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಏಕಾಏಕಿ ಸಂಭವಿಸಿದ ಘಟನೆಯಿಂದ ಅಂದಾಜು 5 ಕೋಟಿ ಜನ ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ.
ಈ ದಿಢೀರ್ ಸಮಸ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸಮಸ್ಯೆ ಇತ್ಯರ್ಥಕ್ಕೆ ಹಲವು ಗಂಟೆಗಳೇ ಬೇಕಾಗಬಹುದು ಎಂದು ವಿದ್ಯುತ್ ಸರಬರಾಜು ಕಂಪನಿಗಳು ಹೇಳಿದ್ದು, ಮೂರೂ ದೇಶಗಳ ಕೋಟ್ಯಂತರ ಜನರು ಕತ್ತಲಲ್ಲೇ ರಾತ್ರಿ ಕಳೆದಿದ್ದಾರೆ.
ವಿದ್ಯುತ್ ಕಡಿತದ ಪರಿಣಾಮ ಪೋರ್ಚುಗಲ್‌ನ ಸಂಸತ್ ಸಹ ಕತ್ತಲಲ್ಲಿ ಮುಳುಗಿತ್ತು. ಜೊತೆಗೆ ಸಬ್‌ವೇಗಳಲ್ಲಿ ರೈಲುಗಳು ಇದ್ದಕ್ಕಿದ್ದಂತೆ ಸಂಚಾರ ಸ್ಥಗಿತಗೊಳಿಸಿದವು. ರಸ್ತೆಗಳಲ್ಲಿ ಟ್ರಾಫಿಕ್ ಲೈಟ್‌ಗಳು ಕಾರ್ಯನಿರ್ವಹಿಸದ ಕಾರಣ ವಾಹನ ದಟ್ಟಣೆ ಉಂಟಾಗಿ, ಹೆಚ್ಚುವರಿ ಪೊಲೀಸರನ್ನು ನೇಮಿಸಲಾಯಿತು. ಜೊತೆಗೆ ವಿಮಾನ ಸಂಚಾರ ಸೇರಿದಂತೆ ಇತರೆ ವಿದ್ಯುತ್ ಆಧರಿತ ಸೇವೆಗಳಲ್ಲೂ ವ್ಯತ್ಯಯ ಉಂಟಾಯಿತು.
ಇನ್ನೊಂದೆಡೆ ಸ್ಪೇನ್ ರಾಜಧಾನಿ ಬಾರ್ಸಿಲೋನಾದಿಂದ 50 ಕಿ.ಮಿ. ದೂರದಲ್ಲಿದ್ದ ಜನರೇಟರ್ ಕಾರ್ಖಾನೆಯಲ್ಲಿ ಭಾರಿ ಬೇಡಿಕೆ ಉಂಟಾಗಿ ಕೆಲವೇ ಸಮಯದಲ್ಲಿ ಜನರೇಟರ್‌ಗಳು ಖಾಲಿಯಾಯಿತು. ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿದ್ದ ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯವನ್ನು ಅರ್ಧದಲ್ಲಿಯೇ ನಿಲ್ಲಿಸಲಾಯಿತು. ಟವರ್‌ಗಳಿಗೆ ವಿದ್ಯುತ್ ಶಕ್ತಿ ಇಲ್ಲದ ಕಾರಣ ನೆಟ್‌ವರ್ಕ್‌ಗಳು ಸಿಗದೆ, ದೂರವಾಣಿ ಸಂಪರ್ಕ ಸ್ಥಗಿತಗೊಂಡಿತು. ಎಟಿಎಂಗಳು ಕೆಲಸ ನಿಲ್ಲಿಸಿದವು. ಸ್ಪೇನ್‌ನಲ್ಲಿ 4 ಕೋಟಿಗೂ ಅಧಿಕ, ಪೋರ್ಚುಗಲ್‌ನಲ್ಲಿ 1 ಕೋಟಿಗೂ ಅಧಿಕ ಜನರು ಪರದಾಡುವಂತಾಯಿತು. ಫ್ರಾನ್ಸ್‌ನ ಕೆಲ ಭಾಗಗಳಲ್ಲಿಯೂ ವಿದ್ಯುತ್ ಸಮಸ್ಯೆಗಳಾಯಿತು.
ಸರಿಪಡಿಸಲು 6-10 ತಾಸು ಬೇಕು:
ವಿದ್ಯುತ್ ಕಡಿತದ ಬಗ್ಗೆ ಸ್ಪೇನ್‌ನ ವಿದ್ಯುತ್ ಕಂಪನಿ ರೆಡ್ ಎಲೆಕ್ಟ್ರಿಕಾ ಪ್ರತಿಕ್ರಿಯಸಿ, ‘ಸಮಸ್ಯೆ ಸರಿಪಡಿಸಲು ಇನ್ನು 6-10 ತಾಸುಗಳು ಬೇಕು. ಅನಿರೀಕ್ಷಿತ ಸಮಸ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ’ ಎಂದು ಹೇಳಿದೆ. ಪೋರ್ಚುಗಲ್‌ನ ಇ-ರೆಡಿಸ್ ‘ಸಮಸ್ಯೆಗೆ ಯೂರೋಪಿಯನ್ ವ್ಯವಸ್ಥೆಯಲ್ಲಿನ ಸಮಸ್ಯೆ ಕಾರಣವಿರಬಹುದು’ ಎಂದಿದೆ.
- ಎರಡೂ ದೇಶಗಳಲ್ಲಿ ಕಾರ್ಗತ್ತಲು । 5 ಕೋಟಿ ಜನರ ಪರದಾಟ- ಕಂಡುಕೇಳರಿಯದ ಸಮಸ್ಯೆಯಿಂದ ನಾಗರಿಕರು ಕಂಗಾಲು--
- ಸ್ಪೇನ್, ಪೋರ್ಚುಗಲ್ ದೇಶಗಳು, ಫ್ರಾನ್ಸ್‌ನ ಕೆಲವು ಭಾಗಗಳಿಗೆ ಐರೋಪ್ಯ ಗ್ರಿಡ್‌ನಿಂದ ವಿದ್ಯುತ್ ಪೂರೈಕೆ- ಸೋಮವಾರ ದಿಢೀರನೆ ವಿದ್ಯುತ್ ಪೂರೈಕೆಯೇ ಸ್ಥಗಿತ. ಮೆಟ್ರೋ, ರೈಲು, ಸಬ್‌ವೇಯಲ್ಲಿ ಜನರು ಲಾಕ್
- ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿದ್ದ ಟೆನಿಸ್ ಪಂದ್ಯ ಅರ್ಧದಲ್ಲೇ ರದ್ದು. ಫೋನ್ ಸಂಪರ್ಕಗಳು ಕಡಿತವಾಗಿ ಸಮಸ್ಯೆ- ಟ್ರಾಫಿಕ್ ಸಿಗ್ನಲ್‌ಗಳು ಆಫ್ ಆಗಿದ್ದರಿಂದ ಸಂಚಾರ ದಟ್ಟಣೆ. ವಿಮಾನಗಳ ಕಾರ್ಯನಿರ್ವಹಣೆಗೂ ತೊಡಕು
- ಸ್ಪೇನ್‌ನ 4 ಕೋಟಿ, ಪೋರ್ಚುಗಲ್‌ನ 1 ಕೋಟಿ ಜನರು ವಿದ್ಯುತ್ ಇಲ್ಲದೆ ಗಾಡಾಂಧಕಾರದಲ್ಲಿ ಜೀವನ- ಸಮಸ್ಯೆ ಸರಿಪಡಿಸಲು ಕನಿಷ್ಠ 6ರಿಂದ 10 ತಾಸು ಬೇಕು ಎಂದ ಅಧಿಕಾರಿಗಳು. ಕತ್ತಲಲ್ಲಿ ಮುಳುಗಿದ ದೇಶಗಳು
- ಫ್ರಾನ್ಸ್‌ನ ಹಲವು ಭಾಗಗಳಲ್ಲೂ ತೀವ್ರ ವಿದ್ಯುತ್ ವ್ಯತ್ಯಯ
- 3 ದೇಶಗಳ 5 ಕೋಟಿ ಜನರಿಗೆ ಕಂಡು ಕೇಳರಿಯದ ಸಂಕಷ್ಟ--
ಆಗಿದ್ದೇನು?
- ಭಾರಿ ಬೇಡಿಕೆ ಕಾರಣ ಸ್ಪೇನ್‌ನ ಬಾರ್ಸಿಲೋನಾ ವಿದ್ಯುತ್ ಘಟಕ ಸ್ತಬ್ಧ
- ಇದರಿಂದ ಸ್ಪೇನ್ ಹಾಗೂ ಪಕ್ಕದ ಪೋರ್ಚುಗಲ್‌ನಲ್ಲಿ ವಿದ್ಯುತ್ ಸ್ಥಗಿತ
- ಫ್ರಾನ್ಸ್‌ನ ಹಲವು ಭಾಗಗಳಲ್ಲೂ ಇದೇ ವೇಳೆ ಭಾರಿ ವಿದ್ಯುತ್ ಕಡಿತ
- ಈ ದೇಶಗಳ ಸಬ್‌ವೇ, ಟ್ರಾಫಿಕ್ ಲೈಟ್ ಬಂದ್, ವಿಮಾನ ವ್ಯತ್ಯಯ
- ವಿದ್ಯುತ್ ಪೂರೈಕೆ ಮರುಕಳಿಸಲು 6ರಿಂದ 10 ಗಂಟೆ ಬೇಕು: ಸ್ಪೇನ್