ನಮಗೆ ಕೆಲಸ ಕಲಿಸಿ ಬಳಿಕ ತವರಿಗೆ ಮರಳಿ: ಅಮೆರಿಕ

| N/A | Published : Nov 14 2025, 07:11 AM IST

America

ಸಾರಾಂಶ

ವಿದೇಶಗಳ ಕೌಶಲಯುತ ನೌಕರರು ಅಮೆರಿಕಕ್ಕೆ ಬಂದು, ಅಮೆರಿಕನ್ನರಿಗೆ ತರಬೇತಿ ನೀಡಿ ತಮ್ಮ ದೇಶಕ್ಕೆ ಹಿಂದಿರುಗಬೇಕು. ಅಮೆರಿಕನ್ನರ ಉದ್ಯೋಗಗಳನ್ನು ಅವರು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್ ಹೇಳಿಕೆ ನೀಡಿದ್ದಾರೆ

ವಾಷಿಂಗ್ಟನ್‌: ‘ವಿದೇಶಗಳ ಕೌಶಲಯುತ ನೌಕರರು ಅಮೆರಿಕಕ್ಕೆ ಬಂದು, ಅಮೆರಿಕನ್ನರಿಗೆ ತರಬೇತಿ ನೀಡಿ ತಮ್ಮ ದೇಶಕ್ಕೆ ಹಿಂದಿರುಗಬೇಕು. ಅಮೆರಿಕನ್ನರ ಉದ್ಯೋಗಗಳನ್ನು ಅವರು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್ ಹೇಳಿಕೆ ನೀಡಿದ್ದಾರೆ.

3,5 ಅಥವಾ 7 ವರ್ಷಗಳ ಕಾಲ ಇರಬಹುದು

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಟ್ರಂಪ್‌ ದೂರದೃಷ್ಟಿಯಂತೆ, ವಿದೇಶಗಳ ಕೌಶಲ್ಯಯುತ ನೌಕರರು ಅಮೆರಿಕಕ್ಕೆ ಬಂದು ಇಲ್ಲಿ 3,5 ಅಥವಾ 7 ವರ್ಷಗಳ ಕಾಲ ಇರಬಹುದು. ಆದರೆ ಈ ಅವಧಿಯಲ್ಲಿ ಅಮೆರಿಕನ್ನರೇ ಆ ಕೆಲಸಗಳನ್ನು ನಿರ್ವಹಿಸುವಂತೆ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಆ ಬಳಿಕ ತಮ್ಮ ದೇಶಕ್ಕೆ ಹಿಂದಿರುಗಬೇಕು. ಸದ್ಯಕ್ಕೆ ಉನ್ನತ ಹುದ್ದೆಗಳನ್ನು ನಿಭಾಯಿಸುವ ಸಾಮರ್ಥ್ಯ ಅಮೆರಿಕನ್ನರಲ್ಲಿಲ್ಲ. ಹಾಗಾಗಿ ಎಚ್‌-1ಬಿ ವೀಸಾ ಸುಧಾರಣೆಗೆ ಮುಂದಾಗಿದ್ದೇವೆ’ ಎಂದಿದ್ದಾರೆ.

ನಮ್ಮಲ್ಲಿ ಸದ್ಯಕ್ಕೆ ಪ್ರತಿಭೆಗಳಿಲ್ಲ

ಇತ್ತೀಚೆಗೆ ಇದೇ ವಿಚಾರವಾಗಿ ಮಾತಾಡಿದ್ದ ಟ್ರಂಪ್‌, ‘ನಮ್ಮಲ್ಲಿ ಸದ್ಯಕ್ಕೆ ಪ್ರತಿಭೆಗಳಿಲ್ಲ. ವಿದೇಶಗಳಿಂದ ಅವರನ್ನು ಕರೆತಂದು ಅವರಿಂದ ಅಮೆರಿಕನ್ನರಿಗೆ ತರಬೇತಿ ಕೊಡಿಸಬೇಕು’ ಎಂದಿದ್ದರು.

Read more Articles on