ಒಂದು ವೇಳೆ ಇರಾನ್‌ ಜತೆಗೆ ಮತ್ತೆ ಯುದ್ಧ ಆರಂಭವಾದರೆ ‘ಮದರ್‌ ಆಫ್‌ ಆಲ್‌ ಬಾಂಬ್ಸ್‌’ ಎಂದೇ ಕರೆಯಲ್ಪಡುವ, ಅಮೆರಿಕದ ಬತ್ತಳಿಕೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳಲ್ಲೊಂದಾದ ‘ಜಿಬಿಯು-43/ಬಿ ಮ್ಯಾಸಿವ್‌ ಆರ್ಡಿನೆನ್ಸ್‌ ಏರ್‌ಬ್ಲಾಸ್ಟ್‌’ ಬಾಂಬ್‌ ಅನ್ನು ಪ್ರಯೋಗಿಸುವ ಕುರಿತು ಅಮೆರಿಕ ಸೇನೆ ಗಂಭೀರವಾಗಿ ಚಿಂತಿಸುತ್ತಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್‌: ಒಂದು ವೇಳೆ ಇರಾನ್‌ ಜತೆಗೆ ಮತ್ತೆ ಯುದ್ಧ ಆರಂಭವಾದರೆ ‘ಮದರ್‌ ಆಫ್‌ ಆಲ್‌ ಬಾಂಬ್ಸ್‌’ (ಎಲ್ಲ ಬಾಂಬ್‌ಗಳ ತಾಯಿ) ಎಂದೇ ಕರೆಯಲ್ಪಡುವ, ಅಮೆರಿಕದ ಬತ್ತಳಿಕೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳಲ್ಲೊಂದಾದ ‘ಜಿಬಿಯು-43/ಬಿ ಮ್ಯಾಸಿವ್‌ ಆರ್ಡಿನೆನ್ಸ್‌ ಏರ್‌ಬ್ಲಾಸ್ಟ್‌’ (ಎಂಎಬಿ ) ಬಾಂಬ್‌ ಅನ್ನು ಪ್ರಯೋಗಿಸುವ ಕುರಿತು ಅಮೆರಿಕ ಸೇನೆ ಗಂಭೀರವಾಗಿ ಚಿಂತಿಸುತ್ತಿದೆ ಎಂದು ವರದಿಯಾಗಿದೆ.

ನ.3ರ ಮಧ್ಯಂತರ ಚುನಾವಣೆಗೂ ಮೊದಲು ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವುದಿಲ್ಲ

ನ.3ರ ಮಧ್ಯಂತರ ಚುನಾವಣೆಗೂ ಮೊದಲು ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅ.8ರಂದು ತಿಳಿಸಿದ್ದರು. ಆದರೆ ಸೌದಿ ಅರೇಬಿಯಾ ಮೇಲೆ ಇರಾನ್‌ ಬೆಂಬಲಿತ ಹೌತಿ ಬಂಡುಕೊರರು ನಡೆಸುತ್ತಿರುವ ತೀವ್ರ ದಾಳಿ ಸಂಘರ್ಷ ಉಲ್ಬಣಿಸುವಂತೆ ಮಾಡಿದೆ. ಹೀಗಾಗಿ ಮದರ್ ಆಫ್‌ ಆಲ್‌ ಬಾಂಬ್ಸ್‌ ಕುರಿತ ವರದಿ ಗಮನ ಸೆಳೆದಿದೆ.

ಏನಿದು ಮದರ್ ಆಫ್‌ ಆಲ್‌ ಬಾಂಬ್ಸ್‌?:

ಸುಮಾರು 21,600 ಪೌಂಡ್‌ಗಳಷ್ಟು (9.8 ಟನ್) ತೂಕವಿರುವ ಈ ಜಿಪಿಎಸ್-ಮಾರ್ಗದರ್ಶಿತ ಬೃಹತ್ ಬಾಂಬ್, ನೆಲಕ್ಕೆ ಅಪ್ಪಳಿಸುವ ಮುನ್ನವೇ ಗಾಳಿಯಲ್ಲಿಯೇ ಸ್ಫೋಟಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಭೀಕರ ಸ್ಫೋಟವು ಸುಮಾರು 9 ನಗರಗಳಷ್ಟು ವಿಸ್ತೀರ್ಣದ ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬಲ್ಲದು. ಈ ಹಿಂದೆ 2017ರಲ್ಲಿ, ಟ್ರಂಪ್ ಅವರ ಹಿಂದಿನ ಆಡಳಿತಾವಧಿಯಲ್ಲಿ ಅಫ್ಘಾನಿಸ್ತಾನದ ಉಗ್ರರ ಸುರಂಗ ನೆಲೆಗಳ ಮೇಲೆ ಇದನ್ನು ಮೊದಲ ಬಾರಿಗೆ ಪ್ರಯೋಗಿಸಲಾಗಿತ್ತು.