ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯ
Nov 05 2025, 12:15 AM ISTನಾನು ಮೂರು ಬಾರಿ ಶಾಸಕನಾಗಿ ವಿರೋಧಪಕ್ಷದ ಸಾಲಿನಲ್ಲಿ ಕುಳಿತಿದ್ದರೂ ಸಹ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಭಾಗದ ಜನರು ಹಿಂದಿನಿಂದಲೂ ನಮ್ಮನ್ನು ಹಾಗೂ ಜೆಡಿಎಸ್ ಪಕ್ಷವನ್ನು ಪ್ರೀತಿಯಿಂದ ಪೋಷಿಸಿದ್ದೀರಿ, ಮುಂದೆಯೂ ನಮ್ಮ ಪಕ್ಷದ ಜೊತೆ ಕೈಜೋಡಿಸಬೇಕು ಎಂದರಲ್ಲದೆ, ಡೇರಿಗಳಲ್ಲಿ ರಾಜಕೀಯಕ್ಕೆ ಅವಕಾಶ ಕಲ್ಪಿಸದೆ ಡೇರಿ ದೇವಾಲಯ ಎಂದು ಭಾವಿಸಿದರೆ ಡೇರಿಯಲ್ಲಿ ಯಾವುದೇ ಅವ್ಯವಹಾರ ನಡೆಯುವುದಿಲ್ಲ, ಅದೇರೀತಿ ಸರ್ಕಾರ ಮಾಡದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ದೇವಸ್ಥಾನ ನಿರ್ಮಾಣ, ಬಡವರಿಗೆ ಮನೆ ನಿರ್ಮಾಣ, ಕೆರೆ ಅಭಿವೃದ್ಧಿ ಹೀಗೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಜನರ ಒಳಿತಿಗಾಗಿ ದುಡಿಯುತ್ತಿದೆ ಎಂದರು.