ಕನಸಾಗಿ ಉಳಿದ ಬಬ್ಬುಕುದ್ರು ಪ್ರವಾಸಿ ತಾಣ ಅಭಿವೃದ್ಧಿ ಕೂಗು
Mar 18 2025, 12:30 AM ISTಈ ಕುದ್ರುವಿನಿಂದ ಕುಂದಾಪುರದ ಕಡೆ ಇರುವ ಸುಮಾರು 500 ಮೀಟರ್ ಅಗಲದ ನದಿಯ ಸುಮಾರು 1500 ಮೀ. ವಿಸ್ತಾರದ ಪ್ರದೇಶ ಸಂಪೂರ್ಣ ಹೂಳು ತುಂಬಿ ಹೋಗಿದೆ. ಭರತ (ನೀರು ಉಕ್ಕೇರುವ) ಸಂದರ್ಭದಲ್ಲಿ ನದಿಯಲ್ಲಿ ಒಂದಡಿಯಷ್ಟು ನೀರು ಕಂಡರೂ, ಇಳಿತದ ಸಮಯದಲ್ಲಿ ಈ ಪ್ರದೇಶ ಮರುಭೂಮಿಯ ಓಯಸಿಸ್ನಂತೆ ಕಾಣುತ್ತದೆ. ಲಕ್ಷ ಲೋಡ್ ಮರಳು ತೆಗೆದರೂ ಇನ್ನಷ್ಟು ಇದೆ, ಎಂಬಷ್ಟು ಮರಳು ದಿಬ್ಬಗಳಿದ್ದು, ಅದರ ಮೇಲೆ ಗಿಡಗಳು ಬೆಳೆದು ಕಾಡುಗಳಾಗಿವೆ.