ಹಾಸನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಚುರುಕು
Oct 26 2025, 02:00 AM ISTಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವು ಹಾಸನ ಜಿಲ್ಲೆಯ ಬಹು ನಿರೀಕ್ಷಿತ ಯೋಜನೆ. ಈ ಆಸ್ಪತ್ರೆ ಕಾರ್ಯ ನಿಂತುಹೋಗಿದ್ದರೂ ಈಗ ಎಲ್ಲಾ ಅಡಚಣೆಗಳು ನಿವಾರಣೆಯಾಗಿವೆ. ಶೀಘ್ರದಲ್ಲೇ ಹೊಸ ಟೆಂಡರ್ ಕರೆಯಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲಿದೆ. ಹಿಂದಿನ ಕಾಮಗಾರಿಗೆ ಬಿಲ್‌ಗಳು ಪಾವತಿಯಾಗದ ವಿಚಾರ ನನ್ನ ಗಮನಕ್ಕೆ ಬಂದಿದೆ. ಲೋಕಸಭಾ ಸದಸ್ಯರ ಮನವಿಯ ಮೇರೆಗೆ ತನಿಖೆ ನಡೆಸಿ, ವಿಷಯವನ್ನು ಸಚಿವ ಸಂಪುಟದ ಅನುಮೋದನೆಗೆ ತರಲಾಗಿದೆ. ಅದು ಈಗ ಪ್ರಕ್ರಿಯೆಯಲ್ಲಿದೆ. ಮುಂದಿನ ಹಂತದಲ್ಲಿ ಸ್ಥಳ ಪರಿಶೀಲನೆ ನಡೆಸಿ ಉಳಿದ ಕಾಮಗಾರಿಗಳ ಪಟ್ಟಿಯನ್ನು ತಯಾರು ಮಾಡಲಾಗುವುದು ಎಂದರು.