ಗೃಹ ಸಚಿವ ಪರಮೇಶ್ವರ್ ತಪ್ಪು ಮಾಡುವಂತವರಲ್ಲ
May 25 2025, 11:48 PM ISTಗೃಹ ಸಚಿವ ಡಾ. ಜಿ ಪರಮೇಶ್ವರ್ ಸಜ್ಜನ ರಾಜಕಾರಣಿಯಾಗಿದ್ದು ಅವರ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಅವರು ಯಾವುದೇ ತಪ್ಪುಗಳನ್ನು ಮಾಡುವಂತವರಲ್ಲ ಎಂದು ರಾಜ್ಯ ಸರ್ಕಾರದ ಪರಿಸರ ಇಲಾಖೆ ರಾಯಭಾರಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಹೇಳಿದರು. ಎಲ್ಲಿ ಉನ್ನತ ಹುದ್ದೆಗೆ ಹೋಗುತ್ತಾರೋ ಎಂಬ ಕಾರಣದಿಂದ ಕೆಲವರು ವಾಮಮಾರ್ಗಗಳನ್ನು ಹುಡುಕುವ ಮೂಲಕ ಅವರ ತೇಜೋವಧೆ ಮಾಡುತ್ತಿರುವ ಬಗ್ಗೆ ಶಂಕೆ ಇದ್ದು, ಮುಂದಿನ ದಿನಗಳಲ್ಲಿ ಕಿಡಿಗೇಡಿಗಳು ತಾವು ಮಾಡಿದ ಕರ್ಮದ ಫಲವನ್ನು ಅವರೇ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.