ತಹಸೀಲ್ದಾರ್ ಭ್ರಷ್ಟಾಚಾರ ಖಂಡಿಸಿ ಚನ್ನರಾಯಪಟ್ಟಣದಲ್ಲಿ ಪ್ರತಿಭಟನೆ
Apr 28 2025, 11:49 PM ISTಆಡಿಯೋ ಒಂದರಲ್ಲಿ ತಹಸೀಲ್ದಾರ್ ಅವರು ೧೦೦ ಕೋಟಿ ರು. ಹಣ ಮಾಡಿಕೊಂಡು ನಿವೃತ್ತಿ ಹೊಂದುವ ಬಗ್ಗೆ ಮಾತನಾಡಿದ್ದಾರೆ. ಇದು ನಮಗೆ ಆತಂಕ ತಂದಿದೆ. ತಾಲೂಕು ದಂಡಾಧಿಕಾರಿಗಳೇ ಈ ರೀತಿ ಹೇಳಿದರೆ ಹೇಗೆ? ಭ್ರಷ್ಟಾಚಾರದ ಆಳ, ಉದ್ದ ಅಳತೆ ಮಾಡಲಾಗುತ್ತಿಲ್ಲ, ನಮಗೆ ನ್ಯಾಯ ಸಿಗುವುದಾದರೂ ಹೇಗೆ, ಜಿಲ್ಲಾಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಂಡು ಇಲ್ಲಿಂದ ಎತ್ತಂಗಡಿ ಮಾಡಬೇಕು. ತಹಸೀಲ್ದಾರ್ ಹಠಾವು ಚನ್ನರಾಯಪಟ್ಟಣ ಬಚಾವೋ ಕಾರ್ಯಕ್ರಮ ನಮ್ಮದಾಗಿದೆ. ತಾಲೂಕು ಆಡಳಿತವನ್ನು ಸರಿದಾರಿಗೆ ತರುವುದು ಜನಪ್ರತಿನಿಧಿಗಳ ಕರ್ತವ್ಯ, ಈ ನಿಟ್ಟಿನಲ್ಲಿ ಅವರು ಸೋತಿದ್ದಾರೆ ಎಂಬ ಮಾತುಗಳನ್ನಾಡಿದರು.