ಅಗ್ನಿಶಾಮಕ ಸಿಬ್ಬಂದಿಯಿಂದ ವಸೂಲಿ: ಆರೋಪ
Nov 17 2023, 06:45 PM ISTಕುರುಗೋಡಿನ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುವ ಎಂ. ಪ್ರಭಾಕರ ಸ್ವಾಮಿ ಎಂಬ ಫೈರ್‌ಮ್ಯಾನ್ ವಸೂಲಿ ಮಾಡಿದ್ದಾನೆ ಎಂದು ಹೇಳಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಭಾಕರ ಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯಅಗ್ನಿಶಾಮಕ ಮತ್ತು ತುರ್ತು ಸೇವೆಯ ಹಿರಿಯ ಅಧಿಕಾರಿಗಳಿಗೆ ಇಲಾಖೆಯ ವಾಹನದ ಚಾಲಕ ಶಾಂತಪ್ಪ ಹಾಗೂ ಸಾರ್ವಜನಿಕರು ಪತ್ರ ಬರೆದಿದ್ದಾರೆ.