ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸಲು ಕರ್ನಾಟಕ ಒಲಿಂಪಿಕ್ಸ್ನಲ್ಲಿ ಕೈಜೋಡಿಸಿದ ಮಾಹೆ
Jan 26 2025, 01:33 AM ISTಮಾಹೆಯ ಕ್ರೀಡಾ ಮಂಡಳಿಯು ಈ ಪಂದ್ಯಾಟ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮಾಹೆಯ ಎಂಡ್ ಪಾಯಿಂಟ್ ಮೈದಾನದಲ್ಲಿ ಹಾಕಿ ಪಂದ್ಯಗಳನ್ನು ಹಾಗೂ ಅತ್ಯಾಧುನಿಕ ಮರೀನಾ ಕ್ರೀಡಾ ಸಂಕೀರ್ಣದಲ್ಲಿ ಟೆನ್ನಿಸ್ ಮತ್ತು ಟೇಬಲ್ ಟೆನ್ನಿಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಾಹೆಯು ತನ್ನ ಹಾಸ್ಟೆಲ್ಗಳಲ್ಲಿ 700 ಕ್ರೀಡಾಪಟುಗಳಿಗೆ ವಸತಿ ಸೌಕರ್ಯವನ್ನು ಒದಗಿಸಿತ್ತು, ಸ್ಪರ್ಧೆಯ ಉದ್ದಕ್ಕೂ ಅವರಿಗೆ ಆರಾಮದಾಯಕ ಮತ್ತು ಸುರಕ್ಷಿತ ವ್ಯವಸ್ಥೆಗಳನ್ನು ಒದಗಿಸಿತ್ತು.