ಕಾಂಗ್ರೆಸ್ ಕಾರ್ಯಕರ್ತರಿಂದ ನೀರು, ಕಲ್ಲಂಗಡಿ, ಮಜ್ಜಿಗೆ ಹಂಚಿಕೆ..!
Apr 02 2024, 01:05 AM ISTಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಆಗಮಿಸುವ ಸಮಯದಲ್ಲಿ ಬಿಸಿಲ ಝಳಕ್ಕೆ ಜನರು ತತ್ತರಿಸದಂತೆ ಅಲ್ಲಲ್ಲಿ ನೀರು, ಕಲ್ಲಂಗಡಿ, ಮಜ್ಜಿಗೆ ಹಂಚಿಕೆ ಮಾಡಲಾಯಿತು. ಮಿನಿ ಟೆಂಪೋಗಳಲ್ಲಿ ಮಜ್ಜಿಗೆ, ನೀರಿನ ಬಾಟಲಿಗಳನ್ನಿಟ್ಟುಕೊಂಡು ಕೇಳಿದವರಿಗೆಲ್ಲಾ ನೀಡುತ್ತಾ ದಾಹ ತಣಿಸುತ್ತಿದ್ದರು.